ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಳಪತಿ ವಿಜಯ್ ಮುಖ್ಯಮಂತ್ರಿಯಾಗಲು ವಿಳಂಬ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

TVK Worker Attempts Self-Immolation: ಟಿವಿಕೆ ಸ್ಥಾಪಕಾಧ್ಯಕ್ಷ ವಿಜಯ್ ಮುಖ್ಯಮಂತ್ರಿ ಪಟ್ಟಕ್ಕೇರಲು ಆಗುತ್ತಿರುವ ವಿಳಂಬದಿಂದ ಮನನೊಂದ ವ್ಯಕ್ತಿಯೊಬ್ಬ ಆತ್ಮಾಹುತಿಗೆ ಯತ್ನಿಸಿದ ದಾರುಣ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಟಿವಿಕೆ ನಿರಂತರ ಪ್ರಯತ್ನಗಳಲ್ಲಿ ತೊಡಗಿರುವ ಮಧ್ಯೆ ಇಸಕ್ಕಿಯಪ್ಪನ್ ಬೇಸರದಿಂದ ಆತ್ಮಾಹುತಿಗೆ ಮುಂದಾಗಿದ್ದಾನೆ.

ವಿಜಯ್ ಸಿಎಂ ಆಗಲು ವಿಳಂಬ: ಆತ್ಮಹತ್ಯೆಗೆ ಯತ್ನಿಸಿದ ಟಿವಿಕೆ ಕಾರ್ಯಕರ್ತ

ವಿಜಯ್‌ ಅಭಿಮಾನಿ -

Priyanka P
Priyanka P May 9, 2026 3:24 PM

ಚೆನ್ನೈ, ಮೇ 9: ಟಿವಿಕೆ ಸ್ಥಾಪಕಾಧ್ಯಕ್ಷ ವಿಜಯ್ (Vijay) ಮುಖ್ಯಮಂತ್ರಿ ಪಟ್ಟಕ್ಕೇರಲು ಆಗುತ್ತಿರುವ ವಿಳಂಬದಿಂದ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ತಮಿಳುನಾಡಿನ (Tamil Nadu) ತಿರುನಲ್ವೇಲಿಯಲ್ಲಿ ನಡೆದಿದೆ. 40 ವರ್ಷದ ಟಿವಿಕೆ (TVK) ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಸಕ್ಕಿಯಪ್ಪನ್ ಎಂದು ಗುರುತಿಸಲಾದ ವ್ಯಕ್ತಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಸಕ್ಕಿಯನ್ ವಿಜಯ್ ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ. ಸುಮಾರು ನಾಲ್ಕು ತಿಂಗಳ ಹಿಂದೆ, ವಿಜಯ್ ಮುಖ್ಯಮಂತ್ರಿಯಾಗುವುದನ್ನು ನೋಡುವ ತನ್ನ ಮಹತ್ವಾಕಾಂಕ್ಷೆಯ ಸಾರ್ವಜನಿಕ ಪ್ರದರ್ಶನವಾಗಿ ಆತ 16 ಅಡಿ ಉದ್ದದ ಭರ್ಜಿಯಿಂದ ತನ್ನ ಎರಡೂ ಕೆನ್ನೆಗಳನ್ನು ಚುಚ್ಚಿಕೊಂಡಿದ್ದ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಟಿವಿಕೆ ನಿರಂತರ ಪ್ರಯತ್ನಗಳಲ್ಲಿ ತೊಡಗಿರುವ ಮಧ್ಯೆ ಇಸಕ್ಕಿಯಪ್ಪನ್ ಬೇಸರದಿಂದ ಆತ್ಮಾಹುತಿಗೆ ಮುಂದಾಗಿದ್ದಾನೆ.

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರೂ, ಸರ್ಕಾರ ರಚಿಸಲು ಇನ್ನೂ 10 ಸ್ಥಾನಗಳ ಅಗತ್ಯವಿದೆ.

