ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭದ್ರತಾ ಪಡೆಯಿಂದ ಭರ್ಜರಿ ಬೇಟೆ; ಐವರು ಮಹಿಳೆಯರು ಸೇರಿ 17 ಮಾವೋವಾದಿಗಳ ಹತ್ಯೆ

Maoists Killed: ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಭಾರಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಐವರು ಮಹಿಳೆಯರು ಸೇರಿದಂತೆ ಒಟ್ಟು 17 ಮಾವೋವಾದಿಗಳು ಹತರಾಗಿದ್ದಾರೆ. ಸರಾಂಡಾ ಅರಣ್ಯ ಪ್ರದೇಶದಲ್ಲಿ ನಡೆದ ತೀವ್ರ ಗುಂಡಿನ ಚಕಮಕಿಯ ಬಳಿಕ ಈ ಯಶಸ್ಸು ದೊರೆತಿದ್ದು, ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ದೊಡ್ಡ ಹಿನ್ನಡೆಯಾಗಿ ಪರಿಗಣಿಸಲಾಗಿದೆ.

ಐವರು ಮಹಿಳೆಯರು ಸೇರಿದಂತೆ 17 ಮಾವೋವಾದಿಗಳ ಹತ್ಯೆ

ಸಾಂದರ್ಭಿಕ ಚಿತ್ರ -

Priyanka P
Priyanka P Jan 24, 2026 1:30 PM

ರಾಂಚಿ: ಸಿಪಿಐ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿಯ ಉನ್ನತ ಪದಾಧಿಕಾರಿಯಾಗಿದ್ದ ಪಟಿರಾಮ್ ಮಾಝಿ ಅಲಿಯಾಸ್ ಅನಲ್ ದಾ ಎಂಬಾತನನ್ನು ಗುರುವಾರ ನಡೆದ ಮಹತ್ವದ ಸಂಯುಕ್ತ ನಕ್ಸಲ್ ವಿರೋಧಿ ಕಾರ್ಯಾಚರಣೆ (Anti-Naxal operation) ಮೇಘಬುರು ವೇಳೆ ಗುಂಡಿಕ್ಕಿ ಹತ್ಯೆ (Maoists Killed) ಮಾಡಲಾಗಿದೆ. ಜಾರ್ಖಂಡ್‍ನ (Jharkhand) ಚೈಬಾಸಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐವರು ಮಹಿಳೆಯರು ಸೇರಿದಂತೆ 17 ಮಾವೋವಾದಿಗಳ ಹತ್ಯೆಯಾಗಿದೆ. ಭದ್ರತಾ ಅಧಿಕಾರಿಗಳ ಪ್ರಕಾರ, ಈ ಎನ್‌ಕೌಂಟರ್‌ನಲ್ಲಿ ಅತ್ಯಂತ ಬೇಕಾಗಿದ್ದ ನಕ್ಸಲೈಟ್ ಮೃತಪಟ್ಟಿರುವುದು ದೃಢಪಟ್ಟಿದೆ.

ಗುರುವಾರ (ಜನವರಿ 22) ಸಾರಂಡಾ ಅರಣ್ಯದಲ್ಲಿ 209 ಕೋಬ್ರಾ ಪಡೆ, ಚೈಬಾಸಾ ಜಿಲ್ಲಾ ಪೊಲೀಸರು ಮತ್ತು ಜಾರ್ಖಂಡ್ ಜಾಗ್ವಾರ್ ಜಂಟಿಯಾಗಿ ಆಪರೇಷನ್ ಮೇಘಬುರು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಜಾರ್ಖಂಡ್‌ನಲ್ಲಿ ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದ್ದ ಪಟಿರಾಮ್ ಮಾಝಿ ಅಲಿಯಾಸ್ ಅನಲ್ ದಾ ಸೇರಿದಂತೆ ಒಟ್ಟು 14 ಮಾವೋವಾದಿಗಳು ಹತರಾಗಿದ್ದಾರೆ.

Naxal Encounter: 26 ಸಶಸ್ತ್ರ ದಾಳಿಗಳ ರೂವಾರಿ ನಕ್ಸಲ್‌ ಕಮಾಂಡರ್ ಮದ್ವಿ ಹಿಡ್ಮಾ ಎನ್‌ಕೌಂಟರ್‌

ಮೃತರು ಅನಲ್ ಕೇಂದ್ರ ಸಮಿತಿ ಸದಸ್ಯರಾಗಿದ್ದರು (CCM). ಇದು CPI (ಮಾವೋವಾದಿ) ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದ್ದು, ಜಾರ್ಖಂಡ್‌ನಲ್ಲಿ 149 ಪ್ರಕರಣಗಳನ್ನು ಹೊಂದಿದ್ದರು. ಶುಕ್ರವಾರ, ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಮಧ್ಯಂತರ ಗುಂಡಿನ ದಾಳಿ ಮುಂದುವರೆಯಿತು. ನಂತರ, ಇನ್ನೂ ಎರಡು ಶವಗಳನ್ನು ವಶಪಡಿಸಿಕೊಳ್ಳಲಾಯಿತು, ಒಟ್ಟು ಸಾವಿನ ಸಂಖ್ಯೆ 17 ಕ್ಕೆ ತಲುಪಿದೆ. ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ಒಂದು ದೊಡ್ಡ ಯಶಸ್ಸು ಎಂದು ಪರಿಗಣಿಸುತ್ತಿವೆ.

