ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಾಪತ್ತೆಯಾಗಿದ್ದ ಸುಖೋಯ್ ಜೆಟ್ ಅಸ್ಸಾಂನಲ್ಲಿ ಪತನ: ಇಬ್ಬರು ಪೈಲಟ್ ಬಲಿ

ಅಸ್ಸಾಂನ ಜೋರ್ಹತ್‌ನಿಂದ ಹಾರಿದ ಬಳಿಕ ನಾಪತ್ತೆಯಾಗಿದ್ದ ಸುಖೋಯ್ ಜೆಟ್ ಪತನಗೊಂಡಿದ್ದು, ವಾಯುಪಡೆಯ ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿದ್ದಾರೆ. ಸುಖೋಯ್ ಸು -30 ಎಂಕೆಐ ಫೈಟರ್ ಜೆಟ್ ಗುರುವಾರ ಸಂಜೆ ರಾಡಾರ್ ಸಂಪರ್ಕವನ್ನು ಕಳೆದುಕೊಂಡು ನಾಪತ್ತೆಯಾಗಿತ್ತು. ಇದು ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಪತನಗೊಂಡಿತ್ತು.

ಸುಖೋಯ್ ಜೆಟ್ ಪತನ: ಇಬ್ಬರು ಪೈಲೆಟ್ ಸಾವು

ಸಂಗ್ರಹ ಚಿತ್ರ -

ಅಸ್ಸಾಂ: ಭಾರತೀಯ ವಾಯುಪಡೆಯ (Indian Air Force) ಸುಖೋಯ್ ಜೆಟ್ (Sukhoi Su-30MKI fighter jet) ಅಸ್ಸಾಂನಲ್ಲಿ ಗುರುವಾರ ಸಂಜೆ ಪತನಗೊಂಡಿದೆ. ಇದರಲ್ಲಿದ್ದ ಇಬ್ಬರು ಪೈಲಟ್‌ಗಳು (pilot) ಸಾವನ್ನಪ್ಪಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಡೆಯುತ್ತಿರುವ ಮಧ್ಯೆ ಸುಖೋಯ್ ಸು -30 ಎಂಕೆಐ (Sukhoi Su-30 MKI) ಫೈಟರ್‌ ಜೆಟ್‌ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿತ್ತು. ಇದು ಜೋರ್ಹತ್‌ನಿಂದ ಹಾರಿದ ಸ್ವಲ್ಪ ಸಮಯದ ಬಳಿಕ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಪತನಗೊಂಡಿತ್ತು. ಈ ಜೆಟ್ ಸಂಜೆ 7.42ರ ಸುಮಾರಿಗೆ ರಾಡಾರ್ ಸಂಪರ್ಕದಿಂದ ಕಡಿತಗೊಂಡಿತುʼ ಎಂದು ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮಿತ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಜೋರ್ಹತ್‌ನಿಂದ ಗುರುವಾರ ಸಂಜೆ ಹಾರಿದ ಸ್ವಲ್ಪ ಸಮಯದ ಅನಂತರ ರಾಡಾರ್ ಸಂಪರ್ಕ ಕಳೆದುಕೊಂಡ ಸುಖೋಯ್ ಸು -30 ಎಂಕೆಐ ಫೈಟರ್ ಜೆಟ್ ಸ್ವಲ್ಪ ಸಮಯದ ನಂತರ ರಾಡಾರ್ ಸಂಪರ್ಕ ಕಳೆದುಕೊಂಡು ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಪತನಗೊಂಡಿದೆ. ಇದರಲ್ಲಿದ್ದ ಇಬ್ಬರು ವಾಯುಪಡೆಯ ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಐಎಎಫ್ ಪೈಲಟ್‌ಗಳಲ್ಲಿ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಮೃತರು ಎಂದು ಗುರುತಿಸಲಾಗಿದೆ ಎಂದು ಭಾರತೀಯ ವಾಯುಪಡೆ ಶುಕ್ರವಾರ ದೃಢಪಡಿಸಿದೆ.

