“ದೇಶವನ್ನು ಏಕೆ ಹಾಳು ಮಾಡುತ್ತಿದ್ದೀಯಾ?”: CJP ಸಂಸ್ಥಾಪಕ ಅಭಿಜೀತ್ ದೀಪ್ಕೆಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ವ್ಯಕ್ತಿ!
SIR Controversy: “ದೇಶವನ್ನು ಏಕೆ ಹಾಳು ಮಾಡುತ್ತಿದ್ದೀಯಾ?” ಎಂದು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಪ್ರಶ್ನಿಸಿದ್ದಾರೆ. ಪ್ರಯಾಣಿಕನ ಪ್ರಶ್ನೆಗೆ ಉತ್ತರಿಸದೆ, ದೀಪ್ಕೆ ನಡೆದುಕೊಂಡೇ ಮುಂದೆ ಸಾಗಿದ್ದಾರೆ. ಜೊತೆಗೆ ಪ್ರಯಾಣಿಕನತ್ತ ಕೈಬೀಸುತ್ತಾ ಥಂಬ್ಸ್ಅಪ್ (ಹೆಬ್ಬೆರಳು ಮೇಲಕ್ಕೆತ್ತಿ ತೋರಿಸುವ ಸನ್ನೆ) ನೀಡಿದ್ದಾರೆ.
ಅಭಿಜೀತ್ ದೀಪ್ಕೆ ವಿರುದ್ಧ ದೆಹಲಿಯಲ್ಲಿ ಪ್ರಯಾಣಿಕನ ಆಕ್ರೋಶ -
ನವದೆಹಲಿ, ಅ.14: ಕಾಕ್ರೋಚ್ ಜನತಾ ಪಾರ್ಟಿ (CJP) ಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ (ಅ.14) ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದಾಗ, ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧದ ಅವರ ಆಕ್ರೋಶವನ್ನು ಪ್ರಯಾಣಿಕರೊಬ್ಬರು ಪ್ರಶ್ನಿಸಿದರು. “ದೇಶವನ್ನು ಏಕೆ ಹಾಳು ಮಾಡುತ್ತಿದ್ದೀಯಾ?” ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಯಾಣಿಕನ ಪ್ರಶ್ನೆಗೆ ಉತ್ತರಿಸದೆ, ದೀಪ್ಕೆ ನಡೆದುಕೊಂಡೇ ಮುಂದೆ ಸಾಗಿದ್ದಾರೆ. ಜೊತೆಗೆ ಪ್ರಯಾಣಿಕನತ್ತ ಕೈಬೀಸುತ್ತಾ ಥಂಬ್ಸ್ಅಪ್ (ಹೆಬ್ಬೆರಳು ಮೇಲಕ್ಕೆತ್ತಿ ತೋರಿಸುವ ಸನ್ನೆ) ನೀಡಿದ್ದಾರೆ. ಗೊಂದಲ ಉಂಟಾಗುವುದನ್ನು ತಡೆಯಲು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ, ದೀಪ್ಕೆ ಅವರಿಗೆ ರಕ್ಷಣೆ ನೀಡಲು ಸುತ್ತಲೂ ಭದ್ರತೆಯನ್ನು ನಿರ್ಮಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಅಭಿಜೀತ್ ದೀಪ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ದೀಪ್ಕೆ ಮತ್ತು ಕಾಕ್ರೋಚ್ ಜನತಾ ಪಾರ್ಟಿ “ಚುನಾವಣಾ ಆಯೋಗವನ್ನು ಸರಿಪಡಿಸಿ” ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಇಲ್ಲಿದೆ ವಿಡಿಯೊ:
दिल्ली एयरपोर्ट पर सीजेपी (कॉकरोच जनता पार्टी) संस्थापक अभिजीत दीपके को कड़े विरोध और हूटिंग का सामना करना पड़ा, एक यात्री ने 'क्यों देश खराब कर रहे हो' कहकर सुनाई खरी-खोटी, वीडियो सोशल मीडिया पर वायरल। Abhijeet Dipke Heckled Delhi Airport, CJP Founder Booed, Kyun Desh Kharab Kar Raha Hai, Delhi Airport Video, Political Protests Delhi, Hindi News #AbhijeetDipke #DelhiAirport #ViralVideo #DelhiPolice #CJP #HindiNews
— Live Sach (@LiveSach_) October 14, 2026
ನವದೆಹಲಿಯ ಜಂತರ್ ಮಂತರ್ನಲ್ಲಿ ಅ.10ರಂದು ಬೃಹತ್ ಅನಿರ್ದಿಷ್ಟಾವಧಿ ಧರಣಿ ನಡೆಸಲು ಸಿಜೆಪಿ ನಿರ್ಧರಿಸಿತ್ತು. ದೆಹಲಿ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧನಕ್ಕೊಳಗಾದ ನಂತರ, ವಿದ್ಯಾರ್ಥಿ ಮತ್ತು ಯುವಕರ ನೇತೃತ್ವದ ಶಾಂತಿಯುತ ಪ್ರದರ್ಶನವನ್ನು ಹತ್ತಿಕ್ಕಲು ಸೂಕ್ಷ್ಮ ಪ್ರದೇಶಗಳಲ್ಲಿ ಭಾರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದನ್ನು ದೀಪ್ಕೆ ಕಟುವಾಗಿ ಟೀಕಿಸಿದರು.
