ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Bhagwat: "ಹಿಂದೂಗಳಿಲ್ಲದೆ ಜಗತ್ತೇ ಇಲ್ಲ" ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

BHagwat Manipur Visit: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು, "ಹಿಂದೂಗಳಿಲ್ಲದೆ ಜಗತ್ತು ಅಸ್ತಿತ್ವದಲ್ಲಿಲ್ಲ" ಎಂದು ಅವರು ಹೇಳಿದ್ದಾರೆ. ಮಣಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಭಾಗವತ್‌ ಮಾತನಾಡಿದ್ದಾರೆ. ಭಾಗವತ್ ಅವರು ನವೆಂಬರ್ 20 ರಿಂದ ಮೂರು ದಿನ ಮಣಿಪುರ ಪ್ರವಾಸದ ಸಮಯದಲ್ಲಿ ನಾಗರಿಕರು, ಉದ್ಯಮಿಗಳು ಮತ್ತು ಬುಡಕಟ್ಟು ಸಮುದಾಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಹಿಂದೂಗಳಿಂದಲೇ ಜಗತ್ತು; ಮೋಹನ್‌ ಭಾಗವತ್‌

ಮೋಹನ್‌ ಭಾಗವತ್‌ (ಸಂಗ್ರಹ ಚಿತ್ರ) -

Vishakha Bhat
Vishakha Bhat Nov 22, 2025 9:56 AM

ಇಂಫಾಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು, "ಹಿಂದೂಗಳಿಲ್ಲದೆ ಜಗತ್ತು ಅಸ್ತಿತ್ವದಲ್ಲಿಲ್ಲ" ಎಂದು ಅವರು ಹೇಳಿದ್ದಾರೆ. ಮಣಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಹಿಂದೂ ಸಮಾಜವು ಅಮರವಾಗಿದೆ ಎಂದು ಪ್ರತಿಪಾದಿಸಿದರು, ಭಾರತವು ಯುನಾನ್ (ಗ್ರೀಸ್), ಮಿಸ್ರ್ (ಈಜಿಪ್ಟ್) ಮತ್ತು ರೋಮ್‌ನಂತಹ ಸಾಮ್ರಾಜ್ಯಗಳನ್ನು ಮೀರಿಸಿತ್ತು ಎಂದು ಅವರು ಹೇಳಿದರು. ಪಂಚದ ಪ್ರತಿಯೊಂದು ರಾಷ್ಟ್ರವೂ ಎಲ್ಲಾ ರೀತಿಯ ಸನ್ನಿವೇಶಗಳನ್ನು ಕಂಡಿದೆ. ಯುನಾನ್ ಮಿಸ್ರ್ ಮತ್ತು ರೋಮಾ, ಎಲ್ಲಾ ನಾಗರಿಕತೆಗಳು ಭೂಮಿಯ ಮುಖದಿಂದ ನಾಶವಾದವು. ನಮ್ಮ ನಾಗರಿಕತೆಯಲ್ಲಿ ನಾವು ಇನ್ನೂ ಇಲ್ಲಿದ್ದೇವೆ ಎಂದು ಭಾಗವತ್‌ ಹೇಳಿದರು.

ಭಾಗವತ್ ಅವರು ನವೆಂಬರ್ 20 ರಿಂದ ಮೂರು ದಿನ ಮಣಿಪುರ ಪ್ರವಾಸದ ಸಮಯದಲ್ಲಿ ನಾಗರಿಕರು, ಉದ್ಯಮಿಗಳು ಮತ್ತು ಬುಡಕಟ್ಟು ಸಮುದಾಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಎರಡು ವರ್ಷಗಳ ಹಿಂದೆ ಹಿಂಸಾಚಾರ ಭುಗಿಲೆದ್ದ ನಂತರ ಭಾಗವತ್ ಅವರ ಮೊದಲ ಭೇಟಿ ಇದಾಗಿದೆ. ಅವರು ಕೊನೆಯದಾಗಿ 2022ರಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದರು ಎಂದು ಮತ್ತೊಬ್ಬ ಆರ್‌ಎಸ್‌ಎಸ್ ಪದಾಧಿಕಾರಿ ಹೇಳಿದ್ದಾರೆ. ಭಾಗವತ್ ಅವರು ಪ್ರಮುಖ ನಾಗರಿಕರು, ಬುಡಕಟ್ಟು ಸಮುದಾಯದ ಪ್ರತಿನಿಧಿಗಳು ಮತ್ತು ಯುವ ನಾಯಕರೊಂದಿಗೆ ಪ್ರತ್ಯೇಕ ಸಂವಾದ ನಡೆಸಲಿದ್ದಾರೆ ಎಂದು ಶರ್ಮಾ ತಿಳಿಸಿದ್ದಾರೆ.

Vande Bharath: ವಂದೇ ಭಾರತ್ ರೈಲಿನಲ್ಲಿ ವಿದ್ಯಾರ್ಥಿಗಳಿಂದ RSS ಗೀತೆ ಹಾಡಿಸಿದ ದಕ್ಷಿಣ ರೈಲ್ವೆ; ಕಿಡಿ ಕಾರಿದ ಕೇರಳ ಸಿಎಂ

ಪಿಒಕೆ ಕುರಿತು ಮಾತು

ಇತ್ತೀಚೆಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು 'ಭಾರತ' ಎಂಬ ಮನೆಯ ಒಂದು ಕೊಠಡಿಗೆ ಹೋಲಿಸಿದ್ದರು. ಆದರೆ ಆ ಕೊಠಡಿಯಲ್ಲಿ ಅಪರಿಚಿತರು ನುಗ್ಗಿದ್ದಾರೆ. ಈ ಕೋಣೆಯನ್ನು ಮರಳಿ ಪಡೆಯಬೇಕು ಎಂದು ಅವರು ಮಧ್ಯಪ್ರದೇಶದ ಸತ್ನಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು. "ಸಂಪೂರ್ಣ ಭಾರತ ಒಂದೇ ಮನೆ, ಆದರೆ ಯಾರೋ ನಮ್ಮ ಮನೆಯ ಒಂದು ಕೋಣೆಯನ್ನು ತೆಗೆದುಹಾಕಿದ್ದಾರೆ, ಅಲ್ಲಿ ನನ್ನ ಟೇಬಲ್, ಕುರ್ಚಿ ಮತ್ತು ಬಟ್ಟೆಗಳನ್ನು ಇಡಲಾಗುತ್ತಿತ್ತು. ಅವರು ಅದನ್ನು ಆಕ್ರಮಿಸಿಕೊಂಡಿದ್ದಾರೆ. ನಾಳೆ, ನಾನು ಅದನ್ನು ಮರಳಿ ಪಡೆಯಬೇಕು ಎಂದು ಹೇಳಿದ್ದರು.

ಪಾಕಿಸ್ತಾನದ ಆಡಳಿತದ ವಿರುದ್ಧ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸುತ್ತಿರುವುದರಿಂದ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉದ್ವಿಗ್ನತೆಯ ಮಧ್ಯೆ ಮೋಹನ್‌ ಭಾಗವತ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದ್ದವು. ಆರ್ಥಿಕ ಪರಿಹಾರ ಮತ್ತು ರಾಜಕೀಯ ಸುಧಾರಣೆಗಳನ್ನು ಕೋರಿ ಸಾವಿರಾರು ಪಿಒಕೆ ನಿವಾಸಿಗಳು ಅವಾಮಿ ಆಕ್ಷನ್ ಕಮಿಟಿ (ಎಎಸಿ) ಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವು.