ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗ್ರೇಟರ್‌ ನೋಯ್ಡಾದ ಒಂದೇ ಕುಟುಂಬದ ಐವರ ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌; ನೂಡಲ್ಸ್‌ಗೆ ವಿಷ ಬೆರೆಸಿದ್ದೇ ಮಕ್ಕಳ ತಂದೆ! ಜಮೀನು ವಿವಾದವೇ ಕೃತ್ಯಕ್ಕೆ ಕಾರಣ?

Noida Family Deaths: ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಇವರ ಸಾವು ಆಕಸ್ಮಿಕವಲ್ಲ, ಬದಲಾಗಿ ಸಾಮೂಹಿಕ ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ. ನೂಡಲ್ಸ್‌ಗೆ ವಿಷ ಬೆರೆಸಿ ಸೇವಿಸಿದ್ದಾಗಿ ಹೇಳಿದ್ದಾರೆ.

ನೋಯ್ಡಾದ ಒಂದೇ ಕುಟುಂಬದ ಐವರ ಸಾವಿಗೆ ಕಾರಣ ನೂಡಲ್ಸ್‌ ಅಲ್ಲ!

ಗ್ರೇಟರ್‌ ನೋಯ್ಡಾದಲ್ಲಿ ಆತ್ಮಹತ್ಯೆಗೆ ಶರಣಾದ ಕುಟುಂಬ -

Ramesh Ballamoole
Ramesh Ballamoole Oct 18, 2026 4:57 PM

ಲಖನೌ, ಅ. 18: ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಆರಂಭದಲ್ಲಿ ನೂಡಲ್ಸ್‌ ಸೇವಿಸಿ ಈ ಐವರು ಮೃತಪಟ್ಟಿದ್ದಾರೆ ಎನ್ನಲಾಗಿತ್ತು (Noida Family Deaths). ಪ್ರಕರಣ ಕೈಗೆತ್ತಿಕೊಂಡ ಪೊಲೀಸರ ಮುಂದೆ ಬೆಚ್ಚಿ ಬೀಳಿಸುವ ಅಂಶ ತೆರೆದುಕೊಂಡಿದೆ. ಇದು ಆಕಸ್ಮಿಕ ಸಾವಲ್ಲ, ಬದಲಾಗಿ ಜಮೀನು ವಿವಾದದ ಕಾರಣಕ್ಕೆ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಶನಿವಾರ (ಅಕ್ಟೋಬರ್‌ 17) ಗ್ರೇಟರ್‌ ನೋಯ್ಡಾದ ನಂಗ್ಲಾ ಶ್ರೀಪಾದಮ್‌ ಗ್ರಾಮದ ತಮ್ಮ ಮನೆಯಲ್ಲಿ ಮಹೇಶ್‌ (37), ಆತನ ಪತ್ನಿ ಲಲಿತಾ (35), ಮಕ್ಕಳಾದ ಮಿಶ್ಟಿ (7), ಲಡ್ಡು (11) ಮತ್ತು ಸಾಕ್ಷಾತ್‌ (3) ಶವವಾಗಿ ಪತ್ತೆಯಾಗಿದ್ದರು. ಶನಿವಾರ ಬೆಳಗ್ಗೆ ಬಹಳ ಹೊತ್ತಾದರೂ ಮನೆ ಬಾಗಿಲು ತೆರೆಯದೇ ಇದ್ದಾಗ ನೆರೆಹೊರೆಯವರು ಅನುಮಾನಗೊಂಡು ನೋಡಿದಾಗ ಐವರು ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಹಿಂದಿನ ದಿನ ರಾತ್ರಿ ಅವರು ನೂಡಲ್ಸ್‌ ಮತ್ತು ಟೀ ಸೇವಿಸಿದ್ದಾಗಿ ಮಹೇಶ್‌ ಅವರ ತಾಯಿ ತಿಳಿಸಿದ್ದರು. ಹೀಗಾಗಿ ಫುಡ್‌ ಪಾಯಿಸನ್‌ನಿಂದ ಸಾವು ಸಂಭವಿಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿತ್ತು.

ಗ್ರೇಟರ್‌ ನೋಯ್ಡಾದ ಸಾಮೂಹಿಕ ಹತ್ಯೆಯ ಬಗ್ಗೆ ಪೊಲೀಸರಿಂದ ಮಾಹಿತಿ:



ಸಾವಿಗೆ ನಿಜವಾದ ಕಾರಣವೇನು?

