ಸಬಲೀಕರಣ ಹೆಜ್ಜೆ

ಸಬಲೀಕರಣ ಹೆಜ್ಜೆ

image-61728fd5-0078-4ea3-8975-faf42a6ea66c.jpg
Profile Vishwavani News Feb 2, 2022 12:12 PM
image-01426484-c8d9-46ae-85db-c0c74c6da06d.jpg
ಕೇಂದ್ರದ ೨೦೨೨-೨೩ ನೇ ಸಾಲಿನ ಬಜೆಟ್ ಕೋವಿಡ್ ಸಾಂಕ್ರಾಮಿಕ ಹಾವಳಿಯಿಂದ ಉಂಟಾದ ಆರ್ಥಿಕ ಸವಾಲುಗಳನ್ನು ಸಬಲವಾಗಿ ಎದುರಿಸುವ  ಭರವಸೆ ಮೂಡಿಸಿದೆ. ಮುಂದಿನ 25 ವರ್ಷಗಳ ಅಭಿವೃದ್ಧಿಯ ದೂರದೃಷ್ಟಿ ಬಜೆಟ್‌ನಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರು ವುದು ಅವರ ಮಹಾನ್ ಕನಸುಗಳಿಗೆ ಹಿಡಿದ ಕನ್ನಡಿ. ಬಜೆಟ್‌ನಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ವಸಲಾಗಿದೆ. ಸಹಕಾರಿ ಸಂಘಗಳ ಸಬಲೀಕರಣ, ರೈತರು ಬೆಳೆದ ಗೋಧಿ, ಭತ್ತ ಖರೀದಿಗೆ ಯೋಜನೆ ಗ್ರಾಮೀಣ ಭಾಗದ ಸಕ್ಕರೆ ಕಾರ್ಖಾನೆಗಳು ನೇರವಾಗಿ ಕಬ್ಬಿನಿಂದ ಇಥೆನಾಲ್ ಉತ್ಪಾದನೆಗೆ ಸಹಾಯ, ಸಾವಯವ ಕೃಷಿಗೆ ನೆರವು, ಗ್ರಾಮೀಣ ಉದ್ಯೋಗ ಸೃಷ್ಟಿ ಇವು ಗ್ರಾಮ ಭಾರತಕ್ಕೆ ಬಜೆಟ್‌ನ ಕೊಡುಗೆಗಳಾಗಿವೆ. ಮೂಲ ಸೌಕರ್ಯ ವಲಯದ ಕಲ್ಲಿದ್ದಲು, ಸಿಮೆಂಟ್, ಸಂಸ್ಕರಣಾ ಉತ್ಪನ್ನಗಳ ಬೆಳವಣಿಗೆ ಹಚ್ಚಿನ ಅವಕಾಶ ಕಲ್ಪಿಸಿರುವುದು ಗಮನಾರ್ಹ ಸಂಗತಿ. 25 ಸಾರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಾಗಾಣಿಕೆಗೆ ಹಾಗೂ ಪ್ರವಾಸೋದ್ಯಮಕ್ಕೆ ಬಹಳ ನೆರವಾಗಲಿದೆ. ದೇಶದ ಆರ್ಥಿಕ ಚಟುವಟಿಕೆಗಳ ಬೆನ್ನೆಲುಬಿನಂತೆ ಇರುವ ಸೇವಾ ವಲಯದ ಬೆಳವಣಿಗೆ ಇಂಬು ಕೊಡಲಾಗಿದೆ. ಸರಕಾರಿ ಸ್ವಾಮ್ಯದ ಉದ್ದಿಮೆಗಳ ಜಮೀನು ಮತ್ತು ಉಪಯೋಗಿಸದೇ ಇರುವ ಬೆಲೆಬಾಳುವ ಆಸ್ತಿಗಳ ನಗದೀಕರಣ ಪ್ರಕ್ರಿಯೆಗೆ ವೇಗ ನೀಡಲಾಗಿದೆ. ಪಾಲಾರ್, ಗೋದಾವರಿ, ಪೆನ್ನಾರ್, ಕಾವೇರಿ, ಕೃಷ್ಣಾ ಐದು ರಾಷ್ಟ್ರೀಯ ನದಿಗಳ ಜೋಡಣೆಯ ಚಿಂತನೆ ಕಾರ್ಯ ರೂಪಕ್ಕೆ ತರುವ ಉತ್ಸಾಹ ತೋರಿ ದ್ದಾರೆ. ಇದು ದೇಶದ ನೀರಾವರಿ ಮತ್ತು ಕೃಷಿ ಅಭಿವೃದ್ಧಿಗೆ ಒಂದು ಮಹತ್ವದ ಹೆಜ್ಜೆ. ತಳ ಸಮುದಾಯದ ಅಭಿವೃದ್ಧಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಬಳಕೆಯ ವಸ್ತುಗಳನ್ನು ಸ್ಥಳೀಯವಾಗಿ ಉತ್ಪಾದಿಸುವುದಕ್ಕೆ ಉತ್ತೇಜನ ನೀಡಲಾಗಿದೆ. ಒಂದು ದೇಶ ಒಂದು ನೋಂದಣಿ ವಿಧಾನ ಕೃಷಿ ವಿವಾದಗಳನ್ನು ಸರಳವಾಗಿ ಬಗೆ ಹರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಜಾಗತಿಕ ಶ್ರೇಣಿಯ ಡಿಜಿಟಲ್ ತಂತ್ರಜ್ಞಾನ ದೇಶದ ವ್ಯವಹಾರಗಳಲ್ಲಿ ಬಳಸಿಕೊಳ್ಳಲು ಮುಂದಾಗಿರುವುದು ವೈಜ್ಞಾನಿಕ ನಡೆ. ಡಿಜಿಟಲ್ ಕರೆನ್ಸಿ ಮತ್ತು ಡಿಜಿಟಲ್ ರೂಪಾಯಿ ಬಳಕೆಗೆ ತರುವ ವಿಧಾನಕ್ಕೆ ಆರ್ಥಿಕ ವಲಯದಿಂದ ಸಾಕಷ್ಟು ಸ್ವಾಗತ ದೊರೆತಿದೆ. ಡಿಜಿಟಲ್‌ಆರೋಗ್ಯ ಸೇವೆಯ ಅಭಿವೃದ್ಧಿಗೂ ಒತ್ತು ಕೊಡಲಾಗಿದೆ. ಡಿಜಿಟಲ್ ಆರೋಗ್ಯ ವ್ಯವಸ್ಥೆ, ಡಿಜಿಟಲ್ ವಿಶ್ವದ್ಯಾಲಯ ಸ್ಥಾಪನೆ, ೪೦೦ ಹೊಸ ರೈಲುಗಳ ಸಂಚಾರ ಸೇರ್ಪಡೆ, ಕರ್ನಾಟಕದ ನಿಮಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಆರೋಗ್ಯ ಸಂಬಂಧಿಸಿದ ಅನೇಕ ಮೂಲ ಸೌಲಭ್ಯ ಒದಗಿಸುವ ಯೋಜನೆಗಳನ್ನು ಪ್ರಕಟಿಸಲಾಗಿದೆ. ಸಾಂಕ್ರಾಮಿಕ ಹಿನ್ನೆಲೆಯ ಎರಡು ವರ್ಷಗಳ ಅವಧಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ಹಿನ್ನೆಡೆ ಉಂಟಾಗಿದೆ. ಇದನ್ನು ದಾಟಲು ೨೦೦ ಟ್ಹಿ ಚಾನೆಲ್‌ಗಳನ್ನು ಆರಂಭಿಸಿ ಆ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲು ಮುಂದಾಗಿರುವುದು