Viral Video: ಮಹಾ ಕುಂಭಮೇಳದಲ್ಲಿ ಕೈಲಾಶ್ ಖೇರ್ ಧ್ವನಿಗೆ ಫಿದಾ ಆದ ನೆಟ್ಟಿಗರು
ಕೈಲಾಶ್ ಖೇರ್ ಅವರು ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದ ಪ್ರಶಾಂತ ದಂಡೆಯಲ್ಲಿ ಗಿಟಾರ್ ಹಿಡಿದು ಶಿವನ ಹಾಡಿಗೆ ಧ್ವನಿಯಾಗಿದ್ದಾರೆ. ಶಿವನ ಹಾಡಿನಲ್ಲಿ ತಲ್ಲೀನರಾಗಿ ತನ್ನ ಗಿಟಾರ್ ಅನ್ನು ಟ್ಯೂನ್ ಮಾಡುವ ಮೂಲಕ ತಮ್ಮ ಮಧುರ ಕಂಠದಿಂದ ಕೇಳುಗರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
![ಮಹಾಕುಂಭ ಮೇಳದಲ್ಲಿ ಕೈಲಾಶ್ ಖೇರ್ ಹಾಡಿಗೆ ಮನಸೋತ ನೆಟ್ಟಿಗರು; ವಿಡಿಯೊ ವೈರಲ್](https://cdn-vishwavani-prod.hindverse.com/media/original_images/Kailash_Kher.jpg)
Kailash Kher
![Profile](https://vishwavani.news/static/img/user.png)
ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವು ಹಲವು ಅಪರೂಪದ ಸಂಗತಿಗಳಿಗೆ ಸಾಕ್ಷಿಯಾಗುತ್ತಿದೆ. ಸದ್ಯ ಅಲ್ಲಿನ ಹಲವು ವಿಶಿಷ್ಟ ಸಂಗತಿಗಳು ವೈರಲ್ ಆಗುತ್ತಿವೆ. ಇದೀಗ ಗಿಟಾರ್ ವಾದಕ ಕೈಲಾಶ್ ಖೇರ್ ಹಾಡಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ (Viral Video). ಇವರ ಧ್ವನಿಗೆ ನೆಟ್ಟಿಗರು ಮನ ಸೋತಿದ್ದಾರೆ.
ಕೈಲಾಶ್ ಖೇರ್ ಅವರು ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದ ಪ್ರಶಾಂತ ದಂಡೆಯಲ್ಲಿ ಗಿಟಾರ್ ಹಿಡಿದು ಶಿವನ ಹಾಡಿಗೆ ಧ್ವನಿಯಾಗಿದ್ದಾರೆ. ಶಿವನ ಹಾಡಿನಲ್ಲಿ ತಲ್ಲೀನರಾಗಿ ತನ್ನ ಗಿಟಾರ್ ಅನ್ನು ಟ್ಯೂನ್ ಮಾಡುವ ಮೂಲಕ ತಮ್ಮ ಮಧುರ ಕಂಠದಿಂದ ಕೇಳುಗರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕೇಳುಗರು ತಲ್ಲೀನರಾಗುವಂತೆ ಹಾಡಿದ್ದಾರೆ.
ಕೈಲಾಶ್ ಮಧುರ ಧ್ವನಿಯಲ್ಲಿ ಮೂಡಿ ಬಂದಿರುವ ಹಾಡು ಮೆಚ್ಚುಗೆ ಗಳಿಸಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ಒಟ್ಟಿಗೆ ಸೇರುವ ತ್ರಿವೇಣಿ ಸಂಗಮದ ಶಾಂತಿಯುತ ಪರಿಸರವು ಕೈಲಾಶ್ ಭಾವಪೂರ್ಣ ಹಾಡಿನ ಧ್ವನಿಗೆ ಮತ್ತಷ್ಟು ಮೆರುಗು ನೀಡಿದೆ. ಇವರ ಭಕ್ತಿ ಪೂರ್ವಕ ಶಿವನ ಹಾಡಿಗೆ ನೆಟ್ಟಿಗರು ಮನ ಸೋತಿದ್ದಾರೆ.
ಕೈಲಾಶ್ ಖೇರ್ ಅವರು ಭಾರತದ ಅದ್ಭುತ ಗಾಯಕ. ಇವರ ಕಂಠಸಿರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸ್ಯಾಂಡಲ್ವುಡ್ನ ಅದೆಷ್ಟೋ ಅದ್ಭುತ ಹಾಡುಗಳಿಗೆ ಇವರು ಧ್ವನಿಯಾಗಿದ್ದು ಇದೀಗ ಮಹಾ ಕುಂಭಮೇಳದಲ್ಲಿ ಕೈಲಾಶ್ ಖೇರ್ ಧ್ವನಿ ಸಾವಿರಾರು ಜನರ ಹೃದಯವನ್ನು ಮುಟ್ಟಿದೆ.
ಇದನ್ನು ಓದಿ: Viral Video: ಒಂಬತ್ತು ತಿಂಗಳ ಮಗುವಿನೊಂದಿಗೆ ಮ್ಯಾನ್‌ಹೋಲ್‌ಗೆ ಬಿದ್ದ ಮಹಿಳೆ! ಶಾಕಿಂಗ್ ವಿಡಿಯೊ ವೈರಲ್
ಈ ವಿಡಿಯೊವನ್ನು Instagram ಬಳಕೆದಾರ ಯಶ್ ಪಂಡಿತ್ ಅವರು ಪೋಸ್ಟ್ ಮಾಡಿದ್ದಾರೆ. ಇದು ಈಗಾಗಲೇ 3,000ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಪಂಡಿತ್ ಅವರ ಸಂಗೀತ ಪ್ರತಿಭೆಯನ್ನು ಬಳಕೆದಾರರು ಕೊಂಡಾಡಿದ್ದು, ಬಳಕೆದಾರರು ನಾನಾ ರೀತಿಯ ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. ಸುಂದರ ಧ್ವನಿ ಎಂತಹ ಅದ್ಭುತ ಎಂದು ಅಭಿಮಾನಿಯೊಬ್ಬರು ತಿಳಿಸಿದ್ದಾರೆ. ಅನೇಕ ವೀಕ್ಷಕರು "ಹರ್ ಹರ್ ಮಹಾದೇವ್ʼʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.