ಸೌರವ್ ದಾಸ್, ಅಶುತೋಷ್ ರಂಕಾ ಬಂಧನ ಹೇಡಿತನದ ಕೃತ್ಯ: ಸಿಜೆಪಿ ನಾಯಕರ ಪರ ರಾಹುಲ್ ಗಾಂಧಿ ಭರ್ಜರಿ ಬ್ಯಾಟಿಂಗ್
ಇನ್ನು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಮುಖ್ಯ ಮತ್ತು ರಾಷ್ಟ್ರೀಯ ವಕ್ತಾರರಾದ ಸೌರಭ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಬುಧವಾರ (ಅ.14) ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಅ.13ರ ಮಂಗಳವಾರ ಬೆಳಗ್ಗೆ, ದಾಸ್, ರಾಂಕಾ ಮತ್ತು ಸಹ ನಾಯಕ ಅಜಿಂಕ್ಯ ಶಿಂಧೆ ಜಂತರ್ ಮಂತರ್ ಪ್ರವೇಶಿಸಲು ಬೀಗ ಹಾಕಿದ್ದ ಗೇಟ್ಗಳನ್ನು ಹತ್ತಿ ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಿದರು. ಅವರು ಭಾರತದ ರಾಷ್ಟ್ರೀಯ ಧ್ವಜವನ್ನು ಹಾರಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕೆಂದು ಘೋಷಣೆಗಳನ್ನು ಕೂಗಿದರು.
ಜಂತರ್ ಮಂತರ್ ಅನ್ನು ಪ್ರತಿಭಟನೆ ಸ್ಥಳವೆಂದು ಕೇಂದ್ರ ಸರ್ಕಾರ ಅಧಿಕೃತವಾಗಿ ರದ್ದುಗೊಳಿಸಿದ ಒಂದು ದಿನದ ನಂತರ ಈ ಪ್ರತಿಭಟನೆ ನಡೆಯಿತು. ದೆಹಲಿ ಪೊಲೀಸರು ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿದರು. ಕ್ರಿಮಿನಲ್ ಅತಿಕ್ರಮಣ, ಕಾನೂನುಬಾಹಿರ ಸಭೆ, ಅಧಿಕೃತ ಆದೇಶಗಳ ಅವಿಧೇಯತೆ ಮತ್ತು ಸಾರ್ವಜನಿಕ ನೌಕರರು ತಮ್ಮ ಕರ್ತವ್ಯಗಳನ್ನು ನಿರ್ವಹಿಸದಂತೆ ತಡೆಯುವ ಆರೋಪಗಳ ಅಡಿಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನು ಬಂಧನಗಳ ವಿರುದ್ಧ ಮಾತನಾಡಿದ ರಾಹುಲ್ ಗಾಂಧಿಗೆ ಅಭಿಜೀತ್ ದೀಪ್ಕೆ ಅವರು ಎಕ್ಸ್ನಲ್ಲಿ ಸಾರ್ವಜನಿಕವಾಗಿ ಧನ್ಯವಾದ ಅರ್ಪಿಸಿದರು.