ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೆಬ್ಬಾವನ್ನೇ ಹಗ್ಗದಂತೆ ಬಳಸಿ ಹುಚ್ಚಾಟ ಮೆರೆದ ಯುವಕರು; ಅಮಾನುಷ ಕೃತ್ಯ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

Viral Video: ಕೇರಳಂನ ಎರ್ನಾಕುಳಂನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಾಲ್ವರು ಯುವಕರು ಜೀವಂತ ಹೆಬ್ಬಾವು ಒಂದನ್ನು ಹಿಡಿದುಕೊಂಡು ವಿಕೃತ ಮೆರೆಯುತ್ತಿರುವುದು ಕಂಡು ಬಂದಿದೆ. ಇವರಲ್ಲಿ ಇಬ್ಬರು ಹಾವನ್ನು ಆಚೀಚೆ ತಿರುಗಿಸುತ್ತಿದ್ದರೆ, ಮತ್ತೊಬ್ಬ ಯುವಕ ಅದನ್ನು ಹಗ್ಗದಂತೆ ಬಳಸಿಕೊಂಡು ಅದರ ಮೇಲಿಂದ ಜಿಗಿಯುತ್ತಿರುವುದು ಕಂಡು ಬಂದಿದೆ. ಈ ವಿಡಿಯೊ ವೈರಲ್‌ ಆಗುತ್ತಿದ್ಧಂತೆ ನೆಟ್ಟಿಗರು ಕಿಡಿಕಾರಿದ್ದು, ಯುವಕರ ವಿರುದ್ಧ ಕ್ರಮ ಕೈಗೊ‍ಳ್ಳುವಂತೆ ಆಗ್ರಹಿಸಿದ್ದಾರೆ.

ಹೆಬ್ಬಾವು ಜತೆ ವಿಕೃತಿ ಮೆರೆದ ಯುವಕರು: ವಿಡಿಯೊ ವೈರಲ್

ಸಾಂದರ್ಭಿಕ ಚಿತ್ರ -

Profile
Pushpa Kumari Oct 18, 2026 5:12 PM

ತಿರುವನಂತಪುರಂ, ಅ. 18: ವನ್ಯ ಜೀವಿಗಳ ರಕ್ಷಣೆ ಬಗ್ಗೆ ಸರ್ಕಾರ ಎಷ್ಟು ಜಾಗೃತಿ ಮೂಡಿಸಿದರೂ ಜನರ ವರ್ತನೆಗಳು ಬದಲಾಗುತ್ತಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಕೇರಳಂನ ಎರ್ನಾಕುಳಂನಲ್ಲಿ ಆಘತಕಾರಿ ಘಟನೆಯೊಂದು (Viral News) ನಡೆದಿದೆ. ನಾಲ್ವರು ಯುವಕರು ಜೀವಂತ ಹೆಬ್ಬಾವು ಒಂದನ್ನು ಹಿಡಿದುಕೊಂಡು ವಿಕೃತ ಮೆರೆಯುತ್ತಿರುವುದು ಕಂಡುಬಂದಿದೆ. ಇವರಲ್ಲಿ ಇಬ್ಬರು ಹಾವನ್ನು ಆಚೀಚೆ ತಿರುಗಿಸುತ್ತಿದ್ದರೆ, ಮತ್ತೊಬ್ಬ ಯುವಕ ಅದನ್ನು ಹಗ್ಗದಂತೆ ಬಳಸಿಕೊಂಡು ಅದರ ಮೇಲಿಂದ ಜಿಗಿದಿದ್ದಾನೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಅಗಿದೆ.

ಹೆಬ್ಬಾವನ್ನು ಯುವಕರು ಹಗ್ಗದಂತೆ ಬಳಸಿ ಆಟವಾಡಿರುವ ಆಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಸಕ್ಕೆ ಕಾರಣವಾಗಿದೆ. ʼಸ್ಟ್ರೀಟ್ ಡಾಗ್ ಆಫ್ ಬಾಂಬೆ' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೊ ಹಂಚಿ ಕೊಳ್ಳಲಾಗಿದ್ದು, ಕೇರಳಂ ಅರಣ್ಯ ಇಲಾಖೆಯು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ವಿಡಿಯೊ ನೋಡಿ:

ನಾಲ್ವರು ಯುವಕರು ಜೀವಂತ ಹೆಬ್ಬಾವಿನೊಂದಿಗೆ ವಿಕೃತ ಮೆರೆದಿದ್ದಾರೆ‌. ಇಬ್ಬರು ಯುವಕರು ದೊಡ್ಡ ಗಾತ್ರದ ಹೆಬ್ಬಾವಿನ 2 ತುದಿಯನ್ನು ಹಿಡಿದಿದ್ದರೆ ಮತ್ತೊಬ್ಬ ಯುವಕ ಆ ಹೆಬ್ಬಾವನ್ನೇ ರೋಪ್ ರೀತಿಯಲ್ಲಿ ಬಳಸಿಕೊಂಡು ಅದರ ಮೇಲೆ ಜಿಗಿದಿದ್ದಾನೆ. ತಮ್ಮ ಹುಚ್ಚಾಟಕ್ಕಾಗಿ ಕಾಡು ಪ್ರಾಣಿಗಳನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!

ಪ್ರಾಣಿಗಳಿಗೂ ಸುರಕ್ಷಿತವಾಗಿರಲು ಮತ್ತು ತಮ್ಮ ನೈಸರ್ಗಿಕ ಆವಾಸಸ್ಥಾನಗಳಲ್ಲಿ ಬದುಕಲು ಹಕ್ಕಿದೆ. ತಮ್ಮ ಆನಂದಗೋಸ್ಕರ ಈ ರೀತಿಯಾಗಿ ವರ್ತನೆ ತೋರುವುದು ತಪ್ಪು ಎಂದು ಈ ಪೇಜ್ ತೀವ್ರವಾಗಿ ಖಂಡಿಸಿದೆ. ಪ್ರಾಣಿ ಹಿಂಸೆಯ ಈ ವಿಡಿಯೊ ವ್ಯಾಪಕವಾಗಿ ಹರಡುತ್ತಿದ್ದಂತೆ, ಸಾರ್ವಜನಿಕರು ಕೇರಳಂ ಪೊಲೀಸರಿಗೆ ಟ್ಯಾಗ್ ಮಾಡಿ ಕೂಡಲೇ ತಪ್ಪಿತಸ್ಥರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.