ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ICC Test Rankings: ಎರಡು ವರ್ಷಗಳ ಬಳಿಕ ಟಾಪ್‌ 10ರ ಒಳಗೆ ಪ್ರವೇಶಿಸಿದ ಬಾಬರ್‌ ಆಝಮ್‌!

ವೆಸ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯನ್ನು ಡ್ರಾ ಮಾಡಿಕೊಂಡ ಬಳಿಕ ಪಾಕಿಸ್ತಾನ ತಂಡದ ತಂಡದ ನಾಯಕ ಬಾಬರ್‌ ಆಝಮ್‌ ಅವರು ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ 10ರ ಒಳಗೆ ಪ್ರವೇಶ ಮಾಡಿದ್ದಾರೆ. ಅಂದರೆ ಎರಡು ವರ್ಷಗಳ ಅವರು ಟೆಸ್ಟ್‌ ಶ್ರೇಯಾಂಕದಲ್ಲಿ ಪ್ರಗತಿ ಕಂಡಿದ್ದಾರೆ.

ಟೆಸ್ಟ್‌ ಶ್ರೇಯಾಂಕದ ಅಗ್ರ 10ಕ್ಕೆ ಮರಳಿದ ಬಾಬರ್‌ ಆಝಮ್‌!

ಟೆಸ್ಟ್‌ ಶ್ರೇಯಾಂಕದಲ್ಲಿ ಅಗ್ರ 10ಕ್ಕೆ ಮರಳಿದ ಬಾಬರ್‌ ಆಝಮ್‌. -

Profile
Ramesh Kote Aug 12, 2026 5:51 PM

ನವದೆಹಲಿ: ಪಾಕಿಸ್ತಾನ ಟೆಸ್ಟ್‌ ತಂಡದ ನಾಯಕತ್ವಕ್ಕೆ ಮರಳಿದ ಬೆನ್ನಲ್ಲೆ ಬಾಬರ್‌ ಆಝಮ್‌ (Babar Azam) ಅವರು ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ (ICC Test Rankings) ಪ್ರಗತಿ ಕಂಡಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರ ಫಲವಾಗಿ ಅವರು, ಐದು ಸ್ಥಾನಗಳಲ್ಲಿ ಏರಿಕೆ ಕಂಡು ಅಗ್ರ 10ರ ಒಳಗೆ ಲಗ್ಗೆ ಇಟ್ಟಿದ್ದಾರೆ. ಕಳೆದ ತಿಂಗಳು ಬಾಬರ್‌ ಆಝಮ್‌ ಅವರು ಪಾಕಿಸ್ತಾನ ಟೆಸ್ಟ್‌ ತಂಡದ ನಾಯಕತ್ವಕ್ಕೆ ಮರಳುವ ಮೂಲಕ ಶಾನ್‌ ಮಸೂದ್‌ ಅವರ ಸ್ಥಾನವನ್ನು ತುಂಬಿದ್ದರು. ವಿಂಡೀಸ್‌ ಎದುರು ಎರಡು ಟೆಸ್ಟ್‌ ಪಂದ್ಯಗಳ ನಾಲ್ಕು ಇನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ಈ ಸರಣಿ 1-1 ಅಂತರದಲ್ಲಿ ಡ್ರಾನಲ್ಲಿ ಅಂತ್ಯ ಕಂಡಿತ್ತು.

ಎರಡನೇ ಅವಧಿಯಲ್ಲಿ ಪಾಕ್‌ ನಾಯಕನಾಗಿ ಬಂದ ಬಾಬರ್‌ ಆಝಮ್‌ ಉತ್ತಮ ಪ್ರದರ್ಶನವನ್ನು ತೋರಿದರು. ಪಾಕಿಸ್ತಾನ ತಂಡ ಮೊದಲನೇ ಟೆಸ್ಟ್‌ ಪಂದ್ಯವನ್ನು 90 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಆಝಮ್‌ ಅಜೇಯ 58 ರನ್‌ ಗಳಿಸಿದ್ದರು. ಈ ಸೋಲು ಪಾಕಿಸ್ತಾನ ತಂಡದ ಹೊರಗಿನ ಟೆಸ್ಟ್‌ ಪಂದ್ಯಗಳ ಸೋಲಿನ ಸರಣಿ ಮುಂದುವರಿದ ಭಾಗವಾಗಿತ್ತು.