ಎಂಬಿಬಿಎಸ್‌ ಸೀಟ್‌ ಕೊಡಿಸೋದಾಗಿ ಯುವತಿಗೆ 25 ಲಕ್ಷ ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್‌

ಜೋರ್ಹತ್ ವಾಯುನೆಲೆಯಿಂದ ಸುಮಾರು 60 ಕಿಮೀ ದೂರದಲ್ಲಿರುವ ಕರ್ಬಿ ಅಂಗ್ಲಾಂಗ್‌ನ ಗುಡ್ಡಗಾಡು ಪ್ರದೇಶದಲ್ಲಿ ಫೈಟರ್ ಜೆಟ್ ಪತನಗೊಂಡಿತ್ತು. ಫೈಟರ್ ಜೆಟ್ ನಾಪತ್ತೆಯಾದ ತಕ್ಷಣವೇ ಭಾರತೀಯ ವಾಯುಪಡೆಯು ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಜೋರ್ಹತ್ ಹಾರಾಟ ನಡೆಸಿದ ಅನಂತರ ಫೈಟರ್ ಜೆಟ್ನೆ ಲದ ನಿಯಂತ್ರಣದೊಂದಿಗೆ ಕೊನೆಯ ಸಂವಹನ ನಡೆಸಿದ್ದು ಸಂಜೆ 7.42ಕ್ಕೆ ಎಂದು ಅಧಿಕಾರಿಗಳು ಹೇಳಿದ್ದಾರೆ.



2000ರ ದಶಕದ ಆರಂಭದಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ರಷ್ಯಾ ಅಭಿವೃದ್ಧಿ ಪಡಿಸಿದ ಸುಖೋಯ್ ಸು-30 ಎಂಕೆಐ ಅನ್ನು ಅತ್ಯಂತ ಸಮರ್ಥ ಯುದ್ಧ ವಿಮಾನ ಎಂದು ಪರಿಗಣಿಸಲಾಗಿದೆ. ಭಾರತೀಯ ವಾಯುಪಡೆಯು ಪ್ರಸ್ತುತ 200 ಕ್ಕೂ ಹೆಚ್ಚು ಸುಖೋಯ್ ಜೆಟ್‌ಗಳ ಫ್ಲೀಟ್ ಅನ್ನು ಹೊಂದಿದೆ.

ಭಾರತ ಮತ್ತು ರಷ್ಯಾ ರಕ್ಷಣಾ ಒಪ್ಪಂದದ ಭಾಗವಾಗಿ ನಿರ್ಮಿಸಲಾಗುತ್ತಿರುವ ಸುಖೋಯ್‌ ಎಸ್‌ಯು 30ಎಂಕೆಐ 2 ಅನ್ನು ಹಿಂದೂಸ್ತಾನ್‌ ಏರೋನಾಟಿಕ್ಸ್‌ (HAL) ದೇಶದಲ್ಲೇ ನಿರ್ಮಿಸುತ್ತಿದೆ. ಎಲ್ಲ ರೀತಿಯ ಹವಾಮಾನಕ್ಕೆ ಹೊಂದಿಕೊಳ್ಳುವ ಇದು ದೀರ್ಘ ಶ್ರೇಣಿಯ ಯುದ್ಧ ವಿಮಾನವಾಗಿದೆ.

Appke EV Scooter Scam: ಬೆಂಗಳೂರಿನಲ್ಲಿ ಇವಿ ಸ್ಕೂಟರ್ ಶೋ ರೂಮ್‌ನಿಂದ 35 ಕೋಟಿ ರೂ. ವಂಚನೆ; ಗ್ರಾಹಕರ ಹೆಸರಲ್ಲಿ 35,000 ಬೆಲೆಯ ವಾಹನಕ್ಕೆ 1.50 ಲಕ್ಷ ಲೋನ್‌!

ಸುಖೋಯ್‌ ಎಸ್‌ಯು ಫೈಟರ್ ಜೆಟ್ ಪತನಗೊಂಡಿರುವುದು ಇದು ಮೊದಲೇನಲ್ಲ. ಈ ಹಿಂದೆ 2017ರಲ್ಲಿ ನಾಪತ್ತೆಯಾದ ಮೂರು ದಿನಗಳ ಬಳಿಕ ತೇಜ್‌ಪುರದಿಂದ ಸುಮಾರು 60 ಕಿ.ಮೀ. ದೂರದ ದಟ್ಟ ಕಾಡಿನಲ್ಲಿ ವಿಮಾನದ ಅವಶೇಷ ಪತ್ತೆಯಾಗಿತ್ತು. ಇದರ ಬಳಿಕ 2024ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಿಂದ ನಾಪತ್ತೆಯಾಗಿದ್ದ ಸುಖೋಯ್ ಎಸ್‌ಯು 30 ಫೈಟರ್ ಜೆಟ್ ನಿಫಾದ್ ತಹಸಿಲ್‌ನ ಶಿರಸ್ಗಾಂವ್ ಗ್ರಾಮದ ಬಳಿ ಪತನಗೊಂಡಿತ್ತು. ಇದರಲ್ಲಿದ್ದ ಪೈಲೆಟ್ ಗಳು ಅಪಾಯದಿಂದ ಪಾರಾಗಿದ್ದರು.