ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Amendment Bill: ವಕ್ಫ್‌ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಬಹುಮತದಿಂದ ಅಂಗೀಕಾರ

ಬಹುಚರ್ಚಿತ ಹಾಗೂ ವಿವಾದಿತ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಬುಧವಾರ (ಏ. 2) ಕೇಂದ್ರ ಸರ್ಕಾರ ಲೋಕಸಭೆಯ ಮುಂದಿಟ್ಟಿದೆ. ವಿರೋಧಪಕ್ಷಗಳ ಭಾರೀ ವಿರೋಧದ ನಡುವೆಯೂ ಕೇಂದ್ರ ಸಚಿವ ಕಿರಣ್‌ ರಿಜಿಜು ಮಸೂದೆಯನ್ನು ಮಂಡಿಸಿದರು. ಅದಾದ ಬಳಿಕ ಮಸೂದೆ ಮೇಲೆ ಸುದೀರ್ಘ ಚರ್ಚೆ ನಡೆಯಿತು. ನಂತರ ವಕ್ಫ್‌ ಬಿಲ್‌ ಅನ್ನು ಸ್ಪೀಕರ್‌ ಓಂ ಬಿರ್ಲಾ ಮತಕ್ಕೆ ಹಾಕಿದ್ದು ಅಂಗೀಕಾರಗೊಂಡಿದೆ.

ವಕ್ಫ್‌ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಕಿರಣ್‌ ರಿಜಿಜು.

Profile Ramesh B Apr 3, 2025 12:19 AM

ಹೊಸದಿಲ್ಲಿ: ಬಹುಚರ್ಚಿತ ಹಾಗೂ ವಿವಾದಿತ ವಕ್ಫ್‌ ತಿದ್ದುಪಡಿ ಮಸೂದೆಯನ್ನು (Waqf Amendment Bill) ಬುಧವಾರ (ಏ. 2) ಕೇಂದ್ರ ಸರ್ಕಾರ ಲೋಕಸಭೆಯ ಮುಂದಿಟ್ಟಿದ್ದು, ನಿರೀಕ್ಷೆಯಂತೆಯೇ ಅಂಗೀಕಾರಗೊಂಡಿದೆ. ವಿರೋಧಪಕ್ಷಗಳ ಭಾರೀ ವಿರೋಧದ ನಡುವೆಯೂ ಕೇಂದ್ರ ಸಚಿವ ಕಿರಣ್‌ ರಿಜಿಜು (Kiren Rijiju) ಮಸೂದೆಯನ್ನು ಮಂಡಿಸಿದರು. ಅದಾದ ಬಳಿಕ ಮಸೂದೆ ಮೇಲೆ ಸುದೀರ್ಘ ಚರ್ಚೆ ನಡೆಯಿತು. ಬಳಿಕ ವಕ್ಫ್‌ ಬಿಲ್‌ ಅನ್ನು ಸ್ಪೀಕರ್‌ ಓಂ ಬಿರ್ಲಾ ಮತಕ್ಕೆ ಹಾಕಿದರು. ಕೊನೆಗೆ ಬಹುಮತದಿಂದ ಅಂಗೀಕಾರಗೊಂಡಿತು.

ಮಸೂದೆ ಮಂಡಿಸಿದ ಕಿರಣ್‌ ರಿಜಿಜು ಅವರು, ʼʼಇದರಿಂದ ದೇಶದಲ್ಲಿರುವ ಯಾವುದೇ ಮಸೀದಿಗೆ ತೊಂದರೆಯುಂಟಾಗುವುದಿಲ್ಲ. ಮಸೂದೆ ಮಂಡನೆಗೆ ಆಗತ್ಯವಾದ ಎಲ್ಲ ಕಾನೂನು ಕ್ರಮವನ್ನು ನಾವು ಅನುಸರಿಸಿದ್ದೇವೆ. ವಕ್ಫ್‌ ಮಸೂದೆಯನ್ನು ಸಂಸತ್‌ ಅನುಮೋದಿಸಿದೆʼʼ ಎಂದರು.

ಈ ಸುದ್ದಿಯನ್ನೂ ಓದಿ: Waqf Amendment Bill: ವಕ್ಫ್‌ ತಿದ್ದುಪಡಿ ಮಸೂದೆಯಲ್ಲಿ 1 ಬದಲಾವಣೆ ಸೂಚಿಸಿದ ಎನ್‌ಡಿಎ ಮಿತ್ರಪಕ್ಷ ಟಿಡಿಪಿ; ಏನದು?

ʼʼ25 ರಾಜ್ಯಗಳ ವಕ್ಫ್‌ ಬೋರ್ಡ್‌ ಅಭಿಪ್ರಾಯವನ್ನು ನಾವು ಸಂಗ್ರಹಿಸಿದ್ದೇವೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಎರಡೂ ಸದನಗಳ ಸದಸ್ಯರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಒಟ್ಟಾರೆಯಾಗಿ, 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳ 284 ನಿಯೋಗಗಳು ಜೆಪಿಸಿಯಲ್ಲಿ ತಮ್ಮ ವಾದಗಳನ್ನು ಮಂಡಿಸಿದ್ದವು. ಅವುಗಳನ್ನು ಪರಿಗಣಿಸಿಯೇ ಮಸೂದೆಯನ್ನು ರಚಿಸಲಾಗಿದೆʼʼ ಎಂದು ತಿಳಿಸಿದರು.

