ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TT Jagannathan: ಪ್ರೆಶರ್ ಕುಕ್ಕರ್ ಮಾರುಕಟ್ಟೆಯ ಕ್ರಾಂತಿಕಾರ ಟಿ.ಟಿ. ಜಗನ್ನಾಥನ್ ನಿಧನ

TT Jagannathan passed away: ‘ದಿ ಕಿಚನ್ ಮೊಗಲ್’ ಎಂದೇ ಕರೆಯಲ್ಪಡುವ ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್‌ನ ನಿವೃತ್ತ ಅಧ್ಯಕ್ಷರಾದ ಟಿ.ಟಿ. ಜಗನ್ನಾಥನ್ (T.T.Jagannathan) ಅವರು 82 ವಯಸ್ಸಿನಲ್ಲಿ ಗುರುವಾರ ತಡರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಕಂಪೆನಿಯು ಸಂತಾಪ ಸೂಚಿಸಿದ್ದು, ಜಗನ್ನಾಥನ್‌ ಅವರ ನಿಧನವು ಕಂಪೆನಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದೆ.

‘ದಿ ಕಿಚನ್ ಮೊಗಲ್’ ಟಿ.ಟಿ. ಜಗನ್ನಾಥನ್ ಇನ್ನಿಲ್ಲ

-

ಬೆಂಗಳೂರು: ಪ್ರೆಶರ್ ಕುಕ್ಕರ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು (kitchenware revolution) ಮಾಡಿದ ಟಿಟಿಕೆ ಪ್ರೆಸ್ಟೀಜ್ (TTK Prestige) ಲಿಮಿಟೆಡ್‌ನ ನಿವೃತ್ತ ಅಧ್ಯಕ್ಷರಾದ ಟಿ.ಟಿ. ಜಗನ್ನಾಥನ್ (T.T.Jagannathan) ಅವರು ಗುರುವಾರ ತಡರಾತ್ರಿ ಬೆಂಗಳೂರಿನಲ್ಲಿ (bengaluru) ನಿಧನರಾಗಿದ್ದಾರೆ. ಅವರಿಗೆ 82 ವರ್ಷವಾಗಿತ್ತು. ಟಿಟಿಕೆ ಗ್ರೂಪ್‌ನ ಸ್ಥಾಪಕ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ ಅವರ ಸೋದರಳಿಯನೂ ಆಗಿದ್ದಾರೆ. ಜಗನ್ನಾಥನ್ ಅವರನ್ನು ‘ದಿ ಕಿಚನ್ ಮೊಗಲ್’ ಎಂದು ಕರೆಯಲಾಗುತ್ತದೆ.

ಜಗನ್ನಾಥನ್ ಅವರ ನಿಧನದ ಕುರಿತು ಪ್ರಕಟಣೆ ಹೊರಡಿಸಿರುವ ಕಂಪೆನಿಯು ಜಗನ್ನಾಥನ್‌ ಅವರ ನಿಧನವು ಕಂಪೆನಿಗೆ ತುಂಬಲಾರದ ನಷ್ಟವಾಗಿದೆ. ಕಂಪೆನಿಯ ಎಲ್ಲಾ ನಿರ್ದೇಶಕರು ಮತ್ತು ಉದ್ಯೋಗಿಗಳು ಅವರ ನಿಧನಕ್ಕೆ ಸಂತಾಪ ಸೂಚಿಸಿರುವುದಾಗಿ ಹೇಳಿದೆ. ಜಗನ್ನಾಥನ್ ಅವರು ವೈಯಕ್ತಿಕವಾಗಿ 42,41,868 ಈಕ್ವಿಟಿ ಷೇರುಗಳನ್ನು ಹೊಂದಿದ್ದು, ಇದು ಟಿಟಿಕೆ ಪ್ರೆಸ್ಟೀಜ್‌ನ ಒಟ್ಟು ಷೇರುಗಳ ಪಾಲಿಕೆ ಶೇ. 3.10ರಷ್ಟಿದೆ. ಇದರೊಂದಿಗೆ ಅವರು ಮೆಸರ್ಸ್ ಟಿ ಟಿ ಕೃಷ್ಣಮಾಚಾರಿ ಆಂಡ್ ಕಂಪೆನಿಯಲ್ಲಿ ಶೇ. 3ರಷ್ಟು ಪಾಲನ್ನು ಹೊಂದಿದ್ದಾರೆ. ಇದು 8,27,67,238 ಈಕ್ವಿಟಿ ಷೇರುಗಳನ್ನು ಹೊಂದಿದ್ದು, ಕಂಪೆನಿಯ ಶೇ. 60.44ರಷ್ಟು ಪಾಲನ್ನು ಹೊಂದಿದೆ.

