ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fact Check: ಜಲಂಧರ್, ಹಜೀರಾ ಬಂದರಿನ ಮೇಲೆ ಪಾಕ್ ದಾಳಿ ಎನ್ನಲಾಗುವ ವಿಡಿಯೊ ನಕಲಿ: ಪಿಐಬಿ ಸ್ಪಷ್ಟನೆ

ಪಾಕಿಸ್ತಾನವು ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ನಾಗರಿಕರು ಎಚ್ಚರದಿಂದ ಇರುವಂತೆ ಹೇಳಿ ಕೆಲವು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಜಲಂಧರ್, ಬೈರುತ್ ಮತ್ತು ಹಜೀರಾದಲ್ಲಿ ದಾಳಿ ನಡೆದಿದೆ ಎನ್ನುವ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದ್ದು ಇದು ಸುಳ್ಳು ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ (PIB) ತಿಳಿಸಿದೆ.

ಜಲಂಧರ್, ಹಜೀರಾ ಬಂದರಿನ ಮೇಲೆ ದಾಳಿ ವಿಡಿಯೊ ನಕಲಿ

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ (Operation Sindoor) ನಡುವೆ ಉದ್ವಿಗ್ನತೆ ಹಚ್ಚಾಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯು ಹೆಚ್ಚುತ್ತಿದೆ. ಪಾಕಿಸ್ತಾನವು ಭಾರತದ ಮೇಲೆ ಕ್ಷಿಪಣಿ ದಾಳಿ (Missile Attack) ನಡೆಸಿದೆ. ನಾಗರಿಕರು ಎಚ್ಚರದಿಂದ ಇರುವಂತೆ ಹೇಳಿ ಕೆಲವು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ನೈಜತೆ ಪರಿಶೀಲನೆ (Fact Check) ವೇಳೆ ಇವೆಲ್ಲ ಸುಳ್ಳು ಎಂದು ತಿಳಿದು ಬಂದಿದೆ. ಜಲಂಧರ್ , ಬೈರುತ್ ಮತ್ತು ಹಜೀರಾದಲ್ಲಿ ದಾಳಿ ನಡೆದಿದೆ ಎನ್ನುವ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದ್ದು ಇದು ಸುಳ್ಳು ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ (PIB) ತಿಳಿಸಿದೆ.



ಜಲಂಧರ್‌ನಲ್ಲಿ ನಡೆದ ಡ್ರೋನ್ ದಾಳಿಯ ಘಟನೆಗಳನ್ನು ತೋರಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ಈ ವಿಡಿಯೊ ಕುರಿತು ನೈಜತೆ ಪರಿಶೀಲನೆ ನಡೆಸಿದ ಪಿಐಬಿನ ಸತ್ಯ ಪರಿಶೀಲನಾ ತಂಡ ಇದೊಂದು ಸುಳ್ಳು ಸುದ್ದಿ ಎಂದು ತಿಳಿಸಿದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಈಗ ಉದ್ಭವಾಗಿರುವ ಸನ್ನಿವೇಶಕ್ಕೂ ಈ ವಿಡಿಯೊಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೃಷಿಗೆ ಬೆಂಕಿ ಬಿದ್ದ ಘಟನೆಯಾಗಿದೆ ಎಂದು ತಿಳಿಸಿದೆ.

ಪಾಕಿಸ್ತಾನದ ಡ್ರೋನ್ ಚಟುವಟಿಕೆ ಮತ್ತು ಜಲಂಧರ್ ಮತ್ತು ನೆರೆಯ ಜಿಲ್ಲೆಗಳಲ್ಲಿ ಗುರುವಾರ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸೂಚನೆ ನೀಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ಈ ನಕಲಿ ವಿಡಿಯೊಗಳನ್ನು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.



ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪಿಐಬಿ ಜಲಂಧರ್‌ನಲ್ಲಿ ಡ್ರೋನ್ ದಾಳಿಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಇದು ಆಕಸ್ಮಿಕ ಬೆಂಕಿ ಘಟನೆಯ ವಿಡಿಯೊ. ಇದು ಸಂಜೆ 7.39ರ ಸಮಯವನ್ನು ತೋರಿಸುತ್ತಿದೆ. ಪಾಕಿಸ್ತಾನದ ಡ್ರೋನ್ ಚಟುವಟಿಕೆ ಅನಂತರ ನಡೆದಿದೆ ಎಂದು ಹೇಳಿದೆ.



ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿರುವ ಇನ್ನೊಂದು ವಿಡಿಯೊ ತುಂಬಾ ಹಳೆಯದು. ಪ್ರಸ್ತುತ ಭಾರತ- ಪಾಕಿಸ್ತಾನ ಸಂಘರ್ಷಕ್ಕೆ ಸಂಬಂಧಿಸಿಲ್ಲ ಎಂದು ಪಿಐಬಿ ಗುರುತಿಸಿದೆ. ಈ ವಿಡಿಯೊ 2020ರಲ್ಲಿ ಲೆಬನಾನ್‌ನ ಬೈರುತ್‌ನಲ್ಲಿ ನಡೆದ ವಿನಾಶಕಾರಿ ಸ್ಫೋಟಕ ದಾಳಿಯಾಗಿದೆ ಎಂದು ಪಿಐಬಿ ಹೇಳಿದೆ.

ಇದನ್ನೂ ಓದಿ: Operation Sindoor: ಬಿಎಸ್‌ಎಫ್ ಶಿಬಿರದ ಮೇಲೆ ಮತ್ತೆ ಪಾಕ್‌ ಡ್ರೋನ್ ದಾಳಿಗೆ ಯತ್ನ

ಇನ್ನು ಗುಜರಾತ್‌ನ ಹಜೀರಾ ಬಂದರಿನ ಮೇಲೆ ದಾಳಿ ನಡೆದಿದೆ ಎನ್ನುವ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದ್ದು ಇದು ಕೂಡ ನಕಲಿ ಸುದ್ದಿ ಎಂಬುದನ್ನು ಪಿಐಬಿ ಗುರುತಿಸಿದೆ. ಈ ವಿಡಿಯೊ ಬಂದರಿನಲ್ಲಿ ನಡೆದ ಯಾವುದೇ ಇತ್ತೀಚಿನ ಘಟನೆಗೆ ಸಂಬಂಧಿಸಿಲ್ಲ ಮತ್ತು ಈ ಘಟನೆ 2021ರ ಜುಲೈ 7ರಂದು ಸಂಭವಿಸಿದ್ದು. ಬಂದರಿನಲ್ಲಿ ತೈಲ ಟ್ಯಾಂಕರ್ ಸ್ಫೋಟಗೊಂಡಾಗ ಆಗಿರುವಂತದ್ದು ಎಂದು ಸ್ಪಷ್ಟಪಡಿಸಿದೆ.

ದೇಶದ ನಾಗರಿಕರ ಭದ್ರತೆಗೆ ಸಂಬಂಧಿಸಿ ನಿಖರವಾದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಬೇಕು. ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಿರಿ. ಸುದ್ದಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸುವಂತೆ ಪಿಐಬಿ ಹೇಳಿದೆ.