ಯೋಗ್ಯವಾಗಿದೆ. ೨ ಲಕ್ಷ ಅಂಗನವಾಡಿಗಳನ್ನು ಉನ್ನತೀಕರಿಸುವುದು ಇದಕ್ಕೆ ಪೂರಕವಾಗಿದೆ. ಮಕ್ಕಳ ಮಾನಸಿಕ ಆರೋಗ್ಯಕಾಪಾಡುವುದಕ್ಕೆ ಹೆಚ್ಚಿನ ಒತ್ತು ನೀಡಿರುವುದು ಶ್ಲಾಘನೀಯ. -ಮುರುಗೇಶ ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು. ಹಾಸಿಗೆ ಇದ್ದಷ್ಟೇ ಚಾಚಿದ ಕಾಲು ಪಂಚರಾಜ್ಯಗಳ ಚುನಾವಣೆಯ ಮೇಲೆ ಕಣ್ಣಿಟ್ಟು ಈ ಬಾರಿ ಬಜೆಟ್ ಮಂಡನೆಯಾಗಬಹುದೆಂದು ನಿರೀಕ್ಷಿಸಿದವರನ್ನು ನಿರ್ಮಲಾ ಸೀತಾರಾಮನ್ ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ವಾಸ್ತವದ ಅಡಿಗಲ್ಲ ಮೇಲೆ ಬಜೆಟ್ ಅನ್ನು ಸಮೀಕರಿಸಲಾಗಿದೆ. ಯಾವುದೇ ಜನಪ್ರಿಯಿ, ಮತ ಸೆಳೆಯಕುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಕೈಹಾಕದೆ ಹಾಸಿಗೆ ಇದ್ದಷ್ಟಕ್ಕೆ ಕಾಲು ಚಾಚು ತತ್ವ ವನ್ನು ಅಳವಡಿಸಿಕೊಳ್ಳ ಲಾಗಿದೆ. ೨೦೧೪ ರಿಂದ ಬಹುತೇಕ ಸ್ಥಿರವಾಗಿದ್ದರೂ ಆದಾಯ ಕರ ಮಿತಿಯನ್ನೂ ಏರಿಸಲಾಗಲಿಲ್ಲ. ಹಾಗೆಯೇ ೮೦ ಅಡಿಯಲ್ಲಿ ಉಳಿತಾಯದ ಮಿತಿ ಯನ್ನು ಏರಿಸಬಹುದೆನ್ನುವ ಸಣ್ಣ ಆಶೆಯೂ ನೆರವೇರಲಿಲ್ಲ. ರಿಟರ್ನ ಸಲ್ಲಿಸುವಾಗ ಮಾಡಿರಬಹುದಾದ ತಪ್ಪುಗಳನ್ನು ೨ ವರ್ಷ ದೊಳಗೆ  ದಂಡ ವಿಲ್ಲದೇ ಸರಿಪಡಿಸಿಕೊಳ್ಳಬಹುದು ಎನ್ನುವ ವಿನಾಯಿತಿ ಕೇವಲ ಕಾಟಾಚಾರದ ಕೊಡುಗೆ ಎನ್ನಬಹುದು. ಬಜೆಟ್‌ನಲ್ಲಿ ಮಧ್ಯಮ ವರ್ಗದ ನಿರೀಕ್ಷೆ ಯಾವಾಗಲೂ ಆದಾಯಕರ ವಿನಾಯಿತಿ ಮೇಲೆ ಇರುತ್ತದೆ. ಅಂತೆಯೇ ಈ ನಿಟ್ಟಿನಲ್ಲಿ ಈ ಬಜೆಟ್ ಮಧ್ಯಮ ವರ್ಗ ದವರಿಗೆ ಮರ್ಮಾಘಾತ ನೀಡಿದೆ ಎನ್ನಬಹುದು. ಸುಮಾರು ೧.