ಟಿಟಿಕೆ ಪ್ರೆಸ್ಟೀಜ್ ಅನ್ನು ಭಾರತದ ಪ್ರಮುಖ ಅಡುಗೆ ಮತ್ತು ಗೃಹೋಪಯೋಗಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿ.ಟಿ. ಜಗನ್ನಾಥನ್ ಅಧಿಕಾರದ ಅವಧಿಯಲ್ಲಿ ಕಂಪೆನಿಯು ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿತು. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಛಾಪು ಮೂಡಿಸಿತ್ತು. ಗ್ಯಾಸ್ಕೆಟ್ ಬಿಡುಗಡೆ ವ್ಯವಸ್ಥೆಯ ಪರಿಚಯದೊಂದಿಗೆ ಪ್ರೆಶರ್ ಕುಕ್ಕರ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಇವರು ಪ್ರೆಸ್ಟೀಜ್ ಅನ್ನು ಭಾರತದಾದ್ಯಂತ ಮನೆಮಾತಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಾರ್ನೆಲ್ ವಿಶ್ವವಿದ್ಯಾಲಯದಿಂದ ಕಾರ್ಯಾಚರಣೆ ಸಂಶೋಧನೆಯಲ್ಲಿ ಪಿಎಚ್‌ಡಿ ಮತ್ತು ಐಐಟಿ ಮದ್ರಾಸ್‌ನಿಂದ ಪದಕವನ್ನು ಪಡೆದಿರುವ ಜಗನ್ನಾಥನ್ ಅವರು ಟಿಟಿಕೆ ಪ್ರೆಸ್ಟೀಜ್‌ನ ಮಂಡಳಿಯಲ್ಲಿ ಐದು ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಬಹು ಸವಾಲುಗಳ ಎದುರಾಗಿದ್ದು, ಇದರಲ್ಲಿ ದಿವಾಳಿತನವೂ ಒಂದು. ಕೊನೆಗೂ ಅವರು ಕಂಪೆನಿಯನ್ನು ಸಾಲ ಮುಕ್ತ ಮತ್ತು ಶತಕೋಟಿ ಡಾಲರ್ ಉದ್ಯಮವಾಗಿ ಪರಿವರ್ತಿಸಿದರು.

"ಡಿಸ್ರಪ್ಟ್ ಅಂಡ್ ಕಾಂಕರ್: ಹೌ ಟಿಟಿಕೆ ಪ್ರೆಸ್ಟೀಜ್ ಬಿಕೇಮ್ ಎ ಬಿಲಿಯನ್ ಡಾಲರ್ ಕಂಪನಿ" ಪುಸ್ತಕದ ಲೇಖಕರೂ ಆಗಿರುವ ಜಗನ್ನಾಥನ್ ಅವರು ಇದರಲ್ಲಿ ಕಂಪೆನಿಯ ಜಾಗತಿಕ ಯಶಸ್ಸಿನ ಪ್ರಯಾಣದ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್‌ 1! ಕಾಂತಾರ, ಕೆಜಿಎಫ್‌ ದಾಖಲೆ ಉಡೀಸ್

ಕಂಪೆನಿಯು ಪ್ರಮುಖ ಅಡುಗೆ ಸಲಕರಣೆಗಳ ವ್ಯವಹಾರದ ಮೇಲೆ ಕೇಂದ್ರೀಕರಿಸುವುದು, ವೆಚ್ಚಗಳನ್ನು ಬಿಗಿಗೊಳಿಸಿ ಸುರಕ್ಷತಾ ಪ್ರೆಶರ್ ಕುಕ್ಕರ್‌ನಂತಹ ಹೊಸ ಉತ್ಪನ್ನಗಳನ್ನು ಪರಿಚಯಿಸುವುದು ಸೇರಿದಂತೆ ಹಲವು ವಿನೂತನ ಪ್ರಯತ್ನಗಳು ಟಿಟಿಕೆ ಪ್ರೆಸ್ಟೀಜ್ ಸಾಲ ಮುಕ್ತವಾಗಲು ಸಾಧ್ಯವಾಯಿತು ಎಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಕಾರ್ಪೊರೇಟ್ ಕ್ಷೇತ್ರದ ದಿಗ್ಗಜರಾದ ಜಗನ್ನಾಥನ್ ಆಧುನಿಕ ಭಾರತೀಯ ಅಡುಗೆಮನೆಯ ಅಗತ್ಯಗಳನ್ನು ಅರ್ಥಮಾಡಿಕೊಂಡ ಉತ್ಸಾಹಭರಿತ ಅಡುಗೆಯವರು ಎನ್ನುತ್ತಾರೆ ಅವರ ಸಹೋದ್ಯೋಗಿಗಳು ಮತ್ತು ಉದ್ಯಮ ಕ್ಷೇತ್ರದ ಮುಖಂಡರು.