ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಹಣಕ್ಕಾಗಿ ತನ್ನ ಕನ್ಯತ್ವವನ್ನೇ ಮಾರಿಕೊಂಡ 22 ವರ್ಷದ ವಿದ್ಯಾರ್ಥಿನಿ; ಆಕೆ ಗಳಿಸಿದೆಷ್ಟು ಗೊತ್ತಾ?

ಹಣ ಮಾಡಲು ನೂರಾರು ದಾರಿಗಳಿವೆ ನಿಜ, ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ಹಣ ಗಳಿಸಲು ಮಾಡಿದ ಕೆಲಸದಿಂದ ಎಲ್ಲರೂ ಹುಬ್ಬೇರಿಸುವಂತಾಗಿದೆ. ಹಣಕ್ಕಾಗಿ 22 ವರ್ಷದ ಲಾರಾ ಎಂಬ ವಿದ್ಯಾರ್ಥಿನಿ ತನ್ನ ಕನ್ಯತ್ವವನ್ನೇ ಹರಾಜಿಗಿಟ್ಟು ಎಲ್ಲೆಡೆ ಸುದ್ದಿಯಲ್ಲಿದ್ದಾಳೆ. ಅಂದ ಹಾಗೆ ಆಕೆಯ ಕನ್ಯತ್ವ ಎಷ್ಟು ಮೊತ್ತಕ್ಕೆ ಹರಾಜಾಯಿತು ಅಂತ ಗೊತ್ತಾಗಬೇಕಾದರೆ ಈ ಸುದ್ದಿ ಓದಿ.

ಆನ್‌ಲೈನ್‌ನಲ್ಲಿ ತನ್ನ ಕನ್ಯತ್ವ ಹರಾಜಿಗಿಟ್ಟ ಹುಡುಗಿ..!

ತನ್ನ ಕನ್ಯತ್ವ ಹರಾಜಿಗಿಟ್ಟ ಹುಡುಗಿ

Profile Sushmitha Jain Mar 13, 2025 10:51 AM

ಬೆಂಗಳೂರು: ಹಣ ಮಾಡಲು ನೂರಾರು ದಾರಿಗಳಿವೆ ನಿಜ, ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ಹಣ ಗಳಿಸಲು ಮಾಡಿದ ಕೆಲಸದಿಂದ ಎಲ್ಲರೂ ಹುಬ್ಬೇರಿಸುವಂತಾಗಿದೆ. ಹಣಕ್ಕಾಗಿ 22 ವರ್ಷದ ಲಾರಾ ಎಂಬ ವಿದ್ಯಾರ್ಥಿನಿ ತನ್ನ ಕನ್ಯತ್ವವನ್ನೇ ಹರಾಜಿಗಿಟ್ಟು ಎಲ್ಲೆಡೆ ಸುದ್ದಿಯಲ್ಲಿದ್ದಾಳೆ. ಅಂದ ಹಾಗೆ ಆಕೆಯ ಕನ್ಯತ್ವ ಎಷ್ಟು ಮೊತ್ತಕ್ಕೆ ಹರಾಜಾಯಿತು ಅಂತ ಗೊತ್ತಾಗಬೇಕಾದರೆ ಈ ಸುದ್ದಿ ಓದಿ(Viral Post). ಸಾಮಾನ್ಯವಾಗಿ ವೇಶ್ಯಾವಾಟಿಕೆಗೆ ಸಭ್ಯ ಹೆಸರಾಗಿ ಬಳಸುವ ʼಎಸ್ಕಾರ್ಟ್‌ʼ ಏಜೆನ್ಸಿಯ ಮೂಲಕ ಲಾರಾ ತನ್ನ ಕನ್ಯತ್ವವನ್ನು ಹರಾಜಿಗಿಟ್ಟಿದ್ದಳು. ಈ ಸುದ್ದಿ ತಿಳಿದದ್ದೇ ತಡ, ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು ಆಕೆಯ ಕನ್ಯತ್ವವನ್ನು ತಮ್ಮದಾಗಿಸಬೇಕೆಂದು ಸರದಿ ಸಾಲಿನಲ್ಲಿ ನಿಂತುಬಿಟ್ಟರು. ಮೊದಲು ನಡೆದಿದ್ದೇ ಆಕೆಯ ಕನ್ಯತ್ವ ಪರೀಕ್ಷೆ. ಹರಾಜು ಕೂಗಲು ಬಂದವರ ಸಮ್ಮುಖದಲ್ಲಿಯೇ ಲಾರಾನನ್ನು ನಿಲ್ಲಿಸಿದ ವೈದ್ಯರು ಆಕೆಯ ಕನ್ಯತ್ವ ಪರೀಕ್ಷೆಯನ್ನು ನಡೆಸಿ ಸರ್ಟಿಫಿಕೇಟ್‌ ಕೂಡ ಕೊಟ್ಟುಬಿಟ್ಟರು.

ಇದರ ನಂತರ ಹರಾಜು ಅರಂಭವಾಗಿದ್ದು, ಹಾಲಿವುಡ್‌ನ ನಟನೊಬ್ಬ ಬರೋಬ್ಬರಿ 1.7 ಮಿಲಿಯನ್‌ ಡಾಲರ್‌ (ಸುಮಾರು 18 ಕೋಟಿ ರೂಪಾಯಿ) ಕೊಟ್ಟು ಆಕೆಯ ಕನ್ಯತ್ವವನ್ನು ಖರೀದಿಸಿದ್ದಾನೆ. ಕನ್ಯತ್ವ ಖರೀದಿಸಿದ ಆ ಹಾಲಿವುಡ್ ನಟನ ಹೆಸರು ಬಹಿರಂಗಗೊಂಡಿಲ್ಲ. ತನ್ನ ಕನ್ಯತ್ವವನ್ನೇ ಮಾರಾಟ ಮಾಡಿದ ಬಳಿಕ ಲಾರಾ ಆಡಿದ ಮಾತುಗಳು ಮತ್ತಷ್ಟು ಶಾಕಿಂಗ್‌ ಆಗಿದ್ದವು.

ಈ ಸುದ್ದಿಯನ್ನು ಓದಿ: Viral Video : ಯುನಿವರ್ಸಿಟಿ ಹಾಸ್ಟೆಲ್‌ ಊಟದಲ್ಲಿ ಬ್ಲೇಡ್‌ ಪತ್ತೆ ; ವಿದ್ಯಾರ್ಥಿಗಳಿಂದ ಪ್ರತಿಭಟನೆ

“ನನಗೆ ಸ್ವಲ್ಪವೂ ವಿಷಾದವಿಲ್ಲ. ಬಹುತೇಕ ಎಲ್ಲಾ ಹುಡುಗಿಯರು ಫ್ರೀಯಾಗಿ ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ನಾನು ಕನಿಷ್ಠ ಪಕ್ಷ ನನ್ನ ಭವಿಷ್ಯಕ್ಕಾಗಿ ಏನನ್ನಾದರೂ ಸಂಪಾದಿಸಿದೆ. ಇದು ಜೀವಮಾನದ ಒಪ್ಪಂದವೇನೂ ಅಲ್ಲವಲ್ಲ” ಎಂದು ಲಾರಾ ಹೇಳಿದ್ದಾಳೆ. ಮುಂದುವರೆದು, ನಾನು ಯಾರಿಗೆ ಕನ್ಯತ್ವ ಮಾರಿಕೊಂಡಿದ್ದೇನೆ ಆ ವ್ಯಕ್ತಿ ಜತೆ ಮದುವೆಯನ್ನಂತೂ ಆಗಲ್ಲ, ಈ ವಿಚಾರದಲ್ಲಿ ನಾನು ತರ್ಕಬದ್ಧ ವ್ಯಕ್ತಿ. ನನ್ನ ನಿರ್ಧಾರಕ್ಕೆ ಬದ್ಧಳಾಗಿದ್ದೇನೆ ಎಂದಿದ್ದಾಳೆ.

ಲಾರಾಳ ಜೀವನ ಸಾಹಸಗಳು ಇಲ್ಲಿಗೇ ಮುಗಿಯಲ್ಲ. ಹರಾಜಿನಲ್ಲಿ ಆಕೆಯ ಕನ್ಯತ್ವವನ್ನು ಗೆದ್ದ ಹಾಲಿವುಡ್‌ ನಟನ ಜೊತೆ ಅವಳು ಜೆಫ್ರಿ ಎಪ್ಸ್ಟೀನ್‌ನ ಖಾಸಗಿ ದ್ವೀಪಕ್ಕೆ ಭೇಟಿ ನೀಡಿ, ಅಲ್ಲಿ ಆ ನಟನೊಂದಿಗೆ ಏಕಾತದಲ್ಲಿ ರಾತ್ರಿಯನ್ನೂ ಕಳೆದಿದ್ದಾಳೆ. ಸದ್ಯಕ್ಕೆ ಹಣ ಸಂಪಾದಿಸಲು ʼಶುಗರ್‌ ಬೇಬಿʼ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಅವಳು ಯೋಚಿಸುತ್ತಿದ್ದಾಳಂತೆ. ಆಕೆ ಶುಗರ್‌ ಬೇಬಿಯಾಗಿ ಬರಬೇಕೆಂದರೆ, ಆಕೆಯ ಕಂಪನಿಗೆ ಪ್ರತಿ ತಿಂಗಳು 30,000 ಡಾಲರ್‌ ಹಣ ನೀಡುವವರು ಬೇಕಂತೆ. ಈ ಷರತ್ತಿಗೆ ಒಪ್ಪಿಗೆ ಸೂಚಿಸುವ ಶ್ರೀಮಂತರು, ʼದಾನಿಗಳುʼ, ಲೈಂಗಿಕ ಆಸಕ್ತರು ಯಾರದರೂ ಇದ್ದರೆ ತನ್ನನ್ನು ಸಂಪರ್ಕಿಸಿ ಎಂದು ಲಾರಾ ಬಹಿರಂಗವಾಗಿ ಘೋಷಿಸಿದ್ದಾಳೆ.