ಆದರೆ, ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬಾಬರ್‌ ಆಝಮ್‌ ಹಾಗೂ ಪಾಕಿಸ್ತಾನ ತಂಡ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ ಪಾಕ್‌ ನಾಯಕ 88 ರನ್‌ಗಳನ್ನು ಕಲೆ ಹಾಕಿದ್ದರು. ಇನ್ನು ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ 24 ರನ್‌ ಗಳಿಸಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಆ ಮೂಲಕ ಈ ಸರಣಿ 1-1 ಅಂತರದಲ್ಲಿ ಸಮಬಲದಲ್ಲಿ ಅಂತ್ಯ ಕಂಡಿತು. ಇದು ಪಾಕ್‌ಗೆ ಮೂರು ವರ್ಷಗಳ ಬಳಿಕ ವಿದೇಶದಲ್ಲಿ ಮೊದಲ ಟೆಸ್ಟ್‌ ಪಂದ್ಯದ ಗೆಲುವಾಯಿತು.

ಭಾರತ ತಂಡದ ಗಾಯಾಳುಗಳ ಸಮಸ್ಯೆಗೆ ಗೌತಮ್‌ ಗಂಭೀರ್‌ ಕಾರಣ ಎಂದ ಎಸ್‌ ಬದ್ರಿನಾಥ್!

ಅಗ್ರ 10ರ ಒಳಗೆ ಮರಳಿದ ಬಾಬರ್‌ ಆಝಮ್‌

ವಿಂಡೀಸ್‌ ಟೆಸ್ಟ್‌ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದರ ಫಲವಾಗಿ ಬಾಬರ್‌ ಆಝಮ್‌ ಅವರು ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ 10ಕ್ಕೆ ಮರಳಿದ್ದಾರೆ. 2024ರ ಸೆಪ್ಟಂಬರ್‌ರ ಬಳಿಕ ಇದೇ ಮೊದಲ ಬಾರಿ ಅವರು ಪ್ರಗತಿ ಕಂಡಿದ್ದಾರೆ.

ಆಝಮ್‌ ಸಹ ಆಟಗಾರ ಅಬ್ದುಲ್ಹಾ ಶಫಿಕ್‌ ಅವರು 25 ಸ್ಥಾನಗಳಲ್ಲಿ ಏರಿಕೆ ಕಂಡು 32ನೇ ಶ್ರೇಯಾಂಕಕ್ಕೆ ಲಗ್ಗೆ ಇಟ್ಟಿದ್ದಾರೆ. ಇವರು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅಜೇಯ 160 ರನ್‌ ಗಳಿಸಿದ್ದರ ಫಲವಾಗಿ ಈ ಪ್ರಗತಿಯನ್ನು ಕಂಡಿದ್ದಾರೆ. ಸಾಜಿಬ್‌ ಖಾನ್‌ ಅವರು ಕೂಡ ಬೌಲರ್‌ಗಳ ಶ್ರೇಯಾಂಕದಲ್ಲಿ ಐದು ಸ್ಥಾನಗಳಲ್ಲಿ ಏರಿಕೆ ಕಂಡಿದ್ದು 30ಕ್ಕೆ ಲಗ್ಗೆ ಇಟ್ಟಿದ್ದಾರೆ ಹಾಗೂ ಆಲ್‌ರೌಂಡರ್‌ಗಳ ವಿಭಾಗದಲ್ಲಿ 32ನೇ ಸ್ಥಾನಕ್ಕೆ ಬಂದಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಇತ್ತೀಚಿನ ವೈಫಲ್ಯಕ್ಕೆ ಕಾರಣ ತಿಳಿಸಿದ ಕಪಿಲ್‌ ದೇವ್‌!

ಟ್ರಾವಿಸ್‌ ಹೆಡ್‌ಗೆ ಅಗ್ರ ಸ್ಥಾನ

ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌ ಅವರು ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌ ಎರಡನೇ ಸ್ಥಾನದಲ್ಲಿದ್ದಾರೆ, ಜೋ ರೂಟ್‌ ಮೂರನೇ ಸ್ಥಾನದಲ್ಲಿದ್ದರೆ, ನಂತರ ಸ್ಟೀವನ್‌ ಸ್ಮಿತ್‌ ಇದ್ದಾರೆ. ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವೂಮ ಐದನೇ ಸ್ಥಾನ, ಕಮಿಂಡು ಮೆಂಡಿಸ್‌ ಆರನೇ ಹಾಗೂ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಏಳನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ ತಂಡದ ರಚಿನ್‌ ರವೀಂದ್ರ 8ನೇ ಸ್ಥಾನದಲ್ಲಿದ್ದರೆ, ಯಶಸ್ವಿ ಜೈಸ್ವಾಲ್‌ ಅವರು 9ನೇ ಸ್ಥಾನದಲ್ಲಿದ್ದಾರೆ. ಬಾಬರ್‌ ಆಝಮ್‌ 716 ಅಂಕಗಳ ಮೂಲಕ 10ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.