ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜನ ಕೂತಿದ್ದರೂ ಕ್ಯಾರೇ ಎನ್ನದೆ ಸಾಕು ನಾಯಿ ಹೊತ್ತೊಯ್ದ ಚಿರತೆ: ಭಯಾನಕ ದೃಶ್ಯ ವೈರಲ್

Viral News: ಗುಜರಾತ್‌ನ ಜುನಾಗಢದಲ್ಲಿರುವ ಪ್ರೇರಣಾಧಮ್‌ನಲ್ಲಿ ಆಘತಕಾರಿ ಘಟನೆಯೊಂದು ನಡೆದಿದೆ. ಆಶ್ರಮದ ಮುಂಬಾಗಲ್ಲೇ ಜನ ಕೂತಿದ್ದರೂ ವೇಗವಾಗಿ ಬಂದ ಚಿರತೆಯೊಂದು ನಾಯಿಯ ಮೇಲೆ ಏಕಾಏಕಿ ದಾಳಿ ಮಾಡಿ ಹೊತ್ತೊಯ್ದಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಭಾರಿ ವೈರಲ್ ಆಗಿದೆ.

ಸಾಕು ನಾಯಿ ಮೇಲೆ ಏಕಾಏಕಿ ದಾಳಿ ನಡೆಸಿದ ಚಿರತೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಗುಜರಾತ್‌ನಲ್ಲಿ ನಾಯಿ ಮೇಲೆ ಏಕಾಏಕಿ ದಾಳಿ ನಡೆಸಿದ ಚಿರತೆ -

Profile
Pushpa Kumari Oct 18, 2026 5:23 PM

ಗಾಂಧಿನಗರ, ಅ. 18: ಕಾಡು ಪ್ರಾಣಿಗಳು ಜನ ವಸತಿ ಪ್ರದೇಶಕ್ಕೆ ಭೇಟಿ ನೀಡಿ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಗುಜರಾತ್‌ನ ಜುನಾಗಢದಲ್ಲಿರುವ ಪ್ರೇರಣಾಧಮ್‌ನಲ್ಲಿ ಆಘತಕಾರಿ ಘಟನೆಯೊಂದು ನಡೆದಿದೆ. ಆಶ್ರಮದ ಮುಂಬಾಗಲ್ಲೇ ಜನ ಕುತಿದ್ದರೂ ವೇಗವಾಗಿ ಬಂದ ಚಿರತೆಯೊಂದು ನಾಯಿಯ ಮೇಲೆ ಏಕಾಏಕಿ ದಾಳಿ ಮಾಡಿ ಹೊತ್ತೊಯ್ದಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಭಾರಿ ವೈರಲ್ (Viral News) ಆಗಿದೆ.

ಗುಜರಾತ್‌ನ ಜುನಾಗಢದಲ್ಲಿರುವ 'ಪ್ರೇರಣಾಧಾಮ ಆಶ್ರಮ'ದ ಹೊರಗೆ ಈ ಘಟನೆ ನಡೆದಿದೆ. ಕೆಲವೇ ಮೀಟರ್‌ಗಳ ಅಂತರದಲ್ಲಿ ಜನರು ಕುಳಿತಿದ್ದಾಗ, ಸಂಜೆ 7.30ರ ಸುಮಾರಿಗೆ ಚಿರತೆಯೊಂದು ಒಮ್ಮಿಂದೊಮ್ಮಲೆ ಆಗಮಿಸಿದ್ದು ನಾಯಿಯನ್ನು ಎತ್ತಿಕೊಂಡು ಹೋಗಿದೆ. ಆಶ್ರಮದ ಉಸ್ತುವಾರಿ ರಾಜ್‌ಭಾಯಿ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಈ ಘಟನೆಯ ಅರಿವಾಗಿದೆ.

ಚಿರತೆ ದಾಳಿಯ ವಿಡಿಯೊ ನೋಡಿ:



ವೈರಲ್ ಆದ ವಿಡಿಯೊದಲ್ಲಿ ಕೆಲವೇ ದೂರದಲ್ಲಿ ಮೂವರು ವ್ಯಕ್ತಿಗಳು ಬೆಂಚ್ ಮೇಲೆ ಕುಳಿತು ಮೊಬೈಲ್ ನೋಡುತ್ತಾ ಪರಸ್ಪರ ಮಾತನಾಡುತ್ತಿದ್ದರು. ಚಿರತೆ ಅಷ್ಟು ಹತ್ತಿರಕ್ಕೆ ಬಂದು ಕೆಲವೇ ಕ್ಷಣಗಳಲ್ಲಿ ದಾಳಿ ನಡೆಸಿ ನಾಯಿಯನ್ನು ಹೊತ್ತೊಯ್ದಿದೆ.

ಕೇರಳಂ ಮೀರಿಸುವ ಹೊನ್ನಾವರ ಹಿನ್ನೀರು ಸ್ವರ್ಗ

ಆದರೆ ಅಲ್ಲಿದ್ದ ಯಾರಿಗೂ ಆ ಕ್ಷಣದಲ್ಲಿ ವಿಷಯದ ಸುಳಿವೇ ಸಿಕ್ಕಿರಲಿಲ್ಲ. ಸದ್ಯ ಕಾಡು ಪ್ರಾಣಿಗಳು ಜನನಿಬಿಡ ಪ್ರದೇಶಗಳಿಗೂ ಭೇಟಿ ನೀಡುತ್ತಿದ್ದು ಸ್ಥಳೀಯರಲ್ಲಿ ಹಾಗೂ ಆಶ್ರಮದ ಆವರಣದಲ್ಲಿ ಭಯದ ವಾತಾವರಣ ಉಂಟು ಮಾಡಿದೆ.