ಎರಡು ದಿನಗಳ ಕಾಲ ನಡೆದ ಎನ್‌ಕೌಂಟರ್ ಇದೀಗ ಅಂತ್ಯಗೊಂಡಿದೆ. ಆದರೆ, ಹಗಲು ವೇಳೆಯಲ್ಲಿ ಶೋಧ ಕಾರ್ಯಾಚರಣೆ ಮತ್ತೆ ಆರಂಭಿಸಲಾಗುತ್ತದೆ ಎಂದು ಕಿರಿಬೂರು ಎಸ್‌ಡಿಪಿಒ ಅಜಯ್ ಕೆರ್ಕೆಟ್ಟಾ ತಿಳಿಸಿದ್ದಾರೆ.

ಶುಕ್ರವಾರ ಚೈಬಾಸಾ ಜಿಲ್ಲೆಯ ಸರಾಂಡಾ ಅರಣ್ಯ ಪ್ರದೇಶದಲ್ಲಿ ಗುರುವಾರ ಆರಂಭಗೊಂಡಿದ್ದ ಎನ್‌ಕೌಂಟರ್ ಎರಡನೇ ದಿನಕ್ಕೂ ಮುಂದುವರಿದ ಸಂದರ್ಭದಲ್ಲಿ ಭದ್ರತಾ ಪಡೆಗಳು ಇನ್ನೊಬ್ಬ ನಕ್ಸಲೈಟ್‌ನ ಶವವನ್ನು ಪತ್ತೆಹಚ್ಚಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಜನವರಿಯಲ್ಲಿ ಬಸ್ತಾರ್ ವ್ಯಾಪ್ತಿಯ ಬೀಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ಮಾವೋವಾದಿಗಳು ಹತರಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಜನವರಿ 20ರಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಗರ ನಕ್ಸಲಿಸಂ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದ್ದರು.

IED Blast: ಮಾವೋವಾದಿ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಐಇಡಿ ಸ್ಫೋಟ; ಯೋಧ ಹುತಾತ್ಮ

ಇದಾದ ಬಳಿಕ ಒಟ್ಟು 47 ಲಕ್ಷ ರೂ. ಬಹುಮಾನ ಹೊಂದಿದ್ದ ಒಂಭತ್ತು ಮಾವೋವಾದಿಗಳು ಶಸ್ತ್ರಾಸ್ತ್ರಗಳು ಹಾಗೂ ಉಪಕರಣಗಳ ಸಂಗ್ರಹದೊಂದಿಗೆ ಛತ್ತೀಸ್‌ಗಢದಲ್ಲಿ ಶರಣಾಗಿದ್ದಾರೆ ಎಂದು ಒಡಿಶಾ ಪೊಲೀಸರು ಶುಕ್ರವಾರ (ಜನವರಿ 24) ತಿಳಿಸಿದ್ದಾರೆ. ಶರಣಾಗತಿಯ ನಂತರ, ಒಡಿಶಾದ ನವರಂಗಪುರ ಜಿಲ್ಲೆಯನ್ನು ನಕ್ಸಲ್ ಚಟುವಟಿಕೆಯಿಂದ ಮುಕ್ತಗೊಳಿಸಲಾಗಿದೆ ಎಂದು ಘೋಷಿಸಲಾಗಿದೆ.

ಶರಣಾದ ಮಾವೋವಾದಿಗಳಲ್ಲಿ ಧಮತರಿ-ಗರಿಯಾಬಂದ್-ನುವಾಪಾಡಾ ವಿಭಾಗದ ಒಡಿಶಾ ರಾಜ್ಯ ಸಮಿತಿಯ ನಾಗ್ರಿ ಪ್ರದೇಶ ಸಮಿತಿ, ಸಿತಾನದಿ ಪ್ರದೇಶ ಸಮಿತಿ ಮತ್ತು ಮೈನ್‌ಪುರ ಎಲ್‌ಜಿಎಸ್‌ನ ಪ್ರಮುಖ ನಾಯಕರು ಸೇರಿದ್ದಾರೆ. ಅವರು ಒಡಿಶಾದ ನವರಂಗಪುರ ಜಿಲ್ಲೆ ಮತ್ತು ಛತ್ತೀಸ್‌ಗಢದ ಧಮತರಿ ಜಿಲ್ಲೆಯಲ್ಲಿ ಸಿಪಿಐ (ಮಾವೋವಾದಿ) ಒಡಿಶಾ ರಾಜ್ಯ ಸಮಿತಿಯ ಅಡಿಯಲ್ಲಿ ಸಕ್ರಿಯರಾಗಿದ್ದರು.

ಶರಣಾದ ಕಾರ್ಯಕರ್ತರು ಎರಡು ಇನ್ಸಾಸ್ ರೈಫಲ್‌ಗಳು, ಎರಡು ಎಸ್‍ಎಲ್‍ಆರ್ ರೈಫಲ್‌ಗಳು, ಒಂದು ಕಾರ್ಬೈನ್, ಒಂದು ಭರ್ಮಾರ್ ಗನ್, ಮ್ಯಾಗಜೀನ್‌ಗಳು, ಮದ್ದುಗುಂಡುಗಳು ಮತ್ತು ರೇಡಿಯೋ ಸೆಟ್ ಅನ್ನು ಭದ್ರತಾ ಪಡೆಗಳಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.