ಕರ್ನಾಟಕದ ವಿಚಾರ ಪ್ರಸ್ತಾವಿಸಿದ ಅಮಿತ್‌ ಶಾ

ಮಸೂದೆ ಮಂಡಿಸಿದ ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಪಕ್ಷಗಳ ವಿರುದ್ಧ ಗುಡುಗಿದರು. ಈ ವೇಳೆ ಅವರು ಕರ್ನಾಟಕದ ಉದಾಹರಣೆ ನೀಡಿದರು. ದತ್ತಪೀಠ ದೇವಸ್ಥಾನಕ್ಕೆ ಸೇರಿದ ಭೂಮಿಯ ಮೇಲೆ ಕರ್ನಾಟಕ ವಕ್ಫ್ ಮಂಡಳಿಯು ಹಕ್ಕು ಮಂಡಿಸಿದೆ ಎಂದು ಅಮಿತ್‌ ಶಾ ತಿಳಿಸಿದರು. ಅಲ್ಲದೆ ಕರ್ನಾಟಕದ ವಿಜಯಪುರದ ಹೊನ್ವಾಡ್ ಗ್ರಾಮದಲ್ಲಿ, ವಕ್ಫ್ ಮಂಡಳಿಯು ಹಕ್ಕು ಮಂಡಿಸಿದ ನಂತರ 1,500 ಎಕರೆ ಭೂಮಿ ವಿವಾದಕ್ಕೆ ಒಳಗಾಯಿತು ಎಂದು ಪ್ರಸ್ತಾವಿಸಿದರು.

ಕರ್ನಾಟಕದ ಅನ್ವರ್‌ ಮಣಿಪ್ಪಾಡಿ ಸಮಿತಿಯು ಸುಮಾರು 29,000 ಎಕರೆ ವಕ್ಫ್ ಭೂಮಿಯನ್ನು ವಿದೇಶಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದ್ದು, ಇದು ಗಮನಾರ್ಹ ಆದಾಯ ನಷ್ಟಕ್ಕೆ ಕಾರಣವಾಗಿದೆ ಎಂದು ವರದಿ ಮಾಡಿದೆ ಎಂದು ಅಮಿತ್‌ ಶಾ ತಿಳಿಸಿದರು.

ವಿಪಕ್ಷಗಳ ವಿರುದ್ಧ ವಾಗ್ದಾಳಿ

ಇದೇ ವೇಳೆ ವಿಪಕ್ಷಗಳ ವಿರುದ್ಧ ಅಮಿತ್‌ ಶಾ ಹರಿಹಾಯ್ದರು. ʼʼವಕ್ಫ್ ಅನ್ನು ವಿರೋಧಿಸುವ ಮೂಲಕ ತಮ್ಮ ಮತಬ್ಯಾಂಕ್ ಅನ್ನು ಬಲಪಡಿಸಲು, ಮುಸ್ಲಿಮರ ಅನುಕಂಪವನ್ನು ಗಳಿಸಬಹುದು ಎಂದು ಪ್ರತಿಪಕ್ಷಗಳು ಭಾವಿಸುತ್ತವೆ. ಅಲ್ಲದೆ ದೇಶವನ್ನು ಇಬ್ಭಾಗಿಸುವ ಕೆಲಸ ಮಾಡುತ್ತಿವೆ. ಈ ಕಾಯ್ದೆಯು ಮುಸ್ಲಿಮರ ಧಾರ್ಮಿಕ ನಡವಳಿಕೆಗೆ ಅಡ್ಡಿಯಾಗುತ್ತದೆ ಮತ್ತು ಅವರು ದಾನ ಮಾಡಿದ ಆಸ್ತಿಗೆ ತೊಡಕಾಗುತ್ತದೆ ಎಂಬ ತಪ್ಪು ಕಲ್ಪನೆಯನ್ನು ಕೆಲವರು ಹರಡುತ್ತಿದ್ದಾರೆ. ವಕ್ಫ್ ದಾನವನ್ನು ಒಬ್ಬರ ಸ್ವಂತ ಆಸ್ತಿಯಿಂದ ಮಾಡಬಹುದೇ ವಿನಃ, ಆದಕ್ಕೆ ಬೇರೆಯವರ ಆಸ್ತಿಯನ್ನು ಬಳಸುವಂತಿಲ್ಲ. ಯಾಕೆಂದರೆ, ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸುವ ಹಕ್ಕಿದೆʼʼ ಎಂದರು.

ಇನ್ನು ಸಂಸತ್ತಿನ ಜಂಟಿ ಸಮಿತಿಯ (JPC) ಅಧ್ಯಕ್ಷ ಬಿಜೆಪಿಯ ಹಿರಿಯ ಸಂಸದ ಜಗದಾಂಬಿಕಾ ಪಾಲ್ ಕೂಡ ಮಸೂದೆ ಬಗ್ಗೆ ಮಾತನಾಡಿದರು.