ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Readers Colony: ಪತ್ರಿಕೆಗಳಿಗೆ ವಿಶ್ವಾಸಾರ್ಹತೆ

ಮುಖ್ಯವೋ ಅಥವಾ ಜಾಹೀರಾತು ತರುವ ಆದಾಯವೋ ಎಂಬುದಕ್ಕೆ ಸಮರ್ಥ ಉತ್ತರ ಅ.1ರ ‘ನೂರೆಂಟು ವಿಶ್ವ’ ಬರಹದಲ್ಲಿ ಸಿಕ್ಕಿದೆ. ಪತ್ರಿಕೆಗೆ ಸಂಪನ್ಮೂಲ ಜಾಹೀರಾತಿನಿಂದ. ಆದರೆ, ಸಮಾಜಕ್ಕೆ ಕಳಂಕ ತರುವಂತಹ ಜಾಹೀರಾತನ್ನು, ಅದೆಷ್ಟೇ ಹಣ ತರುತ್ತಿದ್ದರೂ, ಹೆಸರು ಗಳಿಸಿದ ಪತ್ರಿಕೆಗಳು ಸ್ವೀಕರಿಸುವುದಿಲ್ಲ ಎಂಬುದು ಎಷ್ಟು ಸತ್ಯವೋ, ಕೆಲವೊಮ್ಮೆ ತಿಳಿದೋ, ತಿಳಿಯದೆ ಯೋ ಪ್ರಮಾದವಾ ಗುವುದೂ ಉಂಟು.

Readers Colony: ಪತ್ರಿಕೆಗಳಿಗೆ ವಿಶ್ವಾಸಾರ್ಹತೆ

-

Profile
Ashok Nayak Oct 2, 2026 2:37 PM

ಓದುಗರ ಓಣಿ

ಮುಖ್ಯವೋ ಅಥವಾ ಜಾಹೀರಾತು ತರುವ ಆದಾಯವೋ ಎಂಬುದಕ್ಕೆ ಸಮರ್ಥ ಉತ್ತರ ಅ.1ರ ‘ನೂರೆಂಟು ವಿಶ್ವ’ ಬರಹದಲ್ಲಿ ಸಿಕ್ಕಿದೆ. ಪತ್ರಿಕೆಗೆ ಸಂಪನ್ಮೂಲ ಜಾಹೀರಾತಿನಿಂದ. ಆದರೆ, ಸಮಾಜಕ್ಕೆ ಕಳಂಕ ತರುವಂತಹ ಜಾಹೀರಾತನ್ನು, ಅದೆಷ್ಟೇ ಹಣ ತರುತ್ತಿದ್ದರೂ, ಹೆಸರು ಗಳಿಸಿದ ಪತ್ರಿಕೆಗಳು ಸ್ವೀಕರಿಸುವುದಿಲ್ಲ ಎಂಬುದು ಎಷ್ಟು ಸತ್ಯವೋ, ಕೆಲವೊಮ್ಮೆ ತಿಳಿದೋ, ತಿಳಿಯದೆ ಯೋ ಪ್ರಮಾದವಾಗುವುದೂ ಉಂಟು.

ಆದಾಯ ವರ್ಸಸ್ ಸಾಮಾಜಿಕ ಜವಾಬ್ದಾರಿ, ಯಾವುದಕ್ಕೆ ಹೆಚ್ಚು ಒತ್ತು ಕೊಡಬೇಕೆಂದು ನಿರ್ಧರಿ ಸುವುದೂ ಪತ್ರಿಕೆಯ ನಿಲುವನ್ನು ಅವಲಂಬಿಸಿರುತ್ತದೆ. ಲೇಖಕರು ನಮೂದಿಸಿದ ‘ದಿ ಹಿಂದೂ’ ಪತ್ರಿಕೆ, ಸಿದ್ಧಾಂತಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದು ನಿಜವಾದ ಪತ್ರಿಕಾ ಧರ್ಮ ಪಾಲಿಸಿ ದಂತೆ. ಅದಕ್ಕಾಗೇ ಇರಬೇಕು, ಹೆಚ್ಚಿನ ಪತ್ರಿಕೆಗಳು ‘ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಜಾಹೀರಾತಿನ ವಿಷಯದ ಹೊಣೆ ಜಾಹೀರಾತು ದಾರರದೇ’ ಅಂತ ಪ್ರಕಟಿಸುವುದು. ಏನೇ ಇರಲಿ, ಹಿಂದೂ ಪತ್ರಿಕೆ ಆದರ್ಶ ಮೆರೆದಿದೆ.

