Viral News: ಇನ್‌ಸ್ಟಾದಲ್ಲಿ ಸ್ನೇಹ... ಆಮೇಲೆ ಲವ್- ಆತನ ಅಸಲಿಯತ್ತು ಬಯಲಾದಾಗ ಕಾಲ ಮಿಂಚಿತ್ತು!
ಗುರುಗ್ರಾಮ್ ಮೂಲದ 24 ವರ್ಷದ ಮಾರ್ಕೆಟರ್ ಕುಶಾಲಿನಿ ಪೌಲ್ ಸೋಶಿಯಲ್ ಮೀಡಿಯಾದಲ್ಲಿ ಎರಡು ವರ್ಷಗಳ ಹಿಂದೆ ಪರಿಚಯವಾದ ಗೆಳೆಯ ಸೌತಿಕ್ ಗಂಗೂಲಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾಳೆ. ಈ ಪೋಸ್ಟ್ ವೈರಲ್(Viral News) ಆಗಿದ್ದು, ನೆಟ್ಟಿಗರು ಆಕೆಗೆ ಬೆಂಬಲವನ್ನು ಸೂಚಿಸಿದ್ದಾರೆ.


ಚಂಢಿಗಡ್: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪ್ರೀತಿ ಪ್ರೇಮ ಧೋಖಾ ಕೇಸ್‌ಗಳು ಸರ್ವೇ ಸಾಮಾನ್ಯ ಎಂಬಂತಿದೆ. ದಿನಬೆಳಗಾದರೆ ಇಂತಹ ಸುದ್ದಿಗಳನ್ನು ನೋಡುತ್ತಿರುತ್ತೇವೆ. ಇದೀಗ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಗುರುಗ್ರಾಮ್ ಮೂಲದ 24 ವರ್ಷದ ಮಾರ್ಕೆಟರ್ ಕುಶಾಲಿನಿ ಪೌಲ್ ಎಂಬಾಕೆ ಸೋಶಿಯಲ್ ಮೀಡಿಯಾದಲ್ಲಿ ತನಗಾದ ಮೋಸದ ಬಗ್ಗೆ ಹಂಚಿಕೊಂಡಿದ್ದಾಳೆ. ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಭೇಟಿಯಾದ ತನ್ನ ಗೆಳೆಯ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅವಳು ಆರೋಪಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ಪೋಟೊಗಳನ್ನು ಅವಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಅದು ಈಗ ವೈರಲ್(Viral News) ಆಗಿದೆ. ಅಲ್ಲದೇ ಇತ್ತೀಚೆಗೆ ಅವನು ಅವಳ ಮೇಲೆ ಹಲ್ಲೆ ನಡೆಸಿ ಅವಳನ್ನು ಉಸಿರುಗಟ್ಟಿಸಿ ಕೊಲ್ಲಲ್ಲು ಪ್ರಯತ್ನಿಸಿದ್ದಾನಂತೆ. ಈ ಬಗ್ಗೆ ದೂರು ನೀಡಲು ಸ್ಥಳೀಯ ಠಾಣೆಗೆ ಹೋದಾಗ ಮಹಿಳಾ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿ ಅವನ ಕೃತ್ಯಗಳನ್ನು ಕ್ಷಮಿಸುವಂತೆ ಸಲಹೆ ನೀಡಿದ್ದಾರೆ ಎಂದು ಅವಳು ತಿಳಿಸಿದ್ದಾಳೆ.
ಸೋಶಿಯಲ್ ಮಿಡಿಯಾ ಪೋಸ್ಟ್‌ನಲ್ಲಿ ಅವಳು ಗಾಯಗೊಂಡ ತನ್ನ ಪೋಟೊ ಹಾಗೂ ತನ್ನ ಸಂಗಾತಿಯ ನೀಚ ಕೃತ್ಯಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದಾಳೆ. ಹಲ್ಲೆ ನಡೆಸಿದ ತನ್ನ ಸಂಗಾತಿ ಟ್ರಾವೆಲ್ ಆಧರಿತ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಂಪನಿಯಾದ ಅಟ್ಲಿಸ್‍ನಲ್ಲಿ ಕೆಲಸ ಮಾಡುತ್ತಿದ್ದ ಸೌತಿಕ್ ಗಂಗೂಲಿ ಎಂದು ತಿಳಿಸಿದ್ದಾಳೆ.
