ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಕ್ರಾಂತಿ; ರಾಷ್ಟ್ರಪತಿ ದ್ರೌಪದಿ ಮುರ್ಮು ಮೆಚ್ಚುಗೆ

President Droupadi Murmu: ದೇಶದಲ್ಲಿ ಸೌರ ಶಕ್ತಿ ಉತ್ಪಾದನೆ, ಬಳಕೆಯಿಂದ ಮನೆಗಳು ವಿದ್ಯುತ್ ಬಿಲ್‌ಗಳಲ್ಲಿ ಸ್ಪಷ್ಟವಾದ ಕಡಿತ ಕಾಣುತ್ತಿವೆ. ಭವಿಷ್ಯದ ಉಪಕ್ರಮಗಳಿಂದ ಪ್ರೇರಿತವಾಗಿ ಭಾರತ 500 GW ನವೀಕರಿಸಬಹುದಾದ ಇಂಧನ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಕ್ರಾಂತಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು -

Profile
Siddalinga Swamy Jan 28, 2026 6:59 PM

ನವದೆಹಲಿ, ಜ. 28: ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಕ್ರಾಂತಿ ಮಾಡುತ್ತಿದೆ. ಜಾಗತಿಕವಾಗಿ ಅಭೂತಪೂರ್ವ ಪ್ರಗತಿ ಸಾಧಿಸುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಸಂಸತ್ ಅಧಿವೇಶನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸತ್ ಭವನದಲ್ಲಿ ಬುಧವಾರ ಕೇಂದ್ರ ಸಂಸತ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ, ಭಾರತದ ಸೌರ ಸಾಧನೆ ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ, ಸೌರಶಕ್ತಿ ಕ್ಷೇತ್ರದಲ್ಲಿ ತ್ವರಿತ ಪ್ರಗತಿ ಸಾಧಿಸುತ್ತಿದೆ. ಪಿಎಂ ಸೂರ್ಯಘರ್ ಮತ್ತು ಪಿಎಂ ಕುಸುಮ್ ಯೋಜನೆ ಮೂಲಕ ದೇಶದ ಜನಸಾಮಾನ್ಯರು ಇಂದು ವಿದ್ಯುತ್ ಉತ್ಪಾದಕರಾಗುತ್ತಿದ್ದಾರೆ ಎಂದು ನವೀಕರಿಸಬಹುದಾದ ಇಂಧನ ಇಲಾಖೆ ಕಾರ್ಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ದೇಶದ ಸಾಮಾನ್ಯ ನಾಗರಿಕರು ಇಂದು ಕೇವಲ ವಿದ್ಯುತ್ ಬಳಕೆ ಗ್ರಾಹಕರಾಗುಳಿಯದೆ ವಿದ್ಯುತ್ ಉತ್ಪಾದಕರಾಗುತ್ತಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ಸಂಗತಿ ಎಂದ ರಾಷ್ಟ್ರಪತಿಗಳು, ದೇಶದಲ್ಲಿ 20 ಲಕ್ಷ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆ ಈಗಾಗಲೇ ಪೂರ್ಣಗೊಂಡಿದ್ದು, ಶೂನ್ಯ ವಿದ್ಯುತ್ ಬಿಲ್‌ಗೆ ಒಳಪಟ್ಟಿವೆ ಎಂದು ಹರ್ಷ ವ್ಯಕ್ತಪಡಿಸಿದರು.‌

ಕೇಂದ್ರ ಬಜೆಟ್‌; ಕರ್ನಾಟಕಕ್ಕೆ ಈ ಬಾರಿ ಇನ್ನೂ ಹೆಚ್ಚಿನ ಕೊಡುಗೆಯ ನಿರೀಕ್ಷೆಯಿದೆ ಎಂದ ಜೋಶಿ

ದೇಶದಲ್ಲಿ ಸೌರ ಶಕ್ತಿ ಉತ್ಪಾದನೆ, ಬಳಕೆಯಿಂದ ಮನೆಗಳು ವಿದ್ಯುತ್ ಬಿಲ್‌ಗಳಲ್ಲಿ ಸ್ಪಷ್ಟವಾದ ಕಡಿತ ಕಾಣುತ್ತಿವೆ. ಭವಿಷ್ಯದ ಉಪಕ್ರಮಗಳಿಂದ ಪ್ರೇರಿತವಾಗಿ ಭಾರತ 500 GW ನವೀಕರಿಸಬಹುದಾದ ಇಂಧನ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಮ್ಮೆ ವ್ಯಕ್ತಪಡಿಸಿದರು.