೫೦ ಲಕ್ಷ ಅಂಚೆ ಕಚೇರಿಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವ ಮತ್ತು ೭೫ ಜಿಲ್ಲೆ ಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸ್ಥಾಪನೆ ಬಿಟ್ಟರೆ ಬ್ಯಾಂಕಿಂಗ್ ವಲಯದ ಬಗೆಗೆ ಯಾವುದೇ ಹೊಸ ನೀತಿ ನಿರೂಪಣೆ ಪ್ರಕಟವಾಗಿಲ್ಲ ಮತ್ತು ಬ್ಯಾಂಕು ಗಳ ಖಾಸಗೀಕರಣದ ಬಗೆಗೂ ಚಕಾರ ಎತ್ತಿಲ್ಲ. ಬ್ಯಾಂಕ್ ನಿವೃತ್ತರ ಪಿಂಚಣಿ ಉನ್ನತೀಕರಣದ ಬಗೆಗೆ ಏನಾದರೂ ಹೊಸ ಭರವಸೆ ದೊರಕಬಹುದೆಂದು ಕಾಯುತ್ತಿದ್ದವರಿಗೆ ನಿರಾಶೆಯಾಗಿದೆ. ಡಿಜಿಟಲ್ ಕರೆನ್ಸಿಯನ್ನು ರಿಸರ್ವ ಬ್ಯಾಂಕ್ ಮ್ಯಾನೇಮೆಂಟ್‌ಗೆ ಒಪ್ಪಿಸುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಅಮಾಯಕ ಹೂಡಿಕೆದಾರರನ್ನು ರಕ್ಷಿಸಬಹುದು. ಡಿಜಿಟಲ್ ಕರೆನ್ಸಿಯಲ್ಲಿ ವಹಿವಾಟು ಭಾರೀ ಪ್ರಮಾಣದಲ್ಲಿ ಇದ್ದು, ಈ ಡಿಜಿಟಲ್ ಕರೆನ್ಸಿ ಮೇಲೆ ಶೇ.೩೦ತೆರಿಗೆ ಮತ್ತು ಅದರ ವರ್ಗಾವಣೆ ಮೇಲೆ ಶೇ.೧ ತೆರಿಗೆ ಶ್ಲಾಘನೀಯ ಕ್ರಮವಾಗಿದ್ದು, ಸಂಪತ್ತು ಕ್ರೋಡೀಕರಣ ಸುಲಭವಾಗಬಹುದು. ಇದರ ಲೆಕ್ಕವೂ ದೇಶಕ್ಕೆ ಸಿಗುತ್ತದೆ. ಮೂಲಭೂತ ಸೌಕರ್ಯದತ್ತ ಈ ಬಜೆಟ್ ಕೇಂದ್ರೀಕರಿಸಿದ್ದು ೪೦೦ ವಂದೇ ಭಾರತ ರೈಲುಗಳ ಆರಂಭ ಮತ್ತು ೨೫ ಸಾವಿರ. ಕಿ.ಮೀ. ರಾಷ್ಟ್ರೀಯ ಹೆzರಿ ನಿರ್ಮಾಣ ಮೋದಿ ಸರ್ಕಾರದ ದೂರದೃಷ್ಟಿಗೆ ಇನ್ನೊಂದು ಪುಕ್ಕ ಎನ್ನಬಹುದು. ೧೫೦೦೦ ಕೋಟಿ ಅನುದಾನದಿಂದ ಈಶಾನ್ಯ ಭಾರತವನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರುವ ಪ್ರಯತ್ನ ಸ್ವಾಗತಾರ್ಹ ಕ್ರಮ. ಅದರಂತೆ ಹಳ್ಳಿಗಳಿಗೆ ಅಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸುವ ಯೋಜನೆ ದೂರ ಸಂಪರ್ಕ ನೀಡುವ ನಿಟ್ಟಿನಲ್ಲಿ ಇನ್ನೊಂದು ಮೈಲಿಗಲ್ಲು. -ರಮಾನಂದ ಶರ್ಮಾ, ನಿವೃತ್ ಬ್ಯಾಂಕರ್
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?