Sonu Sood: ಬಾಲಿವುಡ್ ನಟ ಸೋನು ಸೂದ್ ಪತ್ನಿಗೆ ಅಪಘಾತ; ನುಜ್ಜುಗುಜ್ಜಾದ ಕಾರಿನ ಫೋಟೋ ವೈರಲ್
ಬಾಲಿವುಡ್ ನಟ ಸೋನು ಸೂದ್ ಅವರ ಪತ್ನಿ ಸೋನಾಲಿ ಸೂದ್ ಅವಚಲಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಸೋಮವಾರ (ಮಾರ್ಚ್ 24) ರಾತ್ರಿ ಈ ಘಟನೆ ನಡೆದಿದೆ. ಮುಂಬೈ-ನಾಗಪುರ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.


ಮುಂಬೈ: ಬಾಲಿವುಡ್ ನಟ ಸೋನು ಸೂದ್ (Sonu Sood) ಅವರ ಪತ್ನಿ ಸೋನಾಲಿ ಸೂದ್ ಅವಚಲಿಸುತ್ತಿದ್ದ ಕಾರು ಅಪಘಾತಕ್ಕೆ (Sonali Sood Car Accident) ಒಳಗಾಗಿದೆ. ಸೋಮವಾರ (ಮಾರ್ಚ್ 24) ರಾತ್ರಿ ಈ ಘಟನೆ ನಡೆದಿದೆ. ಮುಂಬೈ-ನಾಗಪುರ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಅಪಘಾತದ ಸಮಯದಲ್ಲಿ ಸೋನಾಲಿ ತನ್ನ ಸಹೋದರಿ ಮತ್ತು ಸೋದರಳಿಯನೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಸೋನಾಲಿ ಅವರು ಕಾರು ಚಾಲಿಸುತ್ತಿದ್ದರು. ಮೂವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ನಿಯ ಅಪಘಾತದ ಬಗ್ಗೆ ತಿಳಿದ ತಕ್ಷಣ ಸೋನು ಸೂದ್ ತಕ್ಷಣವೇ ನಾಗ್ಪುರಕ್ಕೆ ಧಾವಿಸಿದ್ದಾರೆ. ಮುಂದಿನ 48ರಿಂದ 72 ಗಂಟೆಗಳ ಕಾಲ ಇಬ್ಬರನ್ನೂ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಈ ಅಪಘಾತದಲ್ಲಿ ಸೊನಾಲಿ ಸೂದ್ ಅವರ ಸಹೋದರಿಗೆ ಹೆಚ್ಚಿನ ಗಾಯಗಳು ಆಗಿಲ್ಲ. ಕೇವಲ ಸಣ್ಣ ಪುಟ್ಟ ಗಾಯಗಳು ಆಗಿವೆ. ಆದರೆ ಸೊನಾಲಿ ಮತ್ತು ಸಹೋದರಿಯ ಪುತ್ರನಿಗೆ ಗಂಭೀರವಾಗಿ ಪೆಟ್ಟಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಸೋನು ಸೂದ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
#WATCH | Nagpur, Mahrashtra | Sonu Sood's wife, Sonali Sood, and sister-in-law, Sunita, got injured in an accident on the flyover located on Wardha Road in Nagpur. The car in which Sonali Sood was sitting hit the truck from behind. The accident happened at 10.30 pm on Monday… pic.twitter.com/wJaBMHVPBx
— ANI (@ANI) March 25, 2025
ಸೋನು ಸೂದ್ ಹಾಗೂ ಸೋನಾಲಿ 1996 ರಲ್ಲಿ ವಿವಾಹವಾಗಿದ್ದಾರೆ. ಸೋನಾಲಿ ಮೂಲತಃ ಆಂಧ್ರಪ್ರದೇಶದವರು. ಈ ದಂಪತಿಗೆ ಅಯಾನ್ ಮತ್ತು ಇಶಾಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಸೋನಾಲಿ ನಾಗ್ಪುರ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದು, ಈಗ ಚಲನಚಿತ್ರ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅಪಘಾತದ ಸುದ್ದಿ ಕೇಳಿ ಸೋನು ಸೂದ್ ಅಭಿಮಾನಿಗಳಿಗೆ ಆತಂಕವಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಸೋನು ಸೂದ್ ಅವರಿಗೆ ಇಡೀ ದೇಶದಲ್ಲಿ ಅಭಿಮಾನಿಗಳಿದ್ದಾರೆ.
ಈ ಸುದ್ದಿಯನ್ನೂ ಓದಿ: Sonu Sood : ಬಾಲಿವುಡ್ ನಟ ಸೋನು ಸೂದ್‌ಗೆ ಸಂಕಷ್ಟ; ಕೋರ್ಟ್‌ನಿಂದ ಅರೆಸ್ಟ್ ವಾರಂಟ್!
ಸೋನು ಸೂದ್ ಕೇವಲ ಚಿತ್ರ ನಟ ಮಾತ್ರ ಅಲ್ಲದೆ ತಮ್ಮನ್ನು ತಾವು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕೊರೋನಾದಂತಹ ಸಮಯದಲ್ಲಿಯೂ ಸಾಕಷ್ಟು ಕೆಲಸ ಮಾಡಿ ಮೆಚ್ಚುಗೆಯನ್ನು ಗಳಿಸಿದ್ದಾರೆ. ಇತ್ತೀಚೆಗೆ ಸೋನು ಸೂದ್ ಆಂಧ್ರಪ್ರದೇಶದ ಮುಖ್ಯ ಮಂತ್ರಿ ಚಂದ್ರ ಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಆಂಧ್ರಕ್ಕೆ ನಾಲ್ಕು ಆಂಬ್ಯುಲೆನ್ಸ್‌ಗಳನ್ನು ದಾನ ಮಾಡಿದ್ದರು. ಕೆಲ ದಿನಗಳ ಹಿಂದೆ ಇಂಡಿಯಾ ಗೇಟ್‌ನಲ್ಲಿ ಪಾಪ್‌ಕಾರ್ನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಸಹಾಯ ಮಾಡುವ ಭರವಸೆಯನ್ನು ಅವರು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.