ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Supreme Court: ಬಾಡಿಗೆಗೆ ಇದ್ದ ಮಾತ್ರಕ್ಕೆ ಆ ಮನೆಯ ಮಾಲೀಕರಾಗಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಬಾಡಿಗೆದಾರರು ವಾಸವಿದ್ದಕ್ಕೆ ಮಾತ್ರ ಎಂದಿಗೂ ಆ ವಾಸದ ಮನೆಯನ್ನು ತಮ್ಮದೇ ಆಸ್ತಿಯನ್ನಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ತೀರ್ಪು ಭೂಮಾಲೀಕರ ಹಕ್ಕುಗಳನ್ನು ಬಲಪಡಿಸುವಂತದ್ದಾಗಿದ್ದು, ಸುಪ್ರೀಂ ಕೋರ್ಟ್ ಇಂಥದೊಂದು ಮಹತ್ತರವಾದ ತೀರ್ಪನ್ನು ನೀಡಲು ಕಾರಣ ಇಲ್ಲಿದೆ.

ಬಾಡಿಗೆದಾರರಿಗೆ ಮಹತ್ತರ ತೀರ್ಪು ನೀಡಿದ ಸುಪ್ರೀಂ

ಸುಪ್ರೀಂ ಕೋರ್ಟ್‌ -

Profile
Sushmitha Jain Nov 12, 2025 11:07 PM

ನವದೆಹಲಿ: ಬಾಡಿಗೆ (Tenants) ಮನೆಯಲ್ಲಿದ್ದವರಿಗೆ ಇದೀಗ ಇನ್ನೊಂದು ಹೊಸ ನಿಯಮವನ್ನು ಸುಪ್ರೀಂ ಕೋರ್ಟ್(Supreme Court) ಘೋಷಣೆ ಮಾಡಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದಕ್ಕೆ ಮಾತ್ರ ಬಾಡಿಗೆದಾರ ಎಂದಿಗೂ ಆ ಮನೆಯ ಮಾಲೀಕನಾಗಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಮೂಲಕ ಆಸ್ತಿ ಮಾಲೀಕತ್ವದ ಕುರಿತು ಮಹತ್ವದ ತೀರ್ಪನ್ನು ನೀಡಿದ್ದು, ಭೂಮಾಲೀಕರ ಹಕ್ಕುಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ.

ಅವರು 5 ವರ್ಷಗಳಿಂದ ಇಲ್ಲವೇ 50 ವರ್ಷಗಳಿಂದಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ ಆ ಆಸ್ತಿಯ ಮಾಲೀಕತ್ವವನ್ನು ಪಡೆಯಲು ಎಂದಿಗೂ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ನ್ಯಾಯಾಲಯವು ಬಾಡಿಗೆದಾರರಿಗೆ ಕೇವಲ ಬಳಕೆ ಹಕ್ಕು (use right) ಇದೆಯೇ ಹೊರತು, ಮಾಲೀಕತ್ವವನ್ನು ಹೊಂದಲು ಸಾಧ್ಯವಿಲ್ಲ. ಹಾಗೇನಾದರೂ ಅನುಮತಿಯಿಲ್ಲದೆ ಆ ಆಸ್ತಿಯ ಮಾಲೀಕತ್ವವನ್ನು ಪಡೆದರೆ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಿದೆ.

ದೆಹಲಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಜ್ಯೋತಿ ಶರ್ಮಾ ಮತ್ತು ವಿಷ್ಣು ಗೋಯಲ್ ಇವರುಗಳು ದೀರ್ಘ ಕಾಲದಿಂದ ನಡೆಸುತ್ತಿದ್ದ ಪ್ರಕರಣವನ್ನು ಇತ್ಯರ್ಥಗೊಳಿಸಿದೆ.

ಏನಿದು ಪ್ರಕರಣ?

