World Elephant Day: ಆನೆಗಳಿರುವ ಭಾರತದ ಜನಪ್ರಿಯ 6 ರಾಷ್ಟ್ರೀಯ ಉದ್ಯಾನವನಗಳಿವು; ಕರ್ನಾಟಕದ ತಾಣವೂ ಇದೆ
ಆಫ್ರಿಕನ್ ಮತ್ತು ಏಷ್ಯನ್ ಆನೆಗಳ ರಕ್ಷಣೆ ಕುರಿತು ವಿಶ್ವದ ಗಮನ ಸೆಳೆಯಲು ಪ್ರತಿ ವರ್ಷ ಆಗಸ್ಟ್ 12ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ. ಕೆನಡಾದ ಚಲನಚಿತ್ರ ನಿರ್ಮಾಪಕರಾದ ಪೆಟ್ರೀಷಿಯಾ ಸಿಮ್ಸ್, ಕೆನಾಜ್ವೆಸ್ಟ್ ಪಿಕ್ಚರ್ಸ್ನ ಮೈಕೆಲ್ ಕ್ಲಾರ್ಕ್ ಮತ್ತು ಥೈಲ್ಯಾಂಡ್ನ ಎಲಿಫೆಂಟ್ ರೀಇಂಟ್ರೊಡಕ್ಷನ್ ಫೌಂಡೇಶನ್ 2012ರಲ್ಲಿ ಈ ದಿನವನ್ನು ಆಚರಿಸಲು ಪ್ರಾರಂಭಿಸಿತ್ತು. ಪ್ರಸ್ತುತ ವಿಶ್ವದ 100 ಕ್ಕೂ ಹೆಚ್ಚು ವನ್ಯಜೀವಿ ಸಂಸ್ಥೆಗಳು ಈ ದಿನವನ್ನು ಆಚರಿಸುತ್ತಿದೆ.
ಸಂಗ್ರಹ ಚಿತ್ರ -
2012ರಿಂದ ವಿಶ್ವ ಆನೆ ದಿನ ಆಚರಣೆ
ಸೌಮ್ಯ ಸ್ವಭಾವದ ದೈತ್ಯ ಪ್ರಾಣಿ ಆನೆಯ ಸಂರಕ್ಷಣೆಗಾಗಿ 2012ರಿಂದ ವಿಶ್ವದಾದ್ಯಂತ ಆನೆ ದಿನವನ್ನು ಆಚರಿಸಲಾಗುತ್ತಿದೆ. ಆಫ್ರಿಕನ್ ಮತ್ತು ಏಷ್ಯನ್ ಆನೆಗಳನ್ನು ಸಂರಕ್ಷಿಸಲು ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಆನೆ ದಿನವನ್ನು ಆಚರಿಸಲು ಮೊದಲು ಕರೆ ನೀಡಿದ್ದು ಕೆನಡಾದ ಚಲನಚಿತ್ರ ನಿರ್ಮಾಪಕರಾದ ಪೆಟ್ರೀಷಿಯಾ ಸಿಮ್ಸ್, ಕೆನಾಜ್ವೆಸ್ಟ್ ಪಿಕ್ಚರ್ಸ್ನ ಮೈಕೆಲ್ ಕ್ಲಾರ್ಕ್ ಮತ್ತು ಥೈಲ್ಯಾಂಡ್ನ ಎಲಿಫೆಂಟ್ ರೀಇಂಟ್ರೊಡಕ್ಷನ್ ಫೌಂಡೇಶನ್.
