ಕಳಪೆ, ಹವಾಮಾನ, ತಾಂತ್ರಿಕ ದೋಷ? ಅಜಿತ್ ಪವಾರ್ ಸಾವಿಗೆ ಕಾರಣವಾದ ಅಪಘಾತದ ಬಗ್ಗೆ ಮಾಜಿ IAF ಪೈಲಟ್ ಹೇಳಿದ್ದೇನು?
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಅವರ ಸಿಬ್ಬಂದಿ ಮತ್ತು ವಿಮಾನ ಸಿಬ್ಬಂದಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಸದ್ಯ ಅಪಘಾತಕ್ಕೆ ನಿಖರ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ.
ಸಂಗ್ರಹ ಚಿತ್ರ -
ಮುಂಬೈ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ (Ajit Pawar dies) ಅಜಿತ್ ಪವಾರ್ ಮತ್ತು ಅವರ ಸಿಬ್ಬಂದಿ ಮತ್ತು ವಿಮಾನ ಸಿಬ್ಬಂದಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಸದ್ಯ ಅಪಘಾತಕ್ಕೆ ನಿಖರ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಕೇಂದ್ರ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರು ಪ್ರಾಥಮಿಕ ಮಾಹಿತಿಯ ಪ್ರಕಾರ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಗೋಚರತೆ ಕಳಪೆಯಾಗಿತ್ತು ಎಂದು ಹೇಳಿದ್ದಾರೆ. ವಿಮಾನವು ಎರಡು ಬಾರಿ ಇಳಿಯಲು ಪ್ರಯತ್ನಿಸಿದಾಗ ಅದು ರನ್‌ಅವೇ ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಯಿತು ಎಂದು ಹೇಳಿದ್ದರೂ ಸಹ, ಅಪಘಾತಕ್ಕೆ ಕಾರಣವೇನು ಎಂಬ ಪ್ರಶ್ನೆಗಳು ಈಗ ಉದ್ಭವಿಸುತ್ತಿವೆ.
ಅಜಿತ್ ಪವಾರ್ ಜೊತೆಗೆ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿಧಿತ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಜಾಧವ್ ಮತ್ತು ಪೈಲಟ್‌ಗಳಾದ ಸುಮಿತ್ ಕಪೂರ್ ಮತ್ತು ಶಾಂಭವಿ ಪಾಠಕ್ ಮೃತಪಟ್ಟಿದ್ದಾರೆ. ಈಗ, ಭಾರತೀಯ ವಾಯುಪಡೆಯ (IAF) ಮಾಜಿ ಪೈಲಟ್ ಮತ್ತು ಪೈಲಟ್ ಸುಮಿತ್ ಕಪೂರ್ ಅವರ ಸ್ನೇಹಿತರೊಬ್ಬರು, ಅಪಘಾತದ ಕುರಿತು ಮಾತನಾಡಿದ್ದು, ಕೆಟ್ಟ ಹವಾಮಾನವೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ವಿಡಿಯೋ ನೋಡಿ
#WATCH | Seattle, USA: On Maharashtra Deputy CM Ajit Pawar’s Demise, Former IAF Pilot & friend of the deceased pilot in the crash, Capt (R) Ehsan Khalid says, "... It was a tragic incident. I have known the pilot since my Sahara days, almost two decades ago. He was an experienced… pic.twitter.com/tGpmWvXAiz
— ANI (@ANI) January 28, 2026
ಸುಮಾರು ಎರಡು ದಶಕಗಳ ಹಿಂದಿನ ನನ್ನ ಸಹಾರಾ (ವಿಮಾನಯಾನ) ದಿನಗಳಿಂದಲೂ ನನಗೆ ಪೈಲಟ್ ಪರಿಚಯವಿದೆ. ಅವರು ಅನುಭವಿ ಪೈಲಟ್ ಆಗಿದ್ದರು. 18 ವರ್ಷಗಳ ಮಿಲಿಟರಿ ಅನುಭವದ ಹೊರತಾಗಿ, ಖಾಲಿದ್ ಸಹಾರಾ, ಜೆಟ್‌ಲೈಟ್ ಮತ್ತು ಕಿಂಗ್‌ಫಿಷರ್‌ನಂತಹ ವಿಮಾನಯಾನ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದರು ಎಂದು ಹೇಳಿದ್ದಾರೆ. ಗೋಚರತೆ ಕಡಿಮೆ ಇರುವ ಬಗ್ಗೆ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಖಾಲಿದ್, ಗೋಚರತೆ ನಿಜವಾಗಿಯೂ ಕೆಟ್ಟದಾಗಿದ್ದರೆ, ಪೈಲಟ್ ಇಳಿಯಲು ಪ್ರಯತ್ನಿಸುತ್ತಿರಲಿಲ್ಲ ಎಂದು ಹೇಳಿದರು.
ದುರಂತ ಅಂತ್ಯ ಕಂಡ "ಮಹಾ" ರಾಜಕೀಯ ಚಾಣಕ್ಯ; ವಿಮಾನ ಅಪಘಾತದ ಫೋಟೋಗಳು ಮನಕಲಕುವಂತಿದೆ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಬುಧವಾರ ಸ್ಥಳೀಯ ಚುನಾವಣೆಗೆ ಮುನ್ನ ನಾಲ್ಕು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ತಮ್ಮ ಹುಟ್ಟೂರು ಬಾರಾಮತಿಗೆ ತೆರಳುತ್ತಿದ್ದರು. ಆದರೆ, ಅವರನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ಡ್ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಎರಡು ಬಾರಿ ಇಳಿಯುವ ಪ್ರಯತ್ನ ಮಾಡಿದ ನಂತರ ಅಪಘಾತಕ್ಕೀಡಾಯಿತು.