ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼನಮ್ಮ ಶಾಲೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲʼʼ: ಅಭಿಯಾನದ ಹೆಸರಲ್ಲಿ ಮೀಸೆ ತೂರಿಸಲು ಯತ್ನಿಸಿದ ʼಜಿರಳೆಗಳಿಗೆʼ ಪಾಠ ಕಲಿಸಿದ ಸ್ಥಳೀಯರು

CJP School Thik Karo campaign: ಸಿಜೆಪಿ ತಂಡವು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು. ಈ ಸಂದರ್ಭದಲ್ಲಿ, ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ವಿಚಾರವಾಗಿ ಸಿಜೆಪಿ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿ ನಡುವೆ ವಿವಾದ ಉಂಟಾಗಿತ್ತು. ಸಿಜೆಪಿ ತಂಡ ಶಾಲೆಗಳಿಗೆ ಭೇಟಿ ನೀಡುವ ಮೊದಲೇ ಕೆಲವು ಶಾಲೆಗಳಿಗೆ ಬೀಗ ಹಾಕಲಾಗಿತ್ತು ಎಂದು ಸೌರವ್ ದಾಸ್ ಆರೋಪಿಸಿದ್ದಾರೆ.

ಸಿಜೆಪಿಯ 'ಸ್ಕೂಲ್ ಥಿಕ್ ಕರೋ' ಅಭಿಯಾನದಲ್ಲಿ ಸಂಘರ್ಷ

ಉತ್ತರ ಪ್ರದೇಶದಲ್ಲಿ ಸಿಜೆಪಿಯ 'ಸ್ಕೂಲ್ ಟೀಕ್ ಕರೋ' ಅಭಿಯಾನದಲ್ಲಿ ಸಂಘರ್ಷ -

Priyanka P
Priyanka P Sep 22, 2026 8:40 PM

ನೋಯ್ಡಾ, ಸೆ. 22: ಕಾಕ್ರೋಚ್ ಜನತಾ ಪಾರ್ಟಿಯ (Cockroach Janta Party) ಹೊಸ 'ಸ್ಕೂಲ್ ಟೀಕ್‌ ಕರೋ' ಅಭಿಯಾನವು ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ (Uttar Pradesh) ಗ್ರೇಟರ್ ನೋಯ್ಡಾದಲ್ಲಿ ಸ್ಥಳೀಯ ನಿವಾಸಿಗಳು, ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್ ಮತ್ತು ಅವರ ತಂಡ ಸರ್ಕಾರಿ ಶಾಲೆಯೊಂದಕ್ಕೆ ಪ್ರವೇಶಿಸದಂತೆ ತಡೆದಿದ್ದಾರೆ. ಅಲ್ಲದೆ, ಅವರ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಸಿಜೆಪಿ ಸದಸ್ಯರ ಪ್ರವೇಶವನ್ನು ನಿರ್ಬಂಧಿಸಲು ಕೆಲವು ಶಾಲೆಗಳಿಗೆ ಬೀಗ ಹಾಕಲಾಗಿತ್ತು ಎಂದು ದಾಸ್ ಆನಂತರ ಆರೋಪಿಸಿದ್ದಾರೆ.

ಘಟನೆ ಬಳಿಕ, ಸೌರವ್ ದಾಸ್ ನೋಂದಣಿ ಸಂಖ್ಯೆ ಇಲ್ಲದ ವಾಹನವೊಂದರ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಉತ್ತರ ಪ್ರದೇಶ ಸರ್ಕಾರವು ತಮ್ಮನ್ನು ಹಿಂಬಾಲಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ (ಸೆಪ್ಟೆಂಬರ್‌ 22) ನಡೆದ ಈ ವಿವಾದಕ್ಕೆ ಕೆಲ ದಿನಗಳ ಮುನ್ನ ಸಿಜೆಪಿ ತಂಡವು ಗೌತಮ್ ಬುದ್ಧ ನಗರ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು. ಈ ಸಂದರ್ಭದಲ್ಲಿ, ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ವಿಚಾರವಾಗಿ ಸಿಜೆಪಿ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿ ನಡುವೆ ವಿವಾದ ಉಂಟಾಗಿತ್ತು. ಸಿಜೆಪಿ ತಂಡ ಶಾಲೆಗಳಿಗೆ ಭೇಟಿ ನೀಡುವ ಮೊದಲೇ ಕೆಲವು ಶಾಲೆಗಳಿಗೆ ಬೀಗ ಹಾಕಲಾಗಿತ್ತು ಎಂದು ದಾಸ್ ಆರೋಪಿಸಿದ್ದಾರೆ. ಸಿಜೆಪಿ ತಂಡವನ್ನು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡದಂತೆ ಉತ್ತರ ಪ್ರದೇಶ ಸರ್ಕಾರ ಏಕೆ ನಿರ್ಬಂಧಿಸುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇಲ್ಲಿದೆ ಪೋಸ್ಟ್:



