Ramadurga News: ಅನಾವೃಷ್ಠಿಯಿಂದ ಹಾನಿಗೊಳಗಾದ ಬೆಳೆಗಳನ್ನು ವೀಕ್ಷಣೆ ಮಾಡಿದ ಬಿಜೆಪಿ ಬರ ಅಧ್ಯಯನ ತಂಡ
ರಾಮದುರ್ಗ ತಾಲೂಕಿಗೆ ಆಗಮಿಸಿದ ಬಿಜೆಪಿ ಬರ ಅಧ್ಯಯನ ತಂಡ ಕೆ.ಚಂದರಗಿ ಹತ್ತಿರ ರೈತರ ಜಮೀನುಗಳಲ್ಲಿ ಅನಾವೃಷ್ಠಿಯಿಂದ ಹಾನಿಗೊಳಗಾದ ಹೆಸರು ಬೆಳೆ, ಶೇಂಗಾ ಬೆಳೆ ವೀಕ್ಷಣೆ ಮಾಡಿದರು. