ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಈ ಟಾಕ್ಸಿ ಹತ್ತಿದ್ರೆ ಸಾಕು ಥಂಡಾ ಥಂಡಾ ಕೂಲ್‌, ಕೂಲ್‌; ಚಾಲಕನ ಐಡಿಯಾಕ್ಕೆ ನೆಟ್ಟಿಗರು ಫಿದಾ

Viral Video: ಈ ಬಿಸಿಲಿಗೆ ಹೈರಾಣಾದ ಟ್ಯಾಕ್ಸಿ ಚಾಲಕನೊಬ್ಬ ತನ್ನ ವಾಹನವನ್ನು ಕೂಲ್ ಆಗಿ ಇರಿಸಲು ಹೊಸ ಪ್ಲಾನ್ ಮಾಡಿಕೊಂಡಿದ್ದಾನೆ‌. ಟ್ಯಾಕ್ಸಿ ಒಳಗಡೆ ಶಿಮ್ಲಾ ಮಾದರಿಯ ಕೂಲ್ ವಾತಾ ವರಣ ಸೃಷ್ಟಿ ಮಾಡಿದ್ದು ಚಾಲಕನ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಚಾಲಕನು ತನ್ನ ಕಾರಿನ ಎಸಿ ಕಂಡೆನ್ಸರ್ ಮೇಲೆ ನೀರು ಚಿಮುಕಿಸುವ ಮೂಲಕ ಎಸಿ ಕೂಲ್ ಆಗುವುದನ್ನು ದುಪ್ಪಟ್ಟು ಮಾಡಿದ್ದಾನೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಚಾಲಕನ ಕೂಲಿಂಗ್ ಎಸಿ ಟ್ರಿಕ್ಸ್ ಗೆ ನೆಟ್ಟಿಗರು ಫಿದಾ: ವಿಡಿಯೊ ನೋಡಿ

ದೆಹಲಿ ಬಿಸಿಲಿಗೆ ಟ್ಯಾಕ್ಸಿ ಚಾಲಕನ ಕೂಲಿಂಗ್ ಎಸಿ ಟ್ರಿಕ್ಸ್ -

Profile
Pushpa Kumari May 28, 2026 7:01 PM

ನವದೆಹಲಿ,ಮೇ 28: ದೇಶದೆಲ್ಲೆಡೆ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ದೆಹಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು ಜನ ಕಂಗಲಾಗಿ ಹೋಗಿದ್ದಾರೆ‌. ಈ ಬಿಸಿಲಿಗೆ ಹೈರಾಣಾದ ಟ್ಯಾಕ್ಸಿ ಚಾಲಕನೊಬ್ಬ ತನ್ನ ವಾಹನವನ್ನು ಕೂಲ್ ಆಗಿ ಇರಿಸಲು ಹೊಸ ಪ್ಲಾನ್ ಮಾಡಿಕೊಂಡಿದ್ದಾನೆ‌. ಟ್ಯಾಕ್ಸಿ ಒಳಗಡೆ ಶಿಮ್ಲಾ ಮಾದರಿಯ ಕೂಲ್ ವಾತಾವರಣ ಸೃಷ್ಟಿ ಮಾಡಿದ್ದು ಚಾಲಕನ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಚಾಲಕನು ತನ್ನ ಕಾರಿನ ಎಸಿ ಕಂಡೆ ನ್ಸರ್ ಮೇಲೆ ನೀರು ಚಿಮುಕಿಸುವ ಮೂಲಕ ಎಸಿ ಕೂಲ್ ಆಗುವುದನ್ನು ದುಪ್ಪಟ್ಟು ಮಾಡಿದ್ದಾನೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಟ್ಯಾಕ್ಸಿ ಚಾಲಕನೊಬ್ಬ ಈ ವಿಪರೀತ ಬೇಸಿಗೆಗೆ ಈ ಟ್ರಿಕ್ ಬಳಕೆ ಮಾಡಿದ್ದಾನೆ. ಕೆಲವೊಮ್ಮೆ ವಾಹನದಲ್ಲಿ ಎಸಿಗಳು ಕೈ ಕೊಡುತ್ತವೆ. ಇಂತಹ ಸಂದರ್ಭದಲ್ಲಿಯೂ ಟ್ಯಾಕ್ಸಿ ಒಳಗೆ ಶಿಮ್ಲಾ ಮಾದರಿಯ ತಂಪು ವಾತಾವರಣ ಹೇಗೆ ಸೃಷ್ಟಿ ಮಾಡಬಹುದು ಎಂದು ಚಾಲಕ ತಿಳಿಸಿದ್ದಾನೆ. ಈ ಕ್ಲಿಪ್‌ನಲ್ಲಿ ಚಾಲಕನು ತಮ್ಮ ಕಾರಿನೊಳಗಿನ ಹ್ಯಾಕ್ ಅನ್ನು ಆತ್ಮವಿಶ್ವಾಸದಿಂದ ವಿವರಿಸುವುದನ್ನು ತೋರಿಸಲಾಗಿದೆ. ಟ್ಯಾಕ್ಸಿ ಚಾಲಕನೊಬ್ಬ ತನ್ನ ಕಾರಿನ ಎಸಿ ಕಂಡೆನ್ಸರ್ ಮೇಲೆ ನೀರು ಚಿಮುಕಿಸುವ ಮೂಲಕ ಎಸಿ ತಂಪಾಗುವಿಕೆಯನ್ನು ಹೆಚ್ಚು ಮಾಡಿದ್ದಾನೆ.

