ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪತ್ರಕರ್ತ, ಸಾಹಿತಿ ಮಾರ್ಕ್‌ ಟುಲ್ಲಿ ನಿಧನ

Mark Tully: ಬ್ರಿಟನ್‌ ಮೂಲದ ಹಿರಿಯ ಪತ್ರಕರ್ತ, ಖ್ಯಾತ ಲೇಖಕ ಮಾರ್ಕ್‌ ಟುಲ್ಲಿ ದೆಹಲಿಯ ಸಾಕೇತ್‌ನಲ್ಲಿ ಜನವರಿ 25ರಂದು ನಿಧನ ಹೊಂದಿದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಸಾಕೇತ್‌ನ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪತ್ರಕರ್ತ, ಸಾಹಿತಿ ಮಾರ್ಕ್‌ ಟುಲ್ಲಿ ನಿಧನ

ಹಿರಿಯ ಪತ್ರಕರ್ತ ಮಾರ್ಕ್‌ ಟುಲ್ಲಿ (ಸಂಗ್ರಹ ಚಿತ್ರ) -

Ramesh B
Ramesh B Jan 25, 2026 8:47 PM

ದೆಹಲಿ, ಜ. 25: ಬ್ರಿಟನ್‌ ಮೂಲದ ಹಿರಿಯ ಪತ್ರಕರ್ತ, ಖ್ಯಾತ ಲೇಖಕ ಮಾರ್ಕ್‌ ಟುಲ್ಲಿ (Mark Tully) ದೆಹಲಿಯ ಸಾಕೇತ್‌ನಲ್ಲಿ ಜನವರಿ 25ರಂದು ನಿಧನ ಹೊಂದಿದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಸಾಕೇತ್‌ನ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ʼʼಜನವರಿ 25ರ ಅಪರಾಹ್ನ ಮಾರ್ಕ್‌ ಟುಲ್ಲಿ ಸಾಕೇತ್‌ನ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆʼʼ ಎಂದು ಅವರ ಸ್ನೇಹಿತ ಸತೀಶ್‌ ಜಾಕಬ್‌ ದೃಢಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 1935ರ ಅಕ್ಟೋಬರ್‌ 24ರಂದು ಟುಲ್ಲಿ ಜನಿಸಿದರು. ಬಿಬಿಸಿ ಸುದ್ದಿಸಂಸ್ಥೆಯ ದೆಹಲಿ ಬ್ಯೂರೋ ಮುಖ್ಯಸ್ಥರಾಗಿ ಸುಮಾರು 22 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಬಿಬಿಸಿ ರೆಡಿಯೋಕ್ಕಾಗಿ ಅವರು ನೀಡಿದ್ದ ʼಸಂಥಿಂಗ್‌ ಅಂಡರ್‌ಸ್ಟುಡ್‌ʼ (Something Understood) ಕಾರ್ಯಕ್ರಮ ಜನಪ್ರಿಯವಾಗಿತ್ತು. ಇವರಿಗೆ ಕೇಂದ್ರ ಸರ್ಕಾರ 2005ರಲ್ಲಿ ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿ ನೀಡಿತ್ತು. ಅಲ್ಲದೆ ಪದ್ಮಶ್ರೀ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.



ಕೃತಿ ರಚನೆ

ಟುಲ್ಲಿ ಭಾರತದ ಬಗ್ಗೆ ಹಲವು ಕೃತಿ ರಚಿಸಿದ್ದಾರೆ. ಇವುಗಳಲ್ಲಿ ‘No Full Stops in India', ‘India in Slow Motion', and ‘The Heart of India' ಕೃತಿಗಳು ಮುಖ್ಯವಾದವು. ಪತ್ರಕರ್ತರಾಗಿ ಹಲವು ಮುಖ್ಯ ಘಟನೆಗಳನ್ನು ಅವರು ವರದಿ ಮಾಡಿದ್ದರು. ಯುದ್ಧ, ದಂಗೆ, ಆತ್ಮಾಹುತಿ ದಾಳಿ, ಮಧ್ಯ ಪ್ರದೇಶದ ಭೋಪಾಲ್‌ ಗ್ಯಾಸ್‌ ದುರಂತ ಮತ್ತು ಪಂಜಾಬ್‌ನ ಅಮೃತಸರ ಗೋಲ್ಡನ್‌ ಟೆಂಪಲ್‌ಗೆ ಯೋಧರ ಪ್ರವೇಶ ಹೀಗೆ ಹಲವು ಪ್ರಮುಖ ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದರು.