1980ರ ಪ್ರಕರಣ ಇದಾಗಿದ್ದು, ಜ್ಯೋತಿ ಶರ್ಮಾ ಅವರ ಜಾಗದಲ್ಲಿ ವಿಷ್ಣು ಗೋಯಲ್ ಬಾಡಿಗೆಗೆ ಇದ್ದರು. ಮಾಲೀಕ ಹಾಗೂ ಬಾಡಿಗೆದಾರ ಇಬ್ಬರು ಹೊಂದಾಣಿಕೆಯಿಂದ ವ್ಯವಹಾರ ನಡೆಸಿ ಕೊಂಡು ಹೋಗುತ್ತಿದ್ದರು. ಆದರೆ ವರ್ಷ ಕಳೆದಂತೆ ಗೋಯಲ್ ವರ್ತನೆಯಲ್ಲಿ ಬದಲಾವಣೆ ಆಗಲು ಶುರುವಾಗಿದ್ದಲ್ಲದೇ, ಬಾಡಿಗೆ ಕೊಡುವುದನ್ನು ನಿಲ್ಲಿಸಿದ್ದ. ಇಷ್ಟಾದರೂ ಜ್ಯೋತಿ ಶರ್ಮಾ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಇದನ್ನೇ ದುರುಪಯೋಗ ಪಡಿಸಿಕೊಂಡ ಗೋಯಲ್ "ಪ್ರತಿಕೂಲ ಸ್ವಾಧೀನ" (adverse possession) ಸಿದ್ಧಾಂತದಡಿ ಆ ಆಸ್ತಿಯ ಮೇಲೆ ಹಕ್ಕು ಚಲಾಯಿಸಲು ಪ್ರಯತ್ನಿಸಿದ್ದಾನೆ. ಇದನ್ನು ಮನಗಂಡ ಜ್ಯೋತಿ ಶರ್ಮಾ, ಗೋಯಲ್ ನಡೆಗೆ ವಿರೋಧ ವ್ಯಕ್ತ ಪಡಿಸಿದ್ದು, ತಮ್ಮ ಆಸ್ತಿಯನ್ನು ತಮ್ಮಗೆ ಹಿಂದಿರುಗಿ ಕೊಡಿಸುವಂತೆ ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದರು.

ಈ ಪ್ರಕರಣದ ತನಿಖೆ ನಡೆಸಿದ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಏಳು ದಶಕಗಳಷ್ಟು ಹಳೆಯ (1953ರ ಹಿಂದಿನ) ಬಾಡಿಗೆ ವಿವಾದವನ್ನು ಇತ್ಯರ್ಥಪಡಿಸಿದ್ದು, ಬಾಡಿಗೆದಾರರ ವಾದವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ.

ಈ ಸುದ್ದಿಯನ್ನು ಓದಿ: Viral Video: ದೇಗುಲದ ಒಳಗೆ ವೃದ್ಧಅಸ್ವಸ್ಥ; ಸಾವಿನ ಕೊನೆಯ ಕ್ಷಣದ ವಿಡಿಯೊ ವೈರಲ್!

ಅಲ್ಲದೇ ಬಾಡಿಗೆ ಒಪ್ಪಂದದಿಂದಲೇ ಬಾಡಿಗೆದಾರನಿಗೆ ವಾಸ ಹಕ್ಕು ದೊರೆಯಲಿದ್ದು, ಅದು ಮಾಲೀಕರ ಅನುಮತಿ ಮತ್ತು ನಿಯಮಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ, ಬಾಡಿಗೆದಾರರು ಯಾವತ್ತೂ ಆ ಆಸ್ತಿಯ ಮಾಲೀಕರಾಗಲು ಸಾಧ್ಯವಿಲ್ಲ ಎಂದಿದೆ.

ಜತೆಗೆ ಈ ಪ್ರಕರಣದ ವಾದ ಪ್ರತಿ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ಜ್ಯೋತಿ ಶರ್ಮಾ ಪರ ತೀರ್ಪು ನೀಡಿದ್ದು, ಬಾಡಿಗೆದಾರರು ಜಾಗ ಖಾಲಿ ಮಾಡಬೇಕು. ಗೋಯಲ್ ಅವರಿಗೆ ಆಸ್ತಿಯನ್ನು ಹಸ್ತಾಂತರಿಸುವಂತೆ ಹಾಗೂ ಜನವರಿ 2000ರಿಂದ ಬಾಡಿಗೆ ಬಾಕಿಗಳನ್ನು ನೀಡಬೇಕು ಎಂದಿದೆ.

ಇನ್ನು ಬಾಡಿಗೆದಾರರ ದೀರ್ಘಾ ಕಾಲದವರೆಗೆ ಬಾಡಿಗೆ ಇದ್ದನ್ನು ಪರಿಗಣಿಸಿ, ನ್ಯಾಯಾಲಯವು ಬಾಡಿಗೆದಾರರಿಗೆ ಖಾಲಿ ಮಾಡಲು ಆರು ತಿಂಗಳ ಕಾಲಾವಕಾಶವನ್ನು ನೀಡಿದ್ದು, ಅವರು ಎರಡು ತಿಂಗಳೊಳಗೆ ಎಲ್ಲ ಬಾಕಿಗಳನ್ನು ಪಾವತಿಸಿ ಮನೆ ಖಾಲಿ ಮಾಡುವಂತೆ ಹೇಳಿದೆ.