ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಉಗ್ರರ ನೆಲೆ ಸಂಹಾರಕ್ಕೆ ಭಾರತೀಯ ಸೇನೆ ತೆಗೆದುಕೊಂಡಿದ್ದು ಕೇವಲ ಬ್ರೇಕ್‌ಫಾಸ್ಟ್‌ ಸಮಯವಷ್ಟೇ; ರಾಜನಾಥ್ ಸಿಂಗ್

Rajnath Singh: ಭುಜ್ ವಾಯುನೆಲೆಯಲ್ಲಿ ಸೋಮವಾರ ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆಯ ನಿಖರತೆ ಮತ್ತು ವೇಗವನ್ನು ಶ್ಲಾಘಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಕಾರ್ಯಾಚರಣೆಯು ಭಾರತದ ಮಿಲಿಟರಿ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಿತು ಮತ್ತು ಗಡಿಯಾಚೆಯಿಂದ ಹೊರಹೊಮ್ಮುವ ಭಯೋತ್ಪಾದನೆಯನ್ನು ದಾಖಲೆಯ ಸಮಯದಲ್ಲಿ ಹತ್ತಿಕ್ಕಿತು ಎಂದು ಹೇಳಿದರು.

ಉಗ್ರರ ಸಂಹಾರಕ್ಕೆ ಸೇನೆ ತೆಗೆದುಕೊಂಡ ಸಮಯ ಎಷ್ಟು ಗೊತ್ತಾ?

ಭುಜ್: ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ (Pahalgam terror attack) ಬಳಿಕ ಮೇ 7ರಂದು ಭಾರತೀಯ ಸೇನೆ (Indian Air Force) ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ಕೇವಲ 23 ನಿಮಿಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ವೇಳೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (POK) ಒಳಗೆ ಇದ್ದ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಕಾರ್ಯಾಚರಣೆಯ ಯಶಸ್ಸಿಗೆ ಕಾರಣವಾದ ಭಾರತೀಯ ವಾಯುಪಡೆಯನ್ನು ಭುಜ್ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence minister Rajnath Singh) ಶ್ಲಾಘಿಸಿದರು.

ಭುಜ್ ವಾಯುಪಡೆ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಮೂಲದ ಭಯೋತ್ಪಾದಕರ ನೆಲೆಗಳನ್ನು ಕೇವಲ 23 ನಿಮಿಷಗಳಲ್ಲಿ ಪುಡಿಪುಡಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆ ಪ್ರದರ್ಶಿಸಿದ ನಿಖರತೆ ಮತ್ತು ವೇಗವನ್ನು ಅವರು ಶ್ಲಾಘಿಸಿದರು.

ಸೇನಾ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆಯ ನಿಖರತೆ ಮತ್ತು ವೇಗವನ್ನು ಶ್ಲಾಘಿಸಿ, ಈ ಕಾರ್ಯಾಚರಣೆಯು ಭಾರತದ ಮಿಲಿಟರಿ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಿತು ಮತ್ತು ಗಡಿಯಾಚೆಯಿಂದ ಹೊರಹೊಮ್ಮುವ ಭಯೋತ್ಪಾದನೆಯನ್ನು ದಾಖಲೆಯ ಸಮಯದಲ್ಲಿ ಹತ್ತಿಕ್ಕಿತು ಎಂದು ಘೋಷಿಸಿದರು. ಉಪಹಾರ ಸೇವಿಸಲು ತೆಗೆದುಕೊಳ್ಳುವ ಸಮಯದಲ್ಲಿ ನೀವು ಶತ್ರುಗಳನ್ನು ಸಂಹರಿಸಿದ್ದೀರಿ ಎಂದು ರಾಜನಾಥ್ ಸಿಂಗ್ ಹೇಳಿದಾಗ ಹಾಜರಿದ್ದ ಸಿಬ್ಬಂದಿ ಜೋರಾಗಿ ಚಪ್ಪಾಳೆ ತಟ್ಟಿದರು.

ಇದನ್ನೂ ಓದಿ: Fraud case: ಜಾತಕದಲ್ಲಿ ದೋಷ ಇದೆ ಎಂದು ಮಹಿಳಾ ಪೇದೆಗೆ 5 ಲಕ್ಷ ವಂಚನೆ; ಜ್ಯೋತಿಷಿ ಅರೆಸ್ಟ್‌

ಆಪರೇಷನ್ ಸಿಂದೂರ್ ಸಮಯದಲ್ಲಿ ನೀವು ಏನೇ ಮಾಡಿದರೂ ಅದು ಎಲ್ಲಾ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದೆ. ಅದು ಅವರು ಭಾರತದಲ್ಲಿರಲಿ ಅಥವಾ ವಿದೇಶದಲ್ಲಿರಲಿ. ಪಾಕಿಸ್ತಾನದಲ್ಲಿ ಪೋಷಿಸಲಾದ ಭಯೋತ್ಪಾದಕ ಮೂಲಸೌಕರ್ಯವನ್ನು ಕೆಡವಲು ಭಾರತೀಯ ವಾಯುಪಡೆಗೆ ಕೇವಲ 23 ನಿಮಿಷಗಳು ಬೇಕಾಗಿತ್ತು ಎಂದು ತಿಳಿಸಿದರು.

ಈ ಕಾರ್ಯಾಚರಣೆಯು ಜಾಗತಿಕ ಗಮನ ಸೆಳೆದಿದೆ ಎಂದ ಸಿಂಗ್, ನಮ್ಮ ವಾಯುಪಡೆಯ ಯೋಧರು ಮಾಡಿದ್ದಕ್ಕೆ ಇಡೀ ಜಗತ್ತು ಬೆರಗಾಗಿದೆ. ನೀವು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದ್ದೀರಿ ಮಾತ್ರವಲ್ಲ ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀವು ಕಳುಹಿಸಿದ್ದೀರಿ. ಭಯೋತ್ಪಾದನೆ ವಿರುದ್ಧ ಭಾರತ ನಿಖರತೆ ಮತ್ತು ಬಲದಿಂದ ಪ್ರತಿದಾಳಿ ಮಾಡುತ್ತದೆ ಎಂಬುದನ್ನು ಸಾಬೀತು ಪಡಿಸಿದ್ದೀರಿ ಎಂದು ಹೇಳಿದರು.