ಕುಶಾಲಿನಿ ಪೌಲ್ ಸೋಶಿಯಲ್ ಮೀಡಿಯಾ ಪೋಸ್ಟ್ ಇಲ್ಲಿದೆ



ಆಕೆ ತಿಳಿಸಿದಂತೆ ಇವರಿಬ್ಬರ ನಡುವಿನ ಪರಿಚಯ ಎರಡು ವರ್ಷದಷ್ಟು ಹಿಂದಿನದ್ದಂತೆ. ಫೋಟೊದಲ್ಲಿ ನೋಡಲು ಆತ ಹ್ಯಾಂಡಸಮ್ ಆಗಿದ್ದನಂತೆ. ಆದರೆ ದೆಹಲಿಯಲ್ಲಿ ಭೇಟಿಯಾದಾಗ, ಫೋಟೊದಲ್ಲಿ ಇದ್ದ ಹಾಗೇ ಇರಲಿಲ್ಲವಂತೆ. ಅದು ಅಲ್ಲದೇ, ಆತ ಕುಡಿದು ಅಮಲಿನಲ್ಲಿ ಬಂದು ಒಂಟಿಯಾಗಿದ್ದ ಪೌಲ್ ಮೇಲೆ ಹಲ್ಲೆ ಮಾಡಿದ್ದಾನಂತೆ. ಅವನು ಹೊಡೆದ ಏಟಿಗೆ ಅವಳ ಮುಖ ಕಪ್ಪು ಮತ್ತು ನೀಲಿ ಬಣ್ಣಕ್ಕೆ ತಿರುಗಿತ್ತು. ಅಷ್ಟೇ ಅಲ್ಲದೇ ಅವನು ಅವಳ ಕೂದಲನ್ನು ಹಿಡಿದು ಎಳೆದಾಡಿ ಅವಳ ತಲೆಯನ್ನು ಗೋಡೆಗೆ ಹೊಡೆದಿದ್ದಾನಂತೆ. ಅವನ ವಿರುದ್ಧ ಅವಳು ಹೋರಾಡಿದಾಗ ಆತ ಆಕೆಯ ಕುತ್ತಿಗೆ ಹಿಡಿದುಕೊಂಡು ಉಸಿರುಗಟ್ಟಿಸಲು ಪ್ರಯತ್ನಿಸಿದ್ದಾನೆ ಎಂದು ಆಕೆ ವಿವರಿಸಿದ್ದಾಳೆ.ವರದಿ ಪ್ರಕಾರ, ಪೌಲ್ ಮೂರು ವಾರಗಳ ಹಿಂದೆ ಬರ್ಲಿನ್‍ನಲ್ಲಿರುವ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಬಗ್ಗೆ ತಿಳಿಸಿದ ನಂತರ ಸೌತಿಕ್ ಈ ರೀತಿಯಾಗಿ ವರ್ತಿಸಿದ್ದಾನೆ ಎಂದು ಹೇಳಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಈ ಪ್ರವಾಸಿಗನ ಧೈರ್ಯಕ್ಕೆ ನೋಡುಗರೇ ಶಾಕ್! ಚಾಕು ಹಿಡಿದು ಪುಂಡಾಟ ಮೆರೆದವನಿಗೆ ಈ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ
ಆಕೆಯ ಪೋಸ್ಟ್ ವೈರಲ್ ಆಗಿದ್ದು, ಈ ವಿಚಾರದಲ್ಲಿ ನೆಟ್ಟಿಗರು ಆಕೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ನಿಂದನೆಯ ವಿರುದ್ಧ ಅವಳ ಧ್ವನಿ ಎತ್ತಿದ್ದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. "ನಿಮ್ಮ ಧೈರ್ಯ ಅದ್ಭುತವಾಗಿದೆ. ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಮಾತನಾಡುವುದು, ವಿಶೇಷವಾಗಿ ಬಲಿಪಶುಗಳನ್ನು ಹೆಚ್ಚಾಗಿ ದೂಷಿಸುವ ಸಮಾಜದಲ್ಲಿ, ಇಂತಹ ಧೈರ್ಯವನ್ನು ಮಾಡಬೇಕಾಗುತ್ತದೆ "ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ. "ನೀವು ಇದನ್ನು ಹಂಚಿಕೊಳ್ಳುವ ಧೈರ್ಯ ಮಾಡಿದ್ದೀರಿ. ಆದರೆ ನೀವು ಇಂತಹ ಕಷ್ಟವನ್ನು ಎದುರಿಸಬೇಕಾಯಿತು ಎಂದು ನನಗೆ ಬೇಸರವಾಗಿದೆ" ಎಂದು ಇನ್ನೊಬ್ಬರು ಹೇಳಿದ್ದಾರೆ.