ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sudha Murty: "ವಾರಕ್ಕೆ 70 ಗಂಟೆ ಕೆಲಸ" ; ಪತಿ ನಾರಾಯಣ ಮೂರ್ತಿ ಹೇಳಿಕೆಗೆ ಸುಧಾ ಮೂರ್ತಿ ಪ್ರತಿಕ್ರಿಯೆ ನೀಡಿದ್ದೇನು?

ಇನ್ಫೋಸಿಸ್‌ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಬಾರೀ ವಿವಾದ ಸೃಷ್ಟಿಸಿತ್ತು. ಇದೀಗ ನಾರಾಯಣ ಮೂರ್ತಿ ಅವರ ಪತ್ನಿ ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್‌ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಾರಕ್ಕೆ 70 ಗಂಟೆ ಕೆಲಸ ಮಾಡಿ; ಹೇಳಿಕೆಗೆ ಸುಧಾ ಮೂರ್ತಿ ಹೇಳಿದ್ದೇನು?

ಸುಧಾ ಮೂರ್ತಿ

Profile Vishakha Bhat Mar 22, 2025 2:46 PM

ನವದೆಹಲಿ: ಇನ್ಫೋಸಿಸ್‌ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಬಾರೀ ವಿವಾದ ಸೃಷ್ಟಿಸಿತ್ತು. ಇದೀಗ ನಾರಾಯಣ ಮೂರ್ತಿ ಅವರ ಪತ್ನಿ ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್‌ ಮುಖ್ಯಸ್ಥೆ ಸುಧಾ ಮೂರ್ತಿ (Sudha Murty) ಅವರು ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಒಂದು ಸಂಸ್ಥೆಯನ್ನು ಕಟ್ಟಲು 70 ಗಂಟೆ ಅಥವಾ ಅದಕ್ಕೂ ಹೆಚ್ಚಿನ ಗಂಟೆಗಳ ಕಾಲ ಕೆಲಸ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಇನ್ಫೋಸಿಸ್‌ ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆಯುತ್ತದೆ ಎಂದು ನಾವೂ ಊಹೆ ಕೂಡ ಮಾಡಿರಲಿಲ್ಲ. ಇದು ಸಂಪೂರ್ಣ ಕಠಿಣ ಪರಿಶ್ರಮದ ಭಾಗ ಎಂದು ಹೇಳಿದ್ದಾರೆ. ಕೇವಲ ನಾವೊಂದೇ ಪರಿಶ್ರಮ ಹಾಕಿದರೆ ಸಂಸ್ಥೆ ಇಷ್ಟು ದೊಡ್ಡದಾಗಿ ಬೆಳೆಯುತ್ತಿರಲಿಲ್ಲ. ಸಂಸ್ಥೆಯನ್ನು ಕಟ್ಟಿನಿಲ್ಲಿಸುವಲ್ಲಿ ನಮ್ಮ ಸಿಬ್ಬಂದಿಯ ಪರಿಶ್ರಮವೂ ಅಷ್ಟೇ ಇದೆ ಎಂದು ಸುಧಾ ಮೂರ್ತಿಯವರು ಹೇಳಿದ್ದಾರೆ. ನಾರಾಯಣ ಮೂರ್ತಿಯವರ ವಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಮೂರ್ತಿ ಅವರು ಶಿಸ್ತು ಬದ್ಧ ಜೀವನವನ್ನು ಇಷ್ಟ ಪಡುತ್ತಾರೆ. ಹೆಚ್ಚು ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ನಾರಾಯಣ ಮೂರ್ತಿ ಅವರು ಮಾತ್ರ ಅಲ್ಲ, ಪತ್ರಕರ್ತರು ಮತ್ತು ವೈದ್ಯರಂತಹ ಇತರ ವೃತ್ತಿಗಳಲ್ಲಿರುವ ಜನರು ಸಹ "90 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಸುಧಾ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ. ಕಲಿಕೆ ಬಗ್ಗೆ ಮಾತನಾಡಿದ ಅವರು ಕಲಿಕೆ ನಿರಂತರವಾದುದು, ಕೆಲಸದಲ್ಲಿ ತೊಡಗಿಸಿಕೊಳ್ಳಲು ತಮ್ಮದೇ ಆದ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಪಡಬೇಕು. ಸಮಯವಿಲ್ಲ ಎಂದು ಯೋಚಿಸಬಾರದು. ಕಲಿಕೆಯನ್ನು ಆನಂದಿಸಬೇಕು ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ, ಅರ್ಥಮಾಡಿಕೊಳ್ಳುವ ಪುರುಷನಿದ್ದಾನೆ. ಮೂರ್ತಿ ಅವರ ಬೆಂಬಲಕ್ಕೆ ನಾನು ನನ್ನ ಬೆಂಬಲಕ್ಕೆ ಮೂರ್ತಿ ಇದ್ದಾರೆ. ಅದನ್ನೇ ನಾನು ಜೀವನ ಎಂದು ಕರೆಯುತ್ತೇನೆ. ಎಲ್ಲರಿಗೂ 24 ಗಂಟೆಗಳು ಸಿಗುತ್ತವೆ. ಅದನ್ನು ನಾವು ಹೇಗೆ ಬಳಸಿಕೊಳ್ಳಬೇಕು ಎಂಬುದು ಅವರಿಗೆ ಬಿಟ್ಟದ್ದು, ಸರಿಯಾದ ಮಾರ್ಗದಲ್ಲಿ ಸಮಯವನ್ನು ಬಳಸಿದರೆ ಅದು ಪ್ರಯೋಜನ ನೀಡಿಯೇ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Narayana Murthy-Sudha Murthy’s Biopic: ಸುಧಾ ಮೂರ್ತಿ-ನಾರಾಯಣ ಮೂರ್ತಿ ಬಯೋಪಿಕ್‌ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ನಿರ್ದೇಶಕಿ ಅಶ್ವಿನಿ ಅಯ್ಯರ್‌

ಅಕ್ಟೋಬರ್ 2023 ರ ಸಮಯದಲ್ಲಿ ನಾರಾಯಣ ಮೂರ್ತಿ ಅವರು ಪಾಡ್‌ಕ್ಯಾಸ್ಟ್‌ ಒಂದರಲ್ಲಿ ದೇಶದ ಕೆಲಸದ ಉತ್ಪಾದಕತೆ "ವಿಶ್ವದ ಅತ್ಯಂತ ಕಡಿಮೆ" ಎಂದು ಹೇಳಿದ್ದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನ್ನರು ಮತ್ತು ಜಪಾನಿಯರ ಉದಾಹರಣೆಗಳನ್ನು ಉಲ್ಲೇಖಿಸಿ, ಯುವಕರು "ವಾರಕ್ಕೆ 70 ಗಂಟೆಗಳ ಕಾಲ" ಕೆಲಸ ಮಾಡುವುದನ್ನು ಪರಿಗಣಿಸುವಂತೆ ಸೂಚಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.