Saree Fashion 2026: ಗ್ಲಾಮರಸ್ ಲುಕ್ ಬಯಸುವ ನಾರಿಯರಿಗಾಗಿ ಸ್ಯಾಟೀನ್ನಲ್ಲೂ ಬಂತು ರಫಲ್ಸ್ ಸೀರೆ
ನಟಿ ಶಿವಾಂಗಿ ವರ್ಮಾ ಫ್ಯಾಷನ್ ಶೂಟ್ವೊಂದರಲ್ಲಿ ಕಾಣಿಸಿಕೊಂಡಿದ್ಧ ಪಾಸ್ಟೆಲ್ ರಫಲ್ಸ್ ಸೀರೆ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಷನ್ ಕೆಟಗರಿಯ ಯುವತಿಯರನ್ನು ಆಕರ್ಷಿಸಿತ್ತು. ಇದೀಗ ಸ್ಯಾಟೀನ್ನಲ್ಲೂ ರಫಲ್ಸ್ ಸೀರೆಗಳು ಬಂದಿವೆ, ನಾರಿಯರನ್ನು ಸುತ್ತುವರೆದಿವೆ. ಇದ್ಯಾವ ಬಗೆಯ ಸೀರೆ? ಏನಿದರ ವಿಶೇಷತೆ? ಸ್ಟೈಲಿಂಗ್ ಹೇಗೆ? ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ.
ಚಿತ್ರಗಳು: ಶಿವಾಂಗಿ ವರ್ಮಾ, ನಟಿ -
ಸ್ಯಾಟೀನ್ ರಫಲ್ಸ್ ಸೀರೆಗಳು ಗ್ಲಾಮರಸ್ ಲುಕ್ ಬಯಸುವ ನಾರಿಯರನ್ನು ಸುತ್ತುವರೆದಿವೆ.
ಶಿವಾಂಗಿ ವರ್ಮಾ ಉಟ್ಟ ಪಾಸ್ಟೆಲ್ ರಫಲ್ಸ್ ಸೀರೆ
ಎಲ್ಲರಿಗೂ ತಿಳಿದಿರುವಂತೆ, ನಟಿ ಶಿವಾಂಗಿ ವರ್ಮಾ ಫ್ಯಾಷನ್ ಶೂಟ್ವೊಂದರಲ್ಲಿ ಕಾಣಿಸಿಕೊಂಡಿದ್ಧ ಪಾಸ್ಟೆಲ್ ರಫಲ್ಸ್ ಸೀರೆ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಷನ್ ಕೆಟಗರಿಯ ಯುವತಿಯರನ್ನು ಆಕರ್ಷಿಸಿತ್ತು. ಅಲ್ಲದೇ, ಬಹಳ ಹಿಂದೆ ಟ್ರೆಂಡ್ನಲ್ಲಿದ್ದ ಈ ಸೀರೆಯನ್ನು ನೆನಪಿಸಿತ್ತು. ಹಾಗಾಗಿ ಮತ್ತೊಮ್ಮೆ ಕಾಣಿಸಿಕೊಳ್ಳಲು ಕಾರಣವಾಯಿತು ಎನ್ನುತ್ತಾರೆ ಸೀರೆ ಎಕ್ಸ್ಪರ್ಟ್.
ರಫಲ್ಸ್ ಸೀರೆ ವೃತ್ತಾಂತ
ಹೌದು, ಮೊದಲೆಲ್ಲಾ ಜಾರ್ಜೆಟ್ ಹಾಗೂ ಶಿಫಾನ್ ಫ್ಯಾಬ್ರಿಕ್ನಲ್ಲಿ ದೊರೆಯುತ್ತಿದ್ದ ಈ ರಫಲ್ಸ್ ಸೀರೆಗಳು ಇದೀಗ ಸ್ಯಾಟೀನ್ನಲ್ಲೂ ಎಂಟ್ರಿ ನೀಡಿವೆ. ಅದರಲ್ಲೂ ಕೇವಲ ಡಾರ್ಕ್ ಕಲರ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸೀರೆಗಳು ಈ ಬಾರಿ ಜೆನ್ ಜಿ ಯುವತಿಯರಿಗಾಗಿಯೇ ತಿಳಿ ವರ್ಣ ಅಂದರೇ ಪಾಸ್ಟೆಲ್ ಬಣ್ಣಗಳಲ್ಲಿ ಲಗ್ಗೆ ಇಟ್ಟಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ಜೆನ್.
ಥಳುಕು ಬಳುಕುವ ಸ್ಯಾಟೀನ್ ರಫಲ್ಸ್ ರೆಡಿ ಸೀರೆ
ಇನ್ನು, ಸ್ಯಾಟೀನ್ ರಫಲ್ಸ್ ಸೀರೆ ಉಡುವುದು ತೀರಾ ಸುಲಭ. ಅಲ್ಲದೇ ಕ್ಯಾರಿ ಮಾಡುವುದು ಕೂಡ ಈಸಿ ಎನ್ನುವ ಸೀರೆ ಸ್ಟೈಲಿಸ್ಟ್ ರಾಗಿಣಿ ಪ್ರಕಾರ, ಈ ರಫಲ್ಸ್ ಸೀರೆಗಳಲ್ಲೂ ರೆಡಿಮೇಡ್ ಅಂದರೇ, ಡ್ರೇಪ್ ಮಾಡಿರುವ ಸೀರೆಗಳು ದೊರೆಯುತ್ತವೆ. ಅವನ್ನು ಫಟಾಫಟ್ ಆಗಿ ಉಟ್ಟುಕೊಳ್ಳಬಹುದು ಎನ್ನುತ್ತಾರೆ.
ರಫಲ್ಸ್ ಸೀರೆ ಪ್ರಿಯರಿಗೆ ಇಲ್ಲಿವೆ ಟಿಪ್ಸ್
- ಟ್ರೆಂಡಿಯಾಗಿರುವ ಲೈಟ್ವೈಟ್ ಪಾಸ್ಟೆಲ್ ಕಲರ್ ರಫಲ್ ಸೀರೆಯನ್ನೇ ಆಯ್ಕೆ ಮಾಡಿ.
- ಸ್ಯಾಟೀನ್ ಸೀರೆಗೆ ವೆಸ್ಟರ್ನ್ ಲುಕ್ ನೀಡಿ.
- ಟ್ರೆಡಿಷನಲ್ ಟಚ್ ನೀಡುವುದು ಬೇಡ.
- ಮೇಕಪ್ ತಿಳಿಯಾಗಿರಲಿ.
- ಹೇರ್ಸ್ಟೈಲ್ ಸಿಂಪಲ್ಲಾಗಿರಲಿ.
- ಇಂಡೋ-ವೆಸ್ಟರ್ನ್ ಲುಕ್ ನೀಡುವಂತಿರಲಿ.