ತನಿಖೆ ಕೈಗೆತ್ತಿಕೊಂಡ ಪೊಲೀಸರು ಇದೀಗ ಐವರ ಸಾವಿನ ನಿಜ ಕಾರಣ ಬಿಚ್ಚಿಟ್ಟಿದ್ದಾರೆ. ಮಹೇಶ್‌ ನೂಡಲ್ಸ್‌ನಲ್ಲಿ ವಿಷ ಬೆರೆಸಿದ್ದ ಎಂದು ತಿಳಿಸಿದ್ದಾರೆ. ಆತನ ಮೊಬೈಲ್‌ನಲ್ಲಿ ಆಡಿಯೊ ನೋಟ್‌ ಲಭಿಸಿದ್ದು, ಅದರಲ್ಲಿ ಸಾವಿಗೆ ಇಬ್ಬರು ಸಹೋದರಿಯರು ಮತ್ತು ಬಾವಂದಿರು ಕಾರಣ ಎಂದಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಇದೀಗ ಅವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.

ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ: ಸಾವಿಗೂ ಮುನ್ನ ತಪ್ಪು ಮಾಡಿದ್ದಾಗಿ ಸ್ನೇಹಿತೆ ಬಳಿ ಹೇಳಿದ್ದೇಕೆ ಸಾಹಿಲ್ ವಕೋಡೆ

ಮಹೇಶ್‌ ಅವರ ಸಂಬಂಧಿ ನೀರಜಾ ಈ ಬಗ್ಗೆ ಮಾತನಾಡಿ ಜಮೀನಿಗೆ ಸಂಬಂಧಿಸಿದಂತೆ ಹಲವು ಸಮಯಗಳಿಂದ ಇರುವ ವಿವಾದ ಕುಟುಂಬಸ್ಥರ ತಲೆನೋವಿಗೆ ಕಾರಣವಾಗಿತ್ತು. ಪತಿಯ ಮರಣದ ನಂತರ ತಮ್ಮನ್ನು ಮನೆಯಿಂದ ಹೊರ ಹಾಕಲಾಗಿತ್ತು. ಮಹೇಶ್‌ ಮರಳಿ ಕರೆತರುವ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ.

ಗ್ರೇಟರ್‌ ನೋಯ್ದಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬ ಸದಸ್ಯರು:



ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾದರಿ ಸಂಗ್ರಹಿಸಿದ್ದಾರೆ. ಆಹಾರದಲ್ಲಿ ವಿಷ ಬೆರೆಸಿರುವುದನ್ನು ಅವರು ದೃಢಪಡಿಸಿದ್ದಾರೆ. ಫುಡ್‌ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿ ಒ.ಪಿ. ಸಿಂಗ್‌ ಮಾತನಾಡಿ, ಸ್ಥಳದಲ್ಲಿ ಸಿಕ್ಕ ಆಹಾರ ಪದಾರ್ಥಗಳನ್ನು, ರ‍್ಯಾಪರ್‌ ಪರಿಶೀಲಿಸಲಾಗಿದ್ದು, ಅವಧಿ ಮೀರಿದ ಯಾವುದೇ ವಸ್ತು ಸಿಕ್ಕಿಲ್ಲ ಎಂದಿದ್ದಾರೆ. ʼʼಫುಡ್‌ ಪಾಯಿಸನ್‌ ಆಗಿಲ್ಲ. ನೂಡಲ್ಸ್‌ಗೆ ವಿಷ ಬೆರೆಸಿರುವ ಸಾಧ್ಯತೆಯೇ ಅಧಿಕ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆʼʼ ಎಂದು ವಿವರಿಸಿದ್ದಾರೆ. ಫುಡ್‌ ಪಾಯಿಸನ್‌ನ ಸಾಮಾನ್ಯ ಲಕ್ಷಣವಾದ ವಾಂತಿ ಮಾಡಿರುವುದು ಕಂಡು ಬಂದಿಲ್ಲ. ʼʼಮೃತರ ಪೈಕಿ ಓರ್ವ ಮಗುವಿನ ಬಾಯಿಯಲ್ಲಿ ನೊರೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದು ವಿಷ ಸೇವನೆಯ ಲಕ್ಷಣʼʼ ಎಂದು ಅವರು ವಿವರಿಸಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.