100ಕ್ಕೂ ಹೆಚ್ಚು ವನ್ಯಜೀವಿ ಸಂಸ್ಥೆಗಳಿಂದ ಆಚರಣೆ
ವಿಶ್ವದ 100ಕ್ಕೂ ಹೆಚ್ಚು ವನ್ಯಜೀವಿ ಸಂಸ್ಥೆಗಳು ವಿಶ್ವ ಆನೆ ದಿನವನ್ನು ಆಚರಿಸುತ್ತಿದೆ. ಇದರ ಮುಖ್ಯ ಉದ್ದೇಶ ಆಫ್ರಿಕನ್ ಮತ್ತು ಏಷ್ಯನ್ ಆನೆಗಳ ರಕ್ಷಣೆ ಹಾಗೂ ಸೆರೆಯಲ್ಲಿರುವ ಮತ್ತು ಕಾಡು ಆನೆಗಳ ಉತ್ತಮ ಆರೈಕೆ ಮತ್ತು ನಿರ್ವಹಣೆ ಬಗ್ಗೆ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನ
ಆನೆಗಳ ಸಂರಕ್ಷಿಸುವ ಆರು ಪ್ರಮುಖ ಉದ್ಯಾನವನಗಳು ಭಾರತದಲ್ಲಿವೆ. ಅವುಗಳಲ್ಲಿ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಕೂಡ ಒಂದು. ಇದು ವಿಸ್ತಾರವಾದ ಹುಲ್ಲುಗಾವಲು ಮತ್ತು ದಟ್ಟವಾದ ಕಾಡುಗಳಿಂದ ಕೂಡಿದ್ದು ಕಾಡು ಪ್ರಾಣಿಗಳಿಗೆ ಅದರಲ್ಲೂ ಮುಖ್ಯವಾಗಿ ಆನೆಗಳಿಗೆ ಪರಿಪೂರ್ಣ ಆವಾಸಸ್ಥಾನವನ್ನು ಒದಗಿಸಿದೆ.
ಪೆರಿಯಾರ್ ರಾಷ್ಟ್ರೀಯ ಉದ್ಯಾನವನ
ಕೇರಳದ ಪೆರಿಯಾರ್ ರಾಷ್ಟ್ರೀಯ ಉದ್ಯಾನವನವು ಪಶ್ಚಿಮ ಘಟ್ಟಗಳ ನಡುವೆ ಇದೆ. ಪೆರಿಯಾರ್ ಸರೋವರದ ಉದ್ದಕ್ಕೂ ಆನೆಗಳನ್ನು ಹೆಚ್ಚಾಗಿ ತಿರುಗಾಡುತ್ತಿರುತ್ತವೆ. ಇಲ್ಲಿ ದೋಣಿ ಸವಾರಿ ಮಾಡುತ್ತಾ ಆನೆಗಳ ವೀಕ್ಷಣೆ ನಯನಮನೋಹರವಾಗಿರುತ್ತದೆ.
ಬಂಡಿಪುರ ರಾಷ್ಟ್ರೀಯ ಉದ್ಯಾನವನ
ಕರ್ನಾಟಕದ ಬಂಡಿಪುರ ರಾಷ್ಟ್ರೀಯ ಉದ್ಯಾನವನವು ಆನೆಗಳು ಮತ್ತು ಇತರ ವನ್ಯಜೀವಿಗಳಿಗೆ ಸ್ವರ್ಗವಾಗಿದೆ. ಇಲ್ಲಿ ಸಫಾರಿ ಮಾಡುವಾಗ ಆನೆಗಳ ಹಿಂಡುಗಳು ಸಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿರುತ್ತದೆ.
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದು. ಇದು ಹೆಚ್ಚಿನ ಆನೆಗಳನ್ನು ಹೊಂದಿದೆ. ಇಲ್ಲಿ ಆನೆಗಳು ಹೆಚ್ಚಾಗಿ ಸಣ್ಣ ಗುಂಪುಗಳಲ್ಲಿ ಕಂಡುಬರುತ್ತವೆ.
ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನ
ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳ ಮುಕ್ತ ಸಂಚಾರಕ್ಕೆ ಬೇಕಾದ ಹಚ್ಚ ಹಸಿರಿನ ಕಾಡುಗಳು ಮತ್ತು ಹುಲ್ಲುಗಾವಲುಗಳನ್ನು ಹೊಂದಿದೆ. ತೆರೆದ ಹುಲ್ಲುಗಾವಲುಗಳು ಮತ್ತು ನದಿ ದಂಡೆಯ ಕಾಡುಗಳಲ್ಲಿ ಹೆಚ್ಚಾಗಿ ದೊಡ್ಡದೊಡ್ಡ ಆನೆ ಹಿಂಡುಗಳನ್ನು ಕಾಣಬಹುದು.
ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನ
ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನವು ಆನೆಗಳು, ಹುಲಿಗಳು ಮತ್ತು ಖಡ್ಗಮೃಗಗಳಿಗೆ ನೆಲೆಯಾಗಿದೆ. ಇಲ್ಲಿನ ತೆರೆದ ಹುಲ್ಲುಗಾವಲುಗಳು ಮತ್ತು ನದಿ ದಂಡೆಯ ಕಾಡುಗಳು ಆನೆಗಳಿಗೆ ಸೂಕ್ತವಾದ ಆವಾಸಸ್ಥಾನಗಳಾಗಿವೆ.