ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ರಾವಲ್ಪಿಂಡಿ ಚಿಕನ್ ಟಿಕ್ಕಾ ಟು ಬಾಲಾಕೋಟ್ ತಿರಮಿಸು- ವಾಯುಪಡೆಯ ಮೆನು ಫುಲ್‌ ವೈರಲ್

Air Force dinner menu goes viral: ಭಾರತೀಯ ವಾಯುಪಡೆಯು 93ನೇ ವಾರ್ಷಿಕೋತ್ಸವವನ್ನು ಆಚರಿಸಿದೆ. ಈ ವೇಳೆ ವಾಯುಪಡೆಯ ಭೋಜನ ಮೆನುವಿನ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿದೆ. ಆಪರೇಷನ್ ಸಿಂಧೂರ್ ದಾಳಿಯ ಸಮಯದಲ್ಲಿ ವಾಯುಪಡೆಯು ಗುರಿಯಾಗಿಸಿಕೊಂಡ ಪ್ರದೇಶಗಳ ಹೆಸರನ್ನು ಪ್ರತಿಯೊಂದು ಖಾದ್ಯಕ್ಕೂ ಇಡಲಾಗಿದೆ.

ವಾಯುಪಡೆಯ ಮೆನುವಿನಲ್ಲಿ ಏನೇನಿದೆ ಗೊತ್ತಾ?

-

Priyanka P Priyanka P Oct 9, 2025 4:39 PM

ನವದೆಹಲಿ: ಭಾರತೀಯ ವಾಯುಪಡೆಯ (Air Force) 93ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೀಡಲಾದ ಭೋಜನ ಮೆನುವೊಂದು ವೈರಲ್ ಆಗಿದೆ. ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಛಾಯಾಚಿತ್ರದ ಮೆನುವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ವೈರಲ್ (Viral News) ಆಗಿದೆ. ಅಷ್ಟಕ್ಕೂ ಆ ಮೆನುವಿನಲ್ಲಿ ಏನು ವಿಶೇಷವಿದೆ ಅಂತೀರಾ? ಇಲ್ಲಿ ಓದಿ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗಿನ ಒಂಭತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿತ್ತು. ಮೇ 7 ರಂದು ಪ್ರಾರಂಭಿಸಲಾದ ಆಪರೇಷನ್ ಸಿಂಧೂರ್ ದಾಳಿಯ ಸಮಯದಲ್ಲಿ ವಾಯುಪಡೆಯು ಗುರಿಯಾಗಿಸಿಕೊಂಡ ನಗರ ಅಥವಾ ಸ್ಥಳದ ಹೆಸರನ್ನು ಪ್ರತಿಯೊಂದು ಖಾದ್ಯಕ್ಕೂ ಇಡಲಾಗಿದೆ.

IAF ಮೆನು ಹೀಗಿದೆ:

  • ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾ
  • ರಫೀಕಿ ರಾಹರ ಮಟನ್
  • ಭೋಲಾರಿ ಪನೀರ್
  • ಮೇಥಿ ಮಲೈ ಸುಕ್ಕುರ್ ಶಾಮ್ ಸವೇರಾ ಕೋಫ್ತಾ
  • ಸರ್ಗೋಧ ದಲ್ ಮಖಾನಿ
  • ಜಾಕೋಬಾಬಾದ್ ಮೇವಾ ಪುಲಾವ್
  • ಬಹವಲ್ಪುರ್ ನಾನ್

ಡೆಸರ್ಟ್ಸ್

  • ಬಾಲಾಕೋಟ್ ತಿರಮಿಸು
  • ಮುಜಾಫರಾಬಾದ್ ಕುಲ್ಫಿ ಫಲೂದಾ
  • ಮುರಿಡ್ಕೆ ಮೀಠಾ ಪನ್

ರಾವಲ್ಪಿಂಡಿ, ಬಾಲಕೋಟ್, ಬಹವಾಲ್ಪುರ್, ಮುಜಫರಾಬಾದ್, ಮುರಿಡ್ಕೆ - ಈ ಪ್ರತಿಯೊಂದು ಹೆಸರುಗಳು ಆಪರೇಷನ್ ಸಿಂಧೂರ್ ಸಮಯದಲ್ಲಿ ಗುರಿಯಾಗಿಸಿಕೊಂಡ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನಗರಗಳಲ್ಲಿ ಸೇರಿವೆ. ಅಧಿಕೃತವಾಗಿ ದೃಢೀಕರಿಸದಿದ್ದರೂ, ಇದು ಅಕ್ಟೋಬರ್ 8, 1932 ರಂದು ವಾಯುಪಡೆಯ ರಚನೆಯ ವಾರ್ಷಿಕ ಆಚರಣೆಯೊಂದಿಗೆ ಹೊಂದಿಕೆಯಾಯಿತು.

ಇದನ್ನೂ ಓದಿ: Viral Video: ಚಲಿಸುವ ರೈಲಿನಲ್ಲಿ ಮೋಜು ಮಾಡಲು ಹೋಗಿ ಕೆಳಗೆ ಬಿದ್ದ ಯುವತಿ; ಈ ವಿಡಿಯೊ ನಿಜವೋ, ನಕಲಿಯೊ?

