Satin Saree Fashion 2026: ಮರಳಿದ ರೆಟ್ರೊ ಲುಕ್ ನೀಡುವ ಸ್ಯಾಟಿನ್ ಸೀರೆ ಕ್ರೇಝ್!
Satin Saree Fashion: ಸ್ಯಾಟಿನ್ ಸೀರೆ ಮರಳಿ ಟ್ರೆಂಡಿಯಾಗಿದೆ. ಸಾಫ್ಟ್ ಫ್ಯಾಬ್ರಿಕ್‌ನ ಈ ಸೀರೆ ಈ ಬಾರಿ ನಾನಾ ಬಗೆಯ ಪ್ರಿಂಟ್ಸ್‌ನಲ್ಲಿ ಮರಳಿದೆ. ಸೂಪರ್ ಹಿಟ್ ಆಗಿದೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿದೆ? ಸ್ಟೈಲಿಂಗ್ ಹೇಗೆ? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ವೃಷಿಕಾ ಮೆಹ್ತಾ, ನಟಿ -
ಶೀಲಾ ಸಿ ಶೆಟ್ಟಿ
Jan 27, 2026 5:19 PM
| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಟಿನ್ ಸೀರೆ ಮರಳಿ ಟ್ರೆಂಡಿಯಾಗಿದೆ. ಸಾಫ್ಟ್ ಫ್ಯಾಬ್ರಿಕ್‌ನ ಈ ಸೀರೆ ಈ ಬಾರಿ ನಾನಾ ಬಗೆಯ ಪ್ರಿಂಟ್ಸ್‌ನಲ್ಲಿ ಮರಳಿದೆ. ಸೂಪರ್ ಹಿಟ್ ಆಗಿದೆ. ಹೌದು, ರೆಟ್ರೊ ಲುಕ್ ನೀಡುವ ಈ ಸ್ಯಾಟಿನ್ ಸೀರೆಗಳು (Satin Saree Fashion 2026) ಇದೀಗ ಹೊಸ ರೂಪದಲ್ಲಿ ಅದರಲ್ಲೂ ಹೊಸ ಪ್ರಿಂಟ್ಸ್‌ನಲ್ಲಿ ಮಾರುಕಟ್ಟೆಯಲ್ಲಿ ಆಗಮಿಸಿವೆ.
ಸ್ಟ್ರೈಪ್ಸ್, ಸರ್ಕಲ್, ಸೆಮಿ ಸರ್ಕಲ್, ಸ್ಕ್ವೇರ್, ಅಬ್ಸ್ಟ್ರಾಕ್ಟ್ ಲೈನ್ಸ್ ಸೇರಿದಂತೆ ಅವುಗಳಲ್ಲಿ ನಾನಾ ಬಗೆಯ ಮಿಕ್ಸ್ ಮ್ಯಾಚ್ ಜೆಮೆಟ್ರಿಕಲ್ ಹಾಗೂ ಫ್ಲೋರಲ್ ಪ್ರಿಂಟ್ಸ್ ಇರುವಂತವು ಟ್ರೆಂಡಿಯಾಗಿವೆ ಎನ್ನುತ್ತಾರೆ ಮಾರಾಟಗಾರರಾದ ರಾಶಿ ಶರ್ಮಾ.
ಸ್ಯಾಟಿನ್ ಸೀರೆ ಲವ್
ಇಂದು ಪ್ರತಿ ಮಹಿಳೆಯ ಬಳಿ ಒಂದಾದರೂ ಸರಿಯೇ ಸ್ಯಾಟಿನ್ ಸೀರೆ ಇದ್ದೇ ಇರುತ್ತದೆ. ಆ ಮಟ್ಟಿಗೆ ಈ ಸೀರೆಯ ಕ್ರೇಝ್ ಹೆಚ್ಚಾಗಿದೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ಛಾಯಾ. ಅವರ ಪ್ರಕಾರ, ಈ ಸೀರೆ ನಿಮ್ಮನ್ನು ಅತ್ಯಾಕರ್ಷಕವಾಗಿಸುತ್ತದೆ ಎನ್ನುತ್ತಾರೆ.
ಸ್ಯಾಟಿನ್ ಸೀರೆ ಪ್ರಿಯರಿಗೆ ಇಲ್ಲಿದೆ ಸಲಹೆ
- ಸ್ಯಾಟಿನ್ ಸೀರೆ ಉಟ್ಟಾಗ ದೇಹದ ಮೇಲೆ ಬಳುಕಾಡುವುದರಿಂದ ದಪ್ಪಗಿರುವವರೂ ಕೂಡ ಉಡಬಹುದು. ತೀರಾ ತೆಳ್ಳಗಿರುವವರು ಆವಾಯ್ಡ್ ಮಾಡುವುದು ಉತ್ತಮ.
- ಸಾದಾ ಸ್ಯಾಟಿನ್ ಸೀರೆಗೆ ಸಾದಾ ಡಿಸೈನ್‌ನ ಬ್ಲೌಸ್ ಬದಲು ಕಾಂಟ್ರಾಸ್ಟ್ ಇಲ್ಲವೇ ಸ್ಲೀವ್ ಡಿಸೈನ್ ಇರುವಂತವನ್ನು ಮ್ಯಾಚ್ ಮಾಡಿದಲ್ಲಿ ಅತ್ಯಾಕರ್ಷಕವಾಗಿ ಕಾಣಿಸುವುದು.
- ಸ್ಯಾಟಿನ್ ಸೀರೆಗೆ ಜಂಕ್, ಫಂಕಿ ಆಕ್ಸೆಸರೀಸ್‌ಗಳನ್ನು ಧರಿಸಬಹುದು.
- ಸ್ಯಾಟಿನ್ ಸೀರೆಯ ಶೇಡ್‌ಗೆ ಹೊಂದುವಂತಹ ಮೇಕಪ್ ಮಾಡಿ.
- ಡಾರ್ಕ್ ಹಾಗೂ ಲೈಟ್ ಶೇಡ್‌ನವು ಎರಡೂ ಬಗೆಯ ಸ್ಯಾಟಿನ್ ಸೀರೆಗಳು ಟ್ರೆಂಡ್‌ನಲ್ಲಿವೆ.
- ವೈಟ್ ಹಾಗೂ ಬ್ಲ್ಯಾಕ್ ಕಲರ್‌ನ ಪ್ರಿಂಟ್ಸ್‌ನವು ಬೇಡಿಕೆ ಹೆಚ್ಚಿಸಿಕೊಂಡಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)