ತಮಿಳುನಾಡು ರಾಜಕೀಯ ಥ್ರಿಲ್ಲರ್‌ಗೆ ಮತ್ತೊಂದು ಟ್ವಿಸ್ಟ್‌; ಬಹುಮತ ಸಾಬೀತುಪಡಿಸುವಲ್ಲಿ ಮತ್ತೆ ಎಡವಿದ ವಿಜಯ್‌

ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಟಿವಿಕೆಗೆ ಬೆಂಬಲ ಘೋಷಿಸಿತು. ಅತಂತ್ರ ಸ್ಥಿತಿ ನಿರ್ಮಾಣವಾಗಬಾರದು ಎನ್ನುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿತ್ತು. ಸಣ್ಣ ಪಕ್ಷಗಳೊಂದಿಗಿನ ಮೈತ್ರಿಯು ಇನ್ನೂ ಅನಿಶ್ಚಿತತೆಯಲ್ಲಿದೆ. ಹೀಗಾಗಿ ಸರ್ಕಾರ ರಚಿಸಲು ವಿಜಯ್ ಕಸರತ್ತು ಮಾಡಬೇಕಾಗಿದೆ. ಈ ನಡುವೆ ಟಿವಿಕೆ ಕಾರ್ಯಕರ್ತ ತನ್ನ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದ್ದಾನೆ.

ಎಐಎಡಿಎಂಕೆ ಜೊತೆಗಿನ ಮೈತ್ರಿ ವದಂತಿ ಬಗ್ಗೆ ಡಿಎಂಕೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ತನ್ನ ಪ್ರಮುಖ ಪ್ರತಿಸ್ಪರ್ಧಿ ಮತ್ತು ಎನ್‌ಡಿಎ ಮಿತ್ರಪಕ್ಷ ಎಐಎಡಿಎಂಕೆ ಜೊತೆ ಸಂಪರ್ಕದಲ್ಲಿದೆ ಎಂಬ ಸುದ್ದಿಗಳು ಹರಿದಾಡಿದ ನಂತರ ಕಾಂಗ್ರೆಸ್ ನಾಯಕ ಪ್ರವೀಣ್ ಚಕ್ರವರ್ತಿ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾರು ಯಾರಿಗೆ ದ್ರೋಹ ಮಾಡುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ವಿರುದ್ಧ ಸ್ವಪಕ್ಷಿಯ ನಾಯಕ ಟೀಕೆ

ಟಿವಿಕೆ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದಕ್ಕೆ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅಸಮಾಧಾನಗೊಂಡಿದ್ದಾರೆ. ಈ ಮೈತ್ರಿಯನ್ನು ಅವರು ಭಯಾನಕ ಎಂದು ಕರೆದಿದ್ದಾರೆ. ಕಾಂಗ್ರೆಸ್‌ನ ಈ ನಡೆ ಕೀಳುಮಟ್ಟದ ರಾಜಕೀಯ ಅವಕಾಶವಾದ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಟಿವಿಕೆಯನ್ನು ಕಾಂಗ್ರೆಸ್‌ ವಿರೋಧಿಸಿತ್ತು. ಇದೀಗ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ, ಸ್ವರಾಜ್ಯವು ನೈತಿಕತೆಯ ಆಧಾರದ ಮೇಲೆ ಸರ್ಕಾರವಾಗಿರಬೇಕು ಎಂಬ ಮಹಾತ್ಮ ಗಾಂಧಿಯವರ 1925ರ ಸೂತ್ರವನ್ನು ಪಕ್ಷ ಉಲ್ಲಂಘಿಸಿದೆ ಎಂದು ಅವರು ಹೇಳಿದರು. ಇಂತಹ ಅನುಕೂಲಸಿಂಧು ರಾಜಕೀಯವು ಮುಂದುವರಿಯುವ ಮಾರ್ಗವಲ್ಲ ಎಂದು ಅಯ್ಯರ್ ತಿಳಿಸಿದರು.