ಭ್ರಷ್ಟಾಚಾರದ ಪರಾಕಾಷ್ಠೆ
ಭ್ರಷ್ಟಾಚಾರದ ಪರಾಕಾಷ್ಠೆ



ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ಕಾರಣಕ್ಕೆ ವ್ಯಾಪಕ ವಿವಾದಕ್ಕೊಳಗಾಗಿದ್ದ, ೨೦೧೧ನೇ ಸಾಲಿನ ೩೬೨ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿದ ನಂತರ, ಆ ತೀರ್ಪು ಪ್ರಶ್ನಿಸಿ, ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ಕೂಡಾ ಸುಪ್ರೀಂ ಕೋರ್ಟ್ ವಜಾಗೊಳಿಸಿದ ನಂತರ, ಈಗ ಹೊಸ ಮಸೂದೆ ರೂಪಿಸಿ ೩೬೨ ಅಭ್ಯರ್ಥಿಗಳಿಗೆ ನೇಮಕ ಮಾಡಲು, ಪ್ರಸ್ತುತ ಅಧಿವೇಶನದಲ್ಲಿ ಸರ್ಕಾರ ಮುಂದಾ ಗಿರುವುದನ್ನು ನೋಡಿದರೆ ಗೌರವಾನ್ವಿತ ನ್ಯಾಯಾಲಯಗಳ ತೀರ್ಪಿಗೆ ಬೆಲೆ ಏನು? ಈ ಪ್ರಶ್ನೆ ಕಾಡುತ್ತಿದೆ. ಈಗಾಗಲೇ, ಪ್ರಸ್ತುತ ಸರ್ಕಾರದ ಮೇಲೆ ಶೇ.೪೦ ಕಮಿಷನ್ ಆರೋಪದ ತೂಗುಗತ್ತಿ ಇದೆ.
ವಿವಿಧ ಭ್ರಷ್ಟಾಚಾರದ ಆರೋಪ ಹೊತ್ತವರು, ಕುಟುಕು ಕಾರ್ಯಾಚರಣೆಯಲ್ಲಿ ‘ತತ್ತಿ’ಗಾಗಿ ಕಮಿಷನ್ ವಿಚಾರ ಮಾತನಾಡಿದ್ದಾರೆ ಎನ್ನಲಾದವರೂ ಸಹ ಸರ್ಕಾರದ ಭಾಗವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತನ್ನ ಮೇಲಿನ ಎಲ್ಲ ಆರೋಪಗಳಿಂದ ಮುಕ್ತವಾಗಿ ಚುನಾವಾಣಾ ವರ್ಷದಲ್ಲಿ ಜನರ ಮುಂದೆ ಶುದ್ಧವಾಗಿ ಬರಬೇಕೆನ್ನುವ ಇರಾದೆ ಸರ್ಕಾರಕ್ಕೆ ಇರಬೇಕೆ ಹೊರತು ಭ್ರಷ್ಟತೆಯ ಪರಾಕಾಷ್ಠೆ ತಲುಪುವ ಧಾವಂತ ಸರ್ವಥಾ ಒಳ್ಳೆಯದಲ್ಲ. ಸರ್ಕಾರದ ನಿರ್ಧಾರ ಯಾವಾಗಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ ಪ್ರಾಮಾಣಿಕತೆಯ ಹಾಗೂ ಪಾರದರ್ಶಕತೆಯ ಉದಾಹರಣೆಗಳನ್ನು ಸೃಷ್ಟಿಸಬೇಕೆ ಹೊರತು ಇಂತಹ ನಿರ್ಧಾರಗಳಿಂದ ಭ್ರಷ್ಟಾ ಚಾರಕ್ಕೆ ಪರೋಕ್ಷವಾಗಿ ಇಂಬು ನೀಡುತ್ತಿದ್ದೀರಿ, ಎನ್ನುವ ಸಂದೇಶ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷೆಗಳಿಗೆ ರವಾನೆ ಆಗಬಾರದು.
- ಯತೀಶ್ ಬಳ್ಕೂರ್
ಪ್ರಾಮಾಣಿಕ ಅಭ್ಯರ್ಥಿಗಳ ಗತಿ ಹೀಗಾದರೆ ಏನು...?