ವಿಡಿಯೋ ನೋಡಿ:



​ಕಾರಿನ ಎಸಿ ವ್ಯವಸ್ಥೆಯಲ್ಲಿ 'ಕಂಡೆನ್ಸರ್' ಬಹಳಷ್ಟು ಪ್ರಮುಖವಾಗುತ್ತದೆ. ಇದು ಎಸಿ ಕಂಪ್ರೆಸರ್‌ ನಿಂದ ಬರುವ ಬಿಸಿ ರೆಫ್ರಿಜರೆಂಟ್ ಗ್ಯಾಸ್ ಅನ್ನು ಕೂಲ್ ಮಾಡಿ ದ್ರವ ರೂಪಕ್ಕೆ ಇಳಿಸುತ್ತದೆ. ಹೊರಗಿನ ತಾಪಮಾನ 45°C ದಾಟಿದಾಗ, ಕೇವಲ ಗಾಳಿಯಿಂದ ಕಂಡೆನ್ಸರ್ ತಂಪಾಗುವುದು ಕಷ್ಟವಾಗುತ್ತದೆ. ಈ ವೇಳೆ ಕಂಡೆನ್ಸರ್ ಮೇಲೆ ನೀರು ಹಾಕಿದಾಗ ಬಾಷ್ಪೀಕರಣ ಮೂಲಕ ಕಂಡೆನ್ಸರ್ ತಕ್ಷಣವೇ ತಂಪಾಗುತ್ತದೆ.

Viral Video: ಪಾಕ್ ಪ್ರಧಾನಿಯನ್ನು 40 ನಿಮಿಷ ಕಾಯಿಸಿದ ಪುಟಿನ್; ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೆಹಬಾಜ್ ಷರೀಫ್‌ಗೆ ಮತ್ತೊಮ್ಮೆ ಮುಖಭಂಗ

ಈ ಸಂದರ್ಭದಲ್ಲಿ ಐಸ್‌ನಂತಹ ತಣ್ಣಗಿನ ಗಾಳಿ ಬರಲು ಆರಂಭಿಸುತ್ತದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ನಾನು ಹಲವು ವರ್ಷಗಳಿಂದ ಈ ವಿಧಾನವನ್ನು ಬಳಸುತ್ತಿದ್ದೇನೆ ಎಂದು ಬರೆದಿದ್ದಾರೆ. ಮತ್ತೊಬ್ಬರು ದೀರ್ಘಕಾಲೀನ ತುಕ್ಕು ಅಥವಾ ವಿದ್ಯುತ್ ಶಾರ್ಟ್ಸ್ ಗೆ ಕಾರಣವಾಗಬಹುದು." ಇದು ವಿಜ್ಞಾನವನ್ನು ವಿವರಿಸುತ್ತದೆ ಆದರೆ ಅಪಾಯಗಳ ಬಗ್ಗೆಯೂ ಎಚ್ಚರಿಸುತ್ತದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.