Funky Hairstyle 2026: ಯಂಗ್ ಲುಕ್ಗೆ ಸಾಥ್ ನೀಡುವ ಫಂಕಿ ಹೇರ್ಸ್ಟೈಲ್
Funky Hairstyle: ಯಂಗ್ ಲುಕ್ಗೆ ಫಂಕಿ ಹೇರ್ಸ್ಟೈಲ್ಗಳು ಸಾಥ್ ನೀಡುತ್ತವೆ. ಅದರಲ್ಲೂ ಔಟಿಂಗ್, ಹಾಲಿ ಡೇ, ವೀಕೆಂಡ್ ಲುಕ್ನಲ್ಲಿ ಈ ಶೈಲಿಯ ಹೇರ್ಸ್ಟೈಲ್ಗಳು ಮತ್ತಷ್ಟು ಮನಮೋಹಕವಾಗಿ ಬಿಂಬಿಸುತ್ತವೆ. ಅದು ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಶ್ರೀ ಮುಖಿ, ನಟಿ -
ನೀವು ಯಂಗ್ ಆಗಿಯೇ ಕಾಣಿಸಬೇಕೇ! ಅದರಲ್ಲೂ ಔಟಿಂಗ್ ಅಥವಾ ಹಾಲಿಡೇ ಹಾಗೂ ನಿಮ್ಮ ವಕೇಷನ್ಗಳಲ್ಲಿ ಆಕರ್ಷಕವಾಗಿ ಕಾಣಿಸಬೇಕೇ! ಹಾಗಾದಲ್ಲಿ ಫಂಕಿ ಲುಕ್ಗೆ ಮೊರೆ ಹೋಗಿ. ಇವು ನಿಮಗೆ ಮತ್ತಷ್ಟು ಯಂಗ್ ಲುಕ್ ನೀಡುತ್ತವೆ.
ಉಡುಪಿಗೆ ಮಿಕ್ಸ್ ಮ್ಯಾಚ್ ಸ್ಟೈಲಿಂಗ್
ಹೌದು, ಹೇರ್ಸ್ಟೈಲಿಸ್ಟ್ ನಿಶಾ ಪ್ರಕಾರ, ಯಂಗ್ ಲುಕ್ಗೆ ಫಂಕಿ ಹೇರ್ಸ್ಟೈಲ್ಗಳು ಸಾಥ್ ನೀಡುತ್ತವೆ. ಅದರಲ್ಲೂ ಔಟಿಂಗ್, ಹಾಲಿ ಡೇ, ವೀಕೆಂಡ್ ಲುಕ್ಗೆ ಈ ಶೈಲಿಯ ಹೇರ್ಸ್ಟೈಲ್ಗಳು ಸೂಕ್ತ. ಆದರೆ, ಇದಕ್ಕೆ ಧರಿಸುವ ಉಡುಪುಗಳೂ ಕೂಡ ಮಿಕ್ಸ್ ಮ್ಯಾಚ್ ಆಗಿ ಹೊಂದಬೇಕು ಎನ್ನುತ್ತಾರೆ.
ಫಂಕಿ ಲುಕ್ ಹೇರ್ ಸ್ಟೈಲಿಂಗ್
ಹಾಗೆಂದು ಫಂಕಿ ಲುಕ್ ನೀಡುವ ಹೇರ್ಸ್ಟೈಲ್ ಎಲ್ಲರಿಗೂ ಹೊಂದುವುದಿಲ್ಲ! ಕೆಲವರನ್ನು ಜೋಕರ್ನಂತೆಯೂ ಬಿಂಬಿಸಬಹುದು. ಹಾಗಾಗಿ, ಈ ಹೇರ್ಸ್ಟೈಲ್ ಮಾಡುವಂತವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ ಎನ್ನುತ್ತಾರೆ ಹೇರ್ಸ್ಟೈಲಿಸ್ಟ್ ನಿಶಾ. ಟ್ರಯಲ್ ಮಾಡಿ, ನೋಡಿ, ಫೋಟೂ ತೆಗೆಸಿ ನೋಡಿ, ಸೆಕೆಂಡ್ ಒಪಿನಿಯನ್ ಪಡೆಯಿರಿ, ಅದು ಓಕೆ ಎಂದೆನಿಸಿದಲ್ಲಿ ಮಾತ್ರ ಮುಂದುವರೆಯಿರಿ ಎನ್ನುತ್ತಾರೆ.
ಪಾಪುಲರ್ ಆಗಿರುವ ಬೀಡ್ಸ್ ಫಂಕಿ ಹೇರ್ಸ್ಟೈಲ್
ಇನ್ನು, ಫಂಕಿ ಹೇರ್ಸ್ಟೈಲ್ಗಳಲ್ಲಿ ಈ ಸೀಸನ್ನಲ್ಲಿ ಅತಿ ಹೆಚ್ಚಾಗಿ ಕಲರ್ಫುಲ್ ಬೀಡ್ಸ್ ಹೇರ್ಸ್ಟೈಲ್ಗಳು ಪಾಪುಲರ್ ಆಗಿವೆ. ಉದಾಹರಣೆಗೆ., ಹೂಗಳ ಹಾಗೂ ಹಾರ್ಟ್ ಶೇಪ್ನಲ್ಲಿರುವಂತವು, ಬಟರ್ಫ್ಲೈ, ಕ್ಲಿಪ್ ಶೇಪ್ನ ಪ್ಲಾಸ್ಟಿಕ್ ಬೀಡ್ಸ್ನವು ಚಾಲ್ತಿಯಲ್ಲಿವೆ.
ಫಂಕಿ ಹೇರ್ಸ್ ಸ್ಟೈಲಿಂಗ್ ಟಿಪ್ಸ್
- ಮೊದಲಿಗೆ ನಿಮಗೆ ಬೇಕಾದಷ್ಟು ಕೂದಲನ್ನು ಚಿಕ್ಕ ಚಿಕ್ಕದಾಗಿ ಭಾಗ ಮಾಡಿಕೊಂಡು ಇವನ್ನು ಕ್ಲಿಪ್ನಂತೆ ಹಾಕಿ. ನಿಮಗೆ ಇಷ್ಟವಾದಲ್ಲಿ ಕೆಳಗಿನದ್ದನ್ನು ಫ್ರೀ ಹೇರ್ ಬಿಡಿ ಅಥವಾ ಜುಟ್ಟನ್ನು ಇಲ್ಲವೇ ಜಡೆಯನ್ನು ಹಾಕಿ.
- ಆದಷ್ಟೂ ಈ ಬೀಡ್ಸನ್ನು ಮುಂಭಾಗದ ಕೂದಲಿಗೆ ಹಾಕಿ. ಆಗ ನೋಡಲು ಅಂದವಾಗಿ ಕಾಣಿಸುತ್ತವೆ.
- ಎರಡು ಜಡೆ, ಎರಡು ಜುಟ್ಟು ಹೀಗೆ ನಾನಾ ಬಗೆಯ ವಿನ್ಯಾಸಕ್ಕೂ ಇವನ್ನು ಸೇರಿಸಬಹುದು.