ಆಪರೇಷನ್ ಸಿಂಧೂರ್ ಗುರಿಗಳು

  • ಮರ್ಕಜ್ ಸುಭಾನ್ ಅಲ್ಲಾ, ಬಹವಾಲ್ಪುರ್ - ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪಿನ ಸೈದ್ಧಾಂತಿಕ ಮತ್ತು ಕಾರ್ಯಾಚರಣೆಯ ಕೇಂದ್ರ.
  • ಮರ್ಕಜ್ ತೈಬಾ, ಮುರಿಡ್ಕೆ - 200 ಎಕರೆ ವಿಸ್ತೀರ್ಣದ ಲಷ್ಕರ್-ಎ-ತೈಬಾ ಸಂಯುಕ್ತ, ಕಾರ್ಯಾಚರಣೆಯಲ್ಲಿ ದಾಳಿಗೊಳಗಾದ ಅತ್ಯಂತ ಭದ್ರವಾದ ಸ್ಥಳಗಳಲ್ಲಿ ಒಂದಾಗಿದೆ.
  • ಮರ್ಕಜ್ ಅಬ್ಬಾಸ್, ಕೋಟ್ಲಿ - ಪ್ರಮುಖ ಜೆಇಎಂ ತರಬೇತಿ ಮತ್ತು ಶಸ್ತ್ರಾಸ್ತ್ರ ವಿತರಣಾ ಶಿಬಿರ.
  • ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಮತ್ತು ಶವಾಯಿ ನಲ್ಲ ಶಿಬಿರಗಳು - ಸ್ಲೀಪರ್ ಸೆಲ್‌ಗಳು ಬಳಸುವ ಒಳನುಸುಳುವಿಕೆ ಕೇಂದ್ರಗಳು.
  • ಮರ್ಕಜ್ ಅಹ್ಲೆ ಹದೀಸ್, ಬರ್ನಾಲಾ - ಎಲ್‌ಇಟಿ ಕಾರ್ಯಕರ್ತರಿಗೆ ಪ್ರಾದೇಶಿಕ ಲಾಜಿಸ್ಟಿಕ್ಸ್ ಕೇಂದ್ರ.
  • ಪಿಒಕೆಯಲ್ಲಿರುವ ಸರ್ಜಲ್ ಮತ್ತು ತೆಹ್ರಾ ಕಲಾನ್ - ಹೊಸದಾಗಿ ನೇಮಕಗೊಂಡ ಭಯೋತ್ಪಾದಕರಿಗೆ ಒಳನುಸುಳುವಿಕೆಯ ಪೂರ್ವ ಶಿಬಿರಗಳು.

ವಾಯುಪಡೆ ದಿನ

93ನೇ ವಾಯುಪಡೆ ದಿನಾಚರಣೆಯಲ್ಲಿ, ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಆಪರೇಷನ್ ಸಿಂಧೂರ್ ಅನ್ನು ರಾಷ್ಟ್ರಕ್ಕೆ ಅಗಾಧ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದರು. 1947 ರಿಂದ 2025 ರವರೆಗಿನ ದಶಕಗಳ ಯುದ್ಧದಲ್ಲಿ ಮೈಲಿಗಲ್ಲುಗಳನ್ನು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಸಿಂಗ್ ನೆನಪಿಸಿಕೊಂಡರು.

1947 ರಲ್ಲಿ, ನಾವು ಕಾಶ್ಮೀರವನ್ನು ರಕ್ಷಿಸಿದ್ದೇವೆ. 1965 ರಲ್ಲಿ, ನಾವು ಆಕಾಶದಿಂದ ದಾಳಿ ಮಾಡಿದ್ದೇವೆ. 1971 ರಲ್ಲಿ, ನಾವು ಹೊಸ ದೇಶದ ಸೃಷ್ಟಿಗೆ ಕೊಡುಗೆ ನೀಡಿದ್ದೇವೆ. 1999 ರಲ್ಲಿ, ನಾವು ಕಾರ್ಗಿಲ್‌ನಲ್ಲಿ ಧೈರ್ಯವನ್ನು ಪ್ರದರ್ಶಿಸಿದ್ದೇವೆ. 2019 ರಲ್ಲಿ, ನಾವು ಬಾಲಕೋಟ್‌ನಲ್ಲಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದೇವೆ. ಮತ್ತು ಈ ವರ್ಷ, ನಾವು ಕೇವಲ ನಾಲ್ಕು ದಿನಗಳಲ್ಲಿ ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಶತ್ರುಗಳ ಮೇಲೆ ಜಯ ಸಾಧಿಸಿದ್ದೇವೆ. ಭಾರತೀಯ ವಾಯುಪಡೆಯು ಪ್ರತಿ ಯುಗದಲ್ಲೂ ಸಾಮರ್ಥ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದೆ. ಈ ಮೂಲಕ ರಾಷ್ಟ್ರದ ವೈಭವವನ್ನು ಎತ್ತಿಹಿಡಿದಿದೆ ಎಂದು ಅವರು ಹೇಳಿದರು.