೨೦೧೧ನೇ ಸಾಲಿನ ೩೬೨ ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಪಟ್ಟಿಯ ಹುzಗಳನ್ನು, ಸ್ವತಃ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಗಳೇ ವಜಾಗೊಳಿಸಿರುವ ಸಂದರ್ಭದಲ್ಲಿ,ಇದಕ್ಕೆ ಸಂಬಂಧಿಸಿದಂತೆ ಸರ್ಕಾರವೇ ಕಾಯ್ದೆ ರೂಪಿಸಿ ೩೬೨ ಅಬ್ಯರ್ಥಿಗಳಿಗೆ ನೇಮಕ ಮಾಡಲು ಸರ್ಕಾರ ಮುಂದಾಗಿರುವದನ್ನು ನೋಡಿದರೆ, ನ್ಯಾಯಾಲಯದ ಆದೇಶಗಳಿಗೆ ಕಿಂಚಿತ್ತು ಬೆಲೆ ಇಲ್ಲದಂತಾಗಿದೆ.
ಹಾಗಾದರೆ ನೊಂದ ಅಭ್ಯರ್ಥಿಗಳು ನ್ಯಾಯಾಲಯವನ್ನು ನಂಬಬೇಕೋ..? ಅಥವಾ ಸರ್ಕಾರವನ್ನು ನಂಬಬೇಕೊ..? ಇದರ ಹಿಂದೆ ಕಾಣದ ಕೈಗಳು ಕಾರ್ಯನಿರ್ವಹಿಸುತ್ತಿರುವದು ಸರ್ವಸತ್ಯ.ಇಲ್ಲಿ ಜಾತಿ ಲೆಕ್ಕಾಚಾರದ ಮಾತುಗಳು ಕೇಳಿಬರುತ್ತವೆ,ಆಯ್ಕೆಯಾದವರಲ್ಲಿ ರಾಜ್ಯದ ಪ್ರತಿಷ್ಠಿತ ಜಾತಿ
ಕುಲಬಾಂಧವರಾಗಿದ್ದಾರಲ್ಲದೇ, ರಾಜಕೀಯ ಮುಖಂಡರ ಹಾಗೂ ಹಿರಿಯ ಅಧಿಕಾರಿಗಳ ಸಂಬಂಧಿಗಳು ಪಟ್ಟಿಯಲ್ಲಿರುವುದು ಸೋಜಿಗವಾಗಿದೆ.? ವುಗಳಲ್ಲದೇ ಇತ್ತಿಚಿನ ಪಿಎಸ್ಐ ನೇಮಕಾತಿಯಲ್ಲೂ ಭ್ರಷ್ಟಾಚಾರ ಹಾಸೂ ಹೊಕ್ಕಾಗಿದೆ ಎಂದರೆ ಗತಿ ಏನು..? ’ಬೆಂಕಿ ಇಲ್ಲದೇ ಹೊಗೆಯಾಡುವದಿಲ್ಲ’
ಎಂಬುದು ಅರಿವಿರಲಿ. ಹಾಗಾದರೆ ಪ್ರಾಮಾಣಿಕ ಪ್ರಜ್ಞಾವಂತ ಓದುಗರಿಗೆ ಬೆಲೆ ಇಲ್ಲವೇ..? ಅವರು ಕೇವಲ ಓದಿಗಾಗಿಯೇ ಸಿಮೀತವೇ..? ಸರ್ಧಾತ್ಮಕ ಪರೀಕ್ಷೆಯ ಗಾಳಿ ಗಂಧವಿಲ್ಲ ದವರು ಪ್ರಸ್ತುತ ವಿವಿಧ ಹುzಗಳಿಗೆ ಆಯ್ಕೆಯಾಗುತ್ತಿದ್ದಾರೆ.