ಅವರು ತಮ್ಮ ಬ್ರಿಟಿಷ್ ಪೌರತ್ವವನ್ನು ಎಂದಿಗೂ ತ್ಯಜಿಸಿರಲಿಲ್ಲ. ತಾವು ಭಾರತದ ಸಾಗರೋತ್ತರ ನಾಗರಿಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ʼʼನಾನು ಎರಡೂ ದೇಶಕ್ಕೆ ಸೇರಿದ ನಾಗರಿಕ ಎನ್ನುವ ಭಾವನೆ ನನ್ನಲ್ಲಿದೆʼʼ ಎನ್ನುತ್ತಿದ್ದರು.

ಭಾರತ-ಚೀನಾ ಯುದ್ಧದ ಸಮಯದಲ್ಲಿ 600 ಕೆಜಿ ಚಿನ್ನ ದಾನ ಮಾಡಿದ್ದ ರಾಣಿ ನಿಧನ; ದೇಶಕ್ಕೆ ಈ ರಾಜಮನೆತನದ ಕೊಡುಗೆಯೆಷ್ಟು ಗೊತ್ತಾ?

ಸಂತಾಪ

ಟುಲ್ಲಿ ಅವರ ನಿಧನಕ್ಕೆ ವಿವಿದ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಲವು ರಾಜಕಾರಣಿಗಳು, ಪತ್ರಕರ್ತರು, ಪ್ರಾಧ್ಯಾಪಕರು ಮತ್ತು ಶಿಕ್ಷಣ ತಜ್ಞರು ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಧ್ಯಮ ಮತ್ತು ಪ್ರಚಾರ ಅಧ್ಯಕ್ಷ ಪವನ್ ಖೇರಾ, "ನನ್ನಂತೆಯೇ ಅನೇಕರು ಅವರ ಧ್ವನಿಯನ್ನು ಕೇಳುತ್ತ, ಅವರ ಪುಸ್ತಕಗಳನ್ನು ಓದುತ್ತ ಬೆಳೆದವರು. ಅವರು ವರ್ಷಗಳ ಕಾಲ ವಾಸಿಸುತ್ತಿದ್ದ ಮತ್ತು ಪ್ರೀತಿಸುತ್ತಿದ್ದ ಪ್ರದೇಶದಲ್ಲಿಯೇ ನಾನು ವಾಸಿಸುತ್ತಿದ್ದೆ" ಎಂದು ಪೋಸ್ಟ್‌ ಮಾಡಿದ್ದಾರೆ.

ಪತ್ರಕರ್ತ ಜಿ.ಎನ್.ನಾಗರಾಜ್ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಂದ ಸಂತಾಪ

ಜೆಎನ್‌ಯುನ ಅಂತಾರಾಷ್ಟ್ರೀಯ ಅಧ್ಯಯನ ಶಾಲೆಯ ಡೀನ್ ಮತ್ತು ಪ್ರಾಧ್ಯಾಪಕ ಅಮಿತಾಭ್ ಮಟ್ಟೂ ದುಃಖ ವ್ಯಕ್ತಪಡಿಸಿದ್ದಾರೆ, "ರಿಪ್‌ ಮಾರ್ಕ್ ಟುಲ್ಲಿ-ಪತ್ರಿಕೋದ್ಯಮದಲ್ಲಿ ಅತ್ಯುನ್ನತ ಧ್ವನಿ ಮತ್ತು ಸಂಸ್ಕೃತಿಗಳ ನಡುವಿನ ಸೇತುವೆ" ಎಂದು ಹೇಳಿದ್ದಾರೆ. "ಪತ್ರಕರ್ತ ಮತ್ತು ಬರಹಗಾರ ಮಾರ್ಕ್ ಟುಲ್ಲಿ ಇನ್ನು ಮುಂದೆ ನಮ್ಮೊಂದಿಗಿಲ್ಲ. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಸಂತಾಪಗಳುʼʼ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.