- ಶಂಕರನಾರಾಯಣ ಭಟ, ಹೊನ್ನಾವರ

ಇದನ್ನೂ ಓದಿ: Vishweshwar Bhat Column: ಶೋಭಾ ಸಿಂಗ್‌ ನೆನಪು

ತೇಜೋವಧೆ ಸಲ್ಲದು

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ನಡೆಯುವ ಜನಪರ ಹೋರಾಟಗಳು, ಪ್ರತಿಭಟನೆಗಳು ಮತ್ತು ಧರಣಿಗಳ ಸಂದರ್ಭದಲ್ಲಿ ಕೆಲವು ನಾಯಕರು ಬಳಸುತ್ತಿರುವ ಭಾಷೆಯ ಮಟ್ಟ ತೀರಾ ಕೆಳಮಟ್ಟಕ್ಕೆ ಕುಸಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಜನರ ಹಕ್ಕುಗಳಿ ಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ನಡೆಯಬೇಕಾದ ಹೋರಾಟದ ವೇದಿಕೆಗಳು ಇಂದು ರಾಜಕೀಯ ಎದುರಾಳಿಗಳನ್ನು ವೈಯಕ್ತಿಕವಾಗಿ ನಿಂದಿಸುವ ಮತ್ತು ಅವರ ತೇಜೋವಧೆ ಮಾಡುವ ಅಖಾಡಗಳಾಗಿ ಮಾರ್ಪಡುತ್ತಿರುವುದು ಅತ್ಯಂತ ವಿಷಾದನೀಯ.

ಟೀಕೆಗಳು ಸಿದ್ಧಾಂತ, ನೀತಿ ಮತ್ತು ವಿಷಯಾಧಾರಿತವಾಗಿರಬೇಕೇ ಹೊರತು, ವ್ಯಕ್ತಿಗತ ನಿಂದನೆ ಯಾಗಬಾರದು. ಎದುರಾಳಿಗಳ ಖಾಸಗಿ ಜೀವನ, ಕುಟುಂಬ ಅಥವಾ ದೈಹಿಕ ದೌರ್ಬಲ್ಯಗಳನ್ನು ಗುರಿಯಾಗಿಸಿಕೊಂಡು ಅಸಭ್ಯ ಭಾಷಣ ಮಾಡುವುದು ಹೋರಾಟದ ಪಾವಿತ್ರ್ಯವನ್ನೇ ಮಣ್ಣುಪಾಲು ಮಾಡುತ್ತದೆ. ಹೋರಾಟದ ನೇತೃತ್ವ ವಹಿಸುವ ನಾಯಕರು ತಮ್ಮ ಭಾಷೆಯ ಮೇಲೆ ಸಂಯಮ ಮತ್ತು ಸಭ್ಯತೆ ಕಾಯ್ದುಕೊಳ್ಳುವುದು ಅತ್ಯಗತ್ಯ.

- ಉದಯ ಮ. ಯಂಡಿಗೇರಿ, ಧಾರವಾಡ

ತನಿಖೆಗೆ ಒಳಪಡಿಸಿ

ಸರ್ಕಾರ ಮುಂದಿನ ನವೆಂಬರ್ ತಿಂಗಳ ಒಳಗೆ ನಮ್ಮ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಲಂಚ ತಿಂದ ಶಾಸಕರ ಹೆಸರನ್ನು ಬಹಿರಂಗ ಪಡಿಸುವುದಾಗಿ ರಾಜ್ಯ ಗುತ್ತಿಗೆ ಸಂಘದ ಅಧ್ಯಕ್ಷ ಮಂಜುನಾಥ್ ಅವರು ನಿನ್ನೆ ಹೇಳಿದ್ದಾರೆ. ಇದು ಒಂದು ರೀತಿಯಲ್ಲಿ ಸರ್ಕಾರವನ್ನೇ ಬ್ಲಾಕ್‌ಮೇಲ್ ಮಾಡಿದಂತೆ. ನಾಲ್ಕು ವರ್ಷಗಳ ಹಿಂದೆ ಅಂದಿನ ರಾಜ್ಯ ಗುತ್ತಿಗೆ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣನವರು ನಾವು 40 ಪರ್ಸೆಂಟ್ ಕಮಿಷನ್ ಕೊಟ್ಟು ಬಿಲ್ ಮಾಡಿಸಿಕೊಳ್ಳುತ್ತಿದ್ದೇವೆ ಎಂದು ಅಂದಿನ ಸರ್ಕಾರದ ವಿರುದ್ಧ ಹೇಳಿದ್ದನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಂಡು ‘ಇದು 40 ಪರ್ಸೆಂಟ್ ಕಮಿಷನ್ ಸರ್ಕಾರ’ ಎಂದು ವ್ಯಾಪಕ ಪ್ರಚಾರ ಮಾಡಿದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಈಗ ಅದೇ ಗುತ್ತಿಗೆ ಸಂಘ, ಈಗಿನ ಸರ್ಕಾರದಲ್ಲಿ ಕಮಿಷನ್ ಹಿಂದಿನದಕ್ಕಿಂತ ಹೆಚ್ಚಾಗಿದೆ ಎಂದಿದೆ.

ಕಾನೂನು ಪ್ರಕಾರ ಕಮಿಷನ್ ಕೇಳುವುದೂ ಕೊಡುವುದೂ ತಪ್ಪು. ಹೀಗೆ ಬಹಿರಂಗವಾಗಿ ಶಾಸಕರಿಗೆ ಕಮಿಷನ್ ಕೊಡುತ್ತಿದ್ದೇವೆ ಎನ್ನುವ ಗುತ್ತಿಗೆ ಸಂಘದ ಪದಾಧಿಕಾರಿಗಳನ್ನು ಏಕೆ ತನಿಖೆಗೆ ಒಳಪಡಿಸಬಾರದು?

- ಬೂಕನಕೆರೆ ವಿಜೇಂದ್ರ, ಮೈಸೂರು

ಮೋದಿಯವರ ಬಳಿ ಹೋಗಿ

ಸರಕಾರ ಘೋಷಿಸಿರುವ ಬರಗಾಲ ಅಲ್ಪ ಪರಿಹಾರ ಮೊತ್ತದ ವಿರುದ್ಧ ಜನರನ್ನು ಜಾಗೃತಿ ಗೊಳಿಸಲು ಜನರ ಬಳಿ ಹೋಗುತ್ತೇವೆ ಎಂಬ ವಿಪಕ್ಷ ನಾಯಕರಾದ ಆರ್.ಅಶೋಕ ಹಾಗೂ ಬಿವೈ ವಿಜಯೇಂದ್ರ ಹೇಳಿಕೆಗಳು ನಗೆಪಾಟಲಿಗೆ ಈಡಾಗುವಂಥದ್ದು. ಪ್ರಧಾನಿ ಮೋದಿಯವರ ಬಳಿ ನಿಯೋಗ ಹೋಗಿ ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಗಂಭೀರತೆಯನ್ನು ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಬಿಜೆಪಿ ನಾಯಕರು ಏಕೆ ಮಾಡಬಾರದು?

- ವಿ.ಜಿ.ಇನಾಮದಾರ, ಸಾರವಾರ