ಹೀಗೆ ಮುಂದುವರೆದರೆ ’ ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ’ ಎಂಬ ಬಸವಣ್ಣನ ಮಾತು ಚಾಲ್ತಿಗೊಳ್ಳುತ್ತದೆ. ಆರ್ಥಿಕ ಸದೃಢರಿಗೆ ಮಾತ್ರ ಬೇಕಾದಂತಹ ಹುzಗಳು ಎಂಬ ಕಾಲ ಸನ್ನಿಹಿತವಾಗುವದು ದೂರ ಉಳಿದಿಲ್ಲ. ಹಾಗಾದರೆ ಪ್ರಜಾಪ್ರಭುತ್ವದಲ್ಲಿ ಉಳ್ಳವರಿಗೆ ಒಂದು ನ್ಯಾಯಾವಾದರೆ..? ಮತ್ತೊಂದು ವರ್ಗ ಎಲ್ಲಿ ಹೋಗಬೇಕು..? ಬಡತನದಿಂದ ಬೆಂದು ಉನ್ನತ ಅಧಿಕಾರಿಗಳಾಗಬೇಕೆಂದು ಹಲವು ಕನಸುಗಳನ್ನು ಹೊತ್ತು, ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ಪ್ರಪಂಚದ ಆಗುಹೋಗುಗಳ ಅರಿವಿಲ್ಲದೇಯೇ ರಾಜ್ಯದವಲ್ಲದೇ ದೇಶದ ಹಲವು ಪಟ್ಟಣಗಳಲ್ಲಿ ತಾವು ಹುಟ್ಟಿದ ಮನೆಗಳನ್ನು, ಕೇವಲ ಓದಿನ ಹಸಿವಿಗಾಗಿ ,ಸರ್ಕಾರಿ ಉದ್ಯೋಗದ ನಿರೀಕ್ಷೆಗಾಗಿ, ಊರನ್ನು ತೊರೆದ ಜನ, ಹಲವಾರು ಇದ್ದಾರೆ.
ಇವರ್ಯಾರು ಉಳ್ಳವರಲ್ಲ ಎಂಬುದು ಅರಿವಿರಲಿ, ಕಡುಬಡತನದಿಂದ ಬೆಂದು ಸಾಲ ಸೋಲಾ ಮಾಡಿ ಕಣ್ಣಿಗೆ ಎಣ್ಣೆ ಹಾಕಿಕೊಂಡು ರಾಜ್ಯದ ಧಾರವಾಢ ದಂತಹ ಸ್ಥಳಗಳಲ್ಲಿ ನಿದ್ದೆಯ ಅರಿವಿಲ್ಲದೇ ಎಷ್ಟೋ ಜನ ಕಷ್ಟ ಪಟ್ಟು ಓದುತ್ತಿರುವ ಸಂದರ್ಭದಲ್ಲಿ , ಪ್ರತಿಯೊಂದು ಹುzಗಳು ಹೀಗೆ ಆದರೆ
ಅವರ ಗತಿ ಏನು..? ಎಂಬುದು ಪ್ರಜ್ಞಾವಂತರಾದವರಿಗೆ ಅರಿವಿರಬೇಕು.ಇನ್ನಾದರೂ ಸರ್ಕಾರ ಹಲವು ಹುದ್ದೆಗಳ ನೇಮಕಾತಿಯಲ್ಲಿ ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿಯ ಮಾದರಿಯಲ್ಲಿ ಪಾರದರ್ಶಕ ವಾಗಿ ನಡೆಸುವ ಪ್ರಕ್ರಿಯೆಯಂತೆ ನಡೆಯಲಿ ಎಂಬುದು ರಾಜ್ಯದ ಹಲವು ಸ್ಪರ್ಧಾಂಕಾಂಕ್ಷಿಗಳ ಬೇಡಿಕೆಯಾಗಿದೆ.
- ಪ್ರಶಾಂತ ಹೊಸಮನಿ, ನಾಗಠಾಣ
ಶೋಚನೀಯ ಸ್ಥಿತಿಯಲ್ಲಿ ಶಿಕ್ಷಣ
ಭಾರತದೇಶದ ಪ್ರಜಾಪ್ರಭುತ್ವ ಸರ್ಕಾರದಲ್ಲಿ ಯಾವುದೇ ಜಾತಿ, ಲಿಂಗ, ಶ್ರೀಮಂತ, ಬಡವ ಭೇದ ಭಾವವಿಲ್ಲದೆ ಶಿಕ್ಷಣವನ್ನು ನೀಡಲಾಗುತ್ತಿದೆ. ಶಿಕ್ಷಣ ವನ್ನು ಸಮವರ್ತಿ ಪಟ್ಟಿಯೇಲ್ಲಿಯೂ ಸೇರಿಸಿದ್ದು, ಏಕರೂಪದ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ. ಆದರೆ ರಾಜಕೀಯ ಎಂಬ ಕೆಟ್ಟ ಬಲೆಯಲ್ಲಿ ಸಿಲುಕಿ ನಮ್ಮ ವಿದ್ಯಾರ್ಥಿಗಳು ಧರ್ಮದ ಹೆಸರಿನಲ್ಲಿ ಮನಸ್ಸುಗಳನ್ನು ಕೆಡಿಸಿಕೊಂಡು ತಮ್ಮ ಉಜ್ವಲ ಭವಿಶ್ಯವನ್ನು ಕಳೆದುಕೊಳ್ಳುತ್ತಿzರೆ. ಹೀಗಾದಲ್ಲಿ ಯುವಪೀಳಿಗೆ ಯ ಮನಸ್ಸುಗಳು ಕ್ಷುದ್ರಗೊಂಡು ಧರ್ಮಾಂಧತೆಯ ಬದ್ಧ ವೈರಿಗಳಾಗಿ ಮಾರ್ಪಾಡುವಲ್ಲಿ ಯಾವುದೇ ಸಂಶಯವಿಲ್ಲ, ಆದ್ದರಿಂದ ಈ ಎಲ್ಲ ಧರ್ಮ ಗಲಭೆಗಳು ನಿಂತು ಶಾಂತಿ ಸ್ಥಾಪನೆಯಾಗಿ ಗೊಂದಲ ಮನಸ್ಸುಗಳು ತಿಳಿಯಾಗಿ ಮತ್ತೆ ಏಕತೆಯನ್ನು ಸಾಽಸೋಣವೆಂಬುದೇ ನನ್ನ ಹೆಬ್ಬಯಕೆ...
