Star Fashion 2025: ವಿಂಟರ್ ಫ್ಯಾಷನ್ ಟಾಪ್ ಲಿಸ್ಟ್ಗೆ ನಟಿ ಕಾಜೋಲ್ರ ಬಾಸ್ ಲೇಡಿ ಲುಕ್
Actress Kajolʼs Fashion: ಬಾಲಿವುಡ್ ನಟಿ ಕಾಜೋಲ್ರ ಬಾಸ್ ಲೇಡಿ ಲುಕ್ ಇದೀಗ ಈ ಸೀಸನ್ನ ಸೆಲೆಬ್ರೆಟಿ ವಿಂಟರ್ ಫ್ಯಾಷನ್ ಟಾಪ್ ಲಿಸ್ಟ್ಗೆ ಸೇರಿದೆ. ಇದ್ಯಾವ ಬಗೆಯ ಲುಕ್? ಫ್ಯಾಷನ್ ವಿಮರ್ಶಕರ ರಿವ್ಯೂ ಏನು? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ಕಾಜೋಲ್, ಬಾಲಿವುಡ್ ನಟಿ -
ಬಾಲಿವುಡ್ ನಟಿ ಕಾಜೋಲ್ರ ಬಾಸ್ ಲೇಡಿ ಲುಕ್ ಈ ವಿಂಟರ್ನಲ್ಲಿ ಲೇಯರ್ ಲುಕ್ ನೀಡುವ ಫ್ಯಾಷನ್ವೇರ್ಗಳ ಟಾಪ್ ಲಿಸ್ಟ್ಗೆ ಸೇರಿದೆ.
ಕ್ಲಾಸಿಯಾಗಿ ಕಾಣಿಸುವ ಪರ್ಫೆಕ್ಟ್ ಲೇಯರ್ ಲುಕ್
ಹೌದು, ಈ ವಿಂಟರ್ ಸೆಲೆಬ್ರೇಟಿ ಫ್ಯಾಷನ್ನ ಟಾಪ್ ಲಿಸ್ಟ್ಗೆ ಸೇರಿರುವ ಈ ಲುಕ್ ಲೇಯರ್ ಲುಕ್, ಬಾಸ್ ಲೇಡಿ ಲುಕ್ ಪ್ರಿಯ ಉದ್ಯೋಗಸ್ಥ ಮಾನಿನಿಯರನ್ನು ಸೆಳೆದಿದೆ.
ಕಾಜೋಲ್ಗೆ ಮನೀಶ್ ಮಲ್ಹೋತ್ರಾ ಔಟ್ಫಿಟ್ಸ್ ಕ್ರೇಝ್
ಅಂದಹಾಗೆ, ಕಾಜೋಲ್ ಮೊದಲಿನಿಂದಲೂ ಫ್ಯಾಷನ್ ಪ್ರೇಮಿ. ಸದಾ ಸೆಲೆಬ್ರೆಟಿ ಡಿಸೈನರ್ಗಳ ಡಿಸೈನರ್ ಡ್ರೆಸ್ಗಳಲ್ಲೇ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಅವರಿಗೆ ಮೊದಲಿನಿಂದಲೂ ಮನೀಶ್ ಮಲ್ಹೋತ್ರಾ ಡಿಸೈನರ್ವೇರ್ಗಳೆಂದರೇ ಪ್ರೀತಿ. ಅಷ್ಟೇಕೆ! ಮನೀಶ್ರ ರೆಡಿ ಇರುವ ಡಿಸೈನರ್ವೇರ್ಗಳಲ್ಲಿ ಫಿಟ್ ಆಗಲು ಡಯಟ್ ಕೂಡ ಮಾಡುತ್ತಾರಂತೆ. ಆ ಮಟ್ಟಿಗೆ ಅವರಿಗೆ ಮನೀಶ್ ಮಲ್ಹೋತ್ರಾ ಔಟ್ಫಿಟ್ಗಳ ಮೇಲೆ ಪ್ರೀತಿಯಂತೆ. ಹಾಗೆಂದು ಖುದ್ದು ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.
ಕಾಜೋಲ್ ಬಾಸ್ ಲೇಡಿ ಲುಕ್
ಇನ್ನು, ಕಾಜೋಲ್ ಧರಿಸಿರುವ ಬಾಸ್ ಲೇಡಿ ಲುಕ್ ನೀಡಿರುವ ಈ ಔಟ್ಫಿಟ್ಟನ್ನು ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದಾರೆ. ಕಂಪ್ಲೀಟ್ ಮಿಲ್ಕಿ ವೈಟ್ ಶೇಡ್ನ ಈ ಕೋ ಆರ್ಡ್ ಸೂಟ್ ಲುಕ್ ನೀಡಿರುವ ಈ ಔಟ್ಫಿಟ್ ಕಾಜೋಲರನ್ನು ಅತ್ಯಾಕರ್ಷಕವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಪೆಪ್ಲಮ್ ಶೈಲಿಯ ಔಟ್ಫಿಟ್
ಕಾಜೋಲ್ ಬಾಡಿ ಕರ್ವಿಯಾಗಿರುವುದರಿಂದ ಇನ್ನರ್ ಟಾಪನ್ನು ಪೆಪ್ಲಂ ಡಿಸೈನ್ನಲ್ಲಿ ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಇದು ಸ್ಲಿಮ್ ಫಿಟ್ ಲುಕ್ ನೀಡಿದೆ. ಬಾಸ್ ಲೇಡಿ ಲುಕ್ ಬಯಸುವ ವರ್ಕಿಂಗ್ ವುಮೆನ್ಗೆ ಹೇಳಿ ಮಾಡಿಸಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.