ದೇಶ ಎಲ್ಲರಿಗೂ ಸೇರಿದ್ದು: ಎಲ್ಲ ಭಾಷೆಗಳೂ ರಾಷ್ಟ್ರಭಾಷೆ ಎಂದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
The nation belongs to everyone: ದೇಶ ಎಲ್ಲರಿಗೂ ಸೇರಿದ್ದು, ಭಾರತದ ಎಲ್ಲ ಭಾಷೆಗಳೂ ರಾಷ್ಟ್ರಭಾಷೆಗಳೇ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಸಮಾಜದಲ್ಲಿ ಜಾತಿ, ಭಾಷೆ ಹಾಗೂ ಇತರ ವಿಭಜನೆಗಳನ್ನು ಮೀರಿ ಸಾಮಾಜಿಕ ಸಾಮರಸ್ಯವನ್ನು ಬೆಳೆಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ಮಾತೃಭಾಷೆಯ ಜತೆಗೆ ಇತರ ಭಾಷೆಗಳನ್ನೂ ಕಲಿಯುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮೋಹನ್ ಭಾಗವತ್ (ಸಂಗ್ರಹ ಚಿತ್ರ) -
ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಸಾಮಾಜಿಕ ಸಾಮರಸ್ಯಕ್ಕಾಗಿ ಕರೆ ನೀಡಿದರು. ಜಾತಿ, ಸಂಪತ್ತು ಹಾಗೂ ಭಾಷೆಯಂತಹ ವಿಭಜನೆಗಳನ್ನು ಮೀರಿ, ಎಲ್ಲರನ್ನು ನಮ್ಮವರೇ ಎಂದು ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಭಾಷೆಯ ಮಹತ್ವವನ್ನು ಒತ್ತಿ ಹೇಳಿದ ಭಾಗವತ್, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ತಾಯ್ನುಡಿಯನ್ನು (Mother tongue) ಮಾತನಾಡಬೇಕು ಹಾಗೂ ವಿವಿಧ ಭಾಷೆಗಳನ್ನು ಕಲಿಯಬೇಕು. ಏಕೆಂದರೆ ಎಲ್ಲ ಭಾಷೆಗಳೂ ಮಹತ್ವದ್ದೇ ಆಗಿದೆ ಎಂದು ತಿಳಿಸಿದರು.
ಜನರು ಜಾತಿ, ಸಂಪತ್ತು ಮತ್ತು ಭಾಷೆಯ ವಿಭಜನೆಗಳನ್ನು ಮೀರಿ ಇದೆಲ್ಲ ಪ್ರತಿಯೊಬ್ಬರಿಗೆ ಸೇರಿದ್ದು ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು. ಭಾಷೆಯ ಮಹತ್ವವನ್ನು ಎತ್ತಿ ತೋರಿಸಿದ ಭಾಗವತ್, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ತಮ್ಮ ಮಾತೃಭಾಷೆಯನ್ನು ಮಾತನಾಡಬೇಕು ಮತ್ತು ವಿಭಿನ್ನ ಭಾಷೆಗಳನ್ನು ಕಲಿಯಬೇಕು ಎಂದು ಒತ್ತಾಯಿಸಿದರು.
ವಿಡಿಯೊ ವೀಕ್ಷಿಸಿ:
#WATCH | Raipur, Chhattisgarh | RSS Chief Mohan Bhagwat says, "... Atleast inside our houses, we should speak in our mother tongue... If you live in another state or region, you should learn the language of that state or region because all languages are India's national… pic.twitter.com/tBgDsmbUn8
— ANI (@ANI) January 1, 2026
ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯ ಸೋನ್‌ಪೈರಿ ಗ್ರಾಮದಲ್ಲಿ ನಡೆದ ಹಿಂದೂ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಕನಿಷ್ಠ ಪಕ್ಷ ನಮ್ಮ ಮನೆಯಲ್ಲಿ ನಾವು ನಮ್ಮ ಮಾತೃ ಭಾಷೆಯಲ್ಲಿ ಮಾತನಾಡಬೇಕು. ನೀವು ಬೇರೆ ರಾಜ್ಯ ಅಥವಾ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ನೀವು ಆ ರಾಜ್ಯ ಅಥವಾ ಆ ಪ್ರದೇಶದ ಭಾಷೆಯನ್ನು ಕಲಿಯಬೇಕು. ಏಕೆಂದರೆ ಎಲ್ಲ ಭಾಷೆಗಳು ಭಾರತದ ರಾಷ್ಟ್ರೀಯ ಭಾಷೆಗಳಾಗಿವೆ. ಅವೆಲ್ಲವೂ ಸಮಾನ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಹೇಳಿದರು.
ಭಾರತ ಹಿಂದೂ ರಾಷ್ಟ್ರ ಎನ್ನುವುದಕ್ಕೆ ಸಾಂವಿಧಾನಿಕ ಅನುಮೋದನೆಯ ಅಗತ್ಯವಿಲ್ಲ: ಮೋಹನ್ ಭಾಗವತ್
ಕುಟುಂಬ ಸದಸ್ಯರು ವಾರದಲ್ಲಿ ಒಂದು ದಿನ ಊಟ, ಪ್ರಾರ್ಥನೆ ಮತ್ತು ಚರ್ಚೆಗಳಂತಹ ಸಾಮೂಹಿಕ ಚಟುವಟಿಕೆಗಳಿಗೆ ಮೀಸಲಿಡಬೇಕೆಂದು ಆರ್‌ಎಸ್‌ಎಸ್ ಮುಖ್ಯಸ್ಥರು ಕರೆ ನೀಡಿದರು. ಸಾಮಾಜಿಕ ಸಾಮರಸ್ಯದತ್ತ ಮೊದಲ ಹೆಜ್ಜೆ ಎಂದರೆ ಒಬ್ಬರ ಮನಸ್ಸಿನಿಂದ ತಾರತಮ್ಯ ಮತ್ತು ಬೇರ್ಪಡುವಿಕೆಯನ್ನು ತೆಗೆದುಹಾಕುವುದು ಎಂದು ಅವರು ಹೇಳಿದರು.
ಇಡೀ ದೇಶ ಎಲ್ಲರಿಗೂ ಸೇರಿದ್ದು, ಇದುವೇ ನಿಜವಾದ ಸಾಮಾಜಿಕ ಸಾಮರಸ್ಯ ಎಂದು ಭಾಗವತ್ ಹೇಳಿದರು. ಜನರು ಯಾರನ್ನೂ ಅವರ ಜಾತಿ, ಸಂಪತ್ತು, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ನಿರ್ಣಯಿಸಬಾರದು. ಎಲ್ಲರನ್ನೂ ತಮ್ಮವರೇ ಎಂದು ಪರಿಗಣಿಸಬೇಕು. ಇಡೀ ಭಾರತ ನಮ್ಮದು ಎಂದು ಅವರು ಹೇಳಿದರು. ಈ ವಿಧಾನವನ್ನು ಸಾಮಾಜಿಕ ಸಾಮರಸ್ಯ ಎಂದು ವಿವರಿಸಿದರು.
ಕುಟುಂಬ ಸಂವಹನಗಳನ್ನು ಪುನರುಜ್ಜೀವನಗೊಳಿಸುವ ಅಗತ್ಯವನ್ನು ಭಾಗವತ್ ಒತ್ತಿ ಹೇಳಿದರು. ಕುಟುಂಬಗಳು ವಾರದಲ್ಲಿ ಕನಿಷ್ಠ ಒಂದು ದಿನವನ್ನು ಒಟ್ಟಿಗೆ ಕಳೆಯಬೇಕು. ಅವರ ನಂಬಿಕೆಗೆ ಅನುಗುಣವಾಗಿ ಪ್ರಾರ್ಥನೆಗಳಲ್ಲಿ ತೊಡಗಬೇಕು. ಮನೆಯಲ್ಲೇ ಅಡುಗೆ ಮಾಡಿ ಒಟ್ಟಿಗೆ ಕುಳಿತು ಊಟ ಮಾಡಬೇಕು ಮತ್ತು ಅರ್ಥಪೂರ್ಣ ಚರ್ಚೆಗಳನ್ನು ನಡೆಸಬೇಕು ಎಂದು ಭಾಗವತ್ ಹೇಳಿದರು. ಚರ್ಚೆಗಳನ್ನು ಮಂಗಲ ಸಂವಾದ ಎಂದು ಅವರು ಕರೆದರು.
ಸಾಮಾಜಿಕ ಸಾಮರಸ್ಯ, ಜವಾಬ್ದಾರಿ ಮತ್ತು ಶಿಸ್ತುಬದ್ಧ ನಾಗರಿಕ ಜೀವನಕ್ಕೆ ಕರೆ ನೀಡಿದ ಭಾಗವತ್, ಜನರು ವಿಭಜನೆಗಳನ್ನು ಮೀರಿ ಸಮಾಜ ಮತ್ತು ರಾಷ್ಟ್ರಕ್ಕಾಗಿ ಸಾಮೂಹಿಕವಾಗಿ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.