-ಅಶ್ವಿನಿ ಹಿಂಜಿ
ಯಾರಿಗಿಲ್ಲದ ಜಾತಿ ಇವರಿಗೆ ಯಾಕೆ?
ದೇಶ ಕಾಯೋ ಸೈನಿಕ ಅನ್ನ ಕೊಡೋ ರೈತನಿಗಿಲ್ಲದ ಜಾತಿ ಧರ್ಮ ಶಿಕ್ಷಣದ ವ್ಯವಸ್ಥೆ ಮೇಲೆ ಯಾಕೆ ಇಷ್ಟೊಂದು ಆಳವಾಗಿ ಬೇರೂರುತ್ತಿದೆ. ಒಂದೇ ತಟ್ಟೆಯಲ್ಲಿ ಅನ್ನ ತಿನ್ನುತಿದ್ದ ಮಕ್ಕಳ ಮನಸ್ಸಲ್ಲಿ ಬೇಧ ಭಾವದ ನಶೆಯಲ್ಲಿ ತೆಲಾಡುತ್ತಿದ್ದಾರೆ. ಇವರ ಕಿತ್ತಾಟ ಹೀಗೆ ಮುಂದುವರೆದರೆ ದೇಶ ಕಾಯೋ ಸೈನಿಕ ಆಗಲಾರ, ಅನ್ನ ಕೊಡೋ ರೈತ, ಜೀವ ಉಳಿಸೋ ವೈದ್ಯೆ ಆಗಲಾರ, ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರ ಸಾರ್ವಭೌಮ ಪಡೆದ ದೇಶ ಇಲ್ಲಿ ಎಲ್ಲರೂ ಸಮಾನರು.
ನಾನು ಹೇಳುವ ತಾತ್ಪರ್ಯ ಇಷ್ಟೇ ೩ ವರ್ಷದ ಆಚೆಗೆ ಪುಲ್ವಾಮಾ ದಾಳಿಯಲ್ಲಿ ಅದೆಷ್ಟೋ ಸೈನಿಕರು ಹುತಾತ್ಮರಾಗಿ ವೀರ ಮರಣ ಹೊಂದಿದರು. ದೇಶ ಕಾಯೋ ಸೈನಿಕರ ಮನದಲ್ಲಿ ಮೂಡಿರದ ಧರ್ಮ, ಇಂದು ಇಡೀ ದೇಶದ ತುಂಬೆಲ್ಲ ಹರಡುತ್ತಿದೆ ಧರ್ಮದ ವಿಚಾರವಾಗಿ, ಹುತಾತ್ಮರಾದ ಯೋಧರಿಗೆ ನೆನಪಿಸಿಕೊಂಡಾದ್ರು ಕೇಸರಿ ಶಾಲು ಹಿಜಾಬ್ ಬುರ್ಖಾ ಗಲಭೆ ಬಿಟ್ಟು ಹಿಂದೂ ಮುಸ್ಲಿಂ ಕ್ರೈಸ್ತ ಎನ್ನದೆ ನಾವೆಲ್ಲರು ಜೊತೆಯಾಗಿ ಬಾಳಬೇಕು..
-ಪವಿತ್ರ ಕೆ ಡಿಗ್ಗಿ ಕಲಬುರಗಿ