“ಇಂದು (ಮಂಗಳವಾರ) ಗ್ರೇಟರ್ ನೋಯ್ಡಾದಲ್ಲಿದ್ದೇವೆ. ನಾವು ಭೇಟಿ ನೀಡಬಹುದು ಎಂಬ ಮುನ್ಸೂಚನೆಯಿಂದಾಗಿ ಬೀಗ ಹಾಕಲಾದ ಎರಡನೇ ಜ್ಞಾನ ದೇಗುಲ ಇದಾಗಿದೆ. ಶಾಲೆಗಳನ್ನು ಅಕ್ಷರ ದೇಗುಲಗಳು ಎಂದೂ ಕರೆಯಲಾಗುತ್ತದೆ. ಆದರೆ ಇಂದು, ಉತ್ತರ ಪ್ರದೇಶ ಸರ್ಕಾರವು ಗ್ರೇಟರ್ ನೋಯ್ಡಾದ ಎಲ್ಲ ದೇಗುಲಗಳಿಗೂ ಬೀಗ ಹಾಕಿದೆ. ಯುಪಿ ಸರ್ಕಾರಕ್ಕೆ ಇಷ್ಟೊಂದು ಭಯವೇಕೆ?” ಎಂದು ಸೌರವ್ ದಾಸ್ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸರ್ಕಾರದ ಮುಂದೆ 7 ಬೇಡಿಕೆ ಮುಂದಿಟ್ಟ ಸಿಜೆಪಿ

ಈ ಘಟನೆಯ ವಿಡಿಯೊಗಳಲ್ಲಿ, ಸಿಜೆಪಿ ತಂಡವು ಶಾಲೆಗೆ ಭೇಟಿ ನೀಡಿದ ಸಮಯದಲ್ಲಿ ಸ್ಥಳೀಯರು ಅವರನ್ನು ತಡೆದು ಪ್ರಶ್ನಿಸುತ್ತಿರುವುದು ಕಂಡುಬಂದಿದೆ. ಸ್ಥಳೀಯರು ತಮ್ಮ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಿಗೆ ಸಿಜೆಪಿ ಭೇಟಿ ನೀಡುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. “ನಾವು ಇಲ್ಲೇ ವಾಸಿಸುತ್ತಿದ್ದೇವೆ. ನಮ್ಮ ಶಾಲೆಗಳಲ್ಲಿ ಎಲ್ಲವೂ ಸರಿಯಾಗಿದೆ. ನೀವು ಇಲ್ಲಿಂದ ವಾಪಸ್ ಹೋಗಬಹುದು. ಯಾರು ದೂರು ನೀಡುತ್ತಿದ್ದಾರೋ ಅವರು ತಮ್ಮದೇ ಆದ ಪಟ್ಟಭದ್ರ ಹಿತಾಸಕ್ತಿ ಹೊಂದಿರಬಹುದು ಅಥವಾ ಹಣ ಪಡೆದಿರಬಹುದು” ಎಂದು ವ್ಯಕ್ತಿಯೊಬ್ಬರು ಸೌರವ್ ದಾಸ್ ಅವರಿಗೆ ಹೇಳಿದ್ದಾರೆ.

ಆಗಸ್ಟ್ ಆರಂಭದಲ್ಲಿ ರಾಜಸ್ಥಾನದ ಕನ್ವರ್‌ಪುರ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಲು ಪ್ರಯತ್ನಿಸುತ್ತಿದ್ದಾಗ, ಸಿಜೆಪಿಯ ಸಹ-ಸಂಚಾಲಕ ಅಶುತೋಷ್ ರಂಕಾ ಮತ್ತು ಸಂಘಟನೆಯ ಸದಸ್ಯರ ಮೇಲೆ ದಾಳಿ ನಡೆಸಲಾಗಿತ್ತು ಎನ್ನುವ ಆರಪ ಕೇಳಿ ಬಂದಿತ್ತು.