ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tirumala Tirupati Devasthana: ತಿರುಮಲದಲ್ಲಿ ಜುಲೈ 15, 16ರಂದು ವಿಐಪಿ ದರ್ಶನ ರದ್ದು

ತಿರುಮಲ ತಿರುಪತಿಯ ದರ್ಶನ ಪಡೆಯಲು ಹೊರಟಿದ್ದೀರಾ? ಹಾಗಿದ್ದರೆ ಈ ಸೂಚನೆ ನಿಮಗೆ ಮಹತ್ವದ್ದಾಗಲಿದೆ. ಯಾಕೆಂದರೆ ಈ ತಿಂಗಳಲ್ಲಿ 2 ದಿನ ತಿರುಮಲದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿಲ್ಲ. ಯಾವಾಗ, ಯಾಕೆ, ಯಾರಿಗೆಲ್ಲ ಈ ನಿಯಮ ಅನ್ವಯವಾಗಲಿದೆ ಎನ್ನುವ ಕುರಿತು ತಿರುಮಲ ತಿರುಪತಿ ದೇವಸ್ಥಾನ ಹೊರಡಿಸಿರುವ ಪ್ರಕಟಣೆ ಇಂತಿದೆ.

2 ದಿನ ತಿಮ್ಮಪ್ಪನ ದರ್ಶನಕ್ಕಿಲ್ಲ ಅವಕಾಶ

ತಿರುಪತಿ: ತಿರುಮಲ ತಿಮ್ಮಪ್ಪನ (Tirumala Thimmappa) ವಿಐಪಿ ದರ್ಶನಕ್ಕೆ ಜುಲೈ 15 ಮತ್ತು 16ರಂದು ಅವಕಾಶವಿಲ್ಲ. ಈ ಕುರಿತು ಪ್ರಕಟಣೆ ಹೊರಡಿಸಿರುವ ತಿರುಮಲ ತಿರುಪತಿ ದೇವಸ್ಥಾನಂ (Tirumala Tirupati Devasthanams), ವಾರ್ಷಿಕ ಕೋಯಿಲ್ ಆಳ್ವಾರ್ ತಿರುಮಂಜನಂ ಮತ್ತು ಅಣಿವರ ಆಷ್ಠನಂ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಈ ಎರಡು ದಿನಗಳ ಕಾಲ ವಿಐಪಿ ದರ್ಶನ ಸೇವೆಯನ್ನು ರದ್ದುಗೊಳಿಸಲಾಗಿದೆ. ನಿಯಮಾವಳಿಯಂತೆ ಅರ್ಹ ಗಣ್ಯರಿಗೆ ಮಾತ್ರ ದೇವರ ದರ್ಶನ ಸೇವೆ ಕಲ್ಪಿಸಲಾಗಿದ್ದು, ಉಳಿದ ಭಕ್ತರು ಸಹಕರಿಸುವಂತೆ ತಿಳಿಸಿದೆ.

ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜುಲೈ 15 ಮತ್ತು 16ರಂದು ಎರಡು ದಿನಗಳ ಕಾಲ ವಿಐಪಿ ಬ್ರೇಕ್ ದರ್ಶನಗಳನ್ನು ರದ್ದುಗೊಳಿಸಲಾಗಿದೆ.

ಜುಲೈ 15ರಂದು ದೇವಾಲಯದಲ್ಲಿ ವಾರ್ಷಿಕ ಕೋಯಿಲ್ ಆಳ್ವಾರ್ ತಿರುಮಂಜನಂ ಮತ್ತು ಜುಲೈ 16 ರಂದು ಅಣಿವರ ಆಷ್ಠನಂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಐಪಿ ದರ್ಶನ ಸೇವೆ ರದ್ದುಗೊಳಿಸಲಾಗಿದೆ. ಈ ಅವಧಿಯಲ್ಲಿ ಪ್ರೋಟೋಕಾಲ್ ವಿಐಪಿಗಳಿಗೆ ಮಾತ್ರ ವಿಐಪಿ ಬ್ರೇಕ್ ದರ್ಶನ ಸೇವೆ ಲಭ್ಯವಾಗಲಿದೆ.



ಜುಲೈ 15ರಂದು ನಡೆಯುವ ಕೊಯಿಲ್ ಆಳ್ವಾರ್ ತಿರುಮಂಜನಂನಲ್ಲಿ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವುದು ಮತ್ತು ಶುದ್ಧೀಕರಿಸಲಾಗುವುದು. ಇದರ ಮರುದಿನ ಜುಲೈ 16 ರಂದು ಅಣಿವರ ಆಷ್ಠನಂ ವಾರ್ಷಿಕ ಉತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ದರ್ಶನ ಕ್ರಮದಲ್ಲಿ ಕೊಂಚ ಬದಲಾವಣೆಗಳು ಆಗಲಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಹೊಸ ಕಚೇರಿ ಉದ್ಘಾಟಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಇತ್ತೀಚಿನ ದಿನಗಳಲ್ಲಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದೆ. ಜುಲೈ 4ರಂದು ಶುಕ್ರವಾರ 70 ಸಾವಿರಕ್ಕೂ ಹೆಚ್ಚು ಮಂದಿ ತಿಮ್ಮಪನ ದರ್ಶನ ಪಡೆದಿದ್ದಾರೆ ಎಂದು ಟಿಟಿಡಿ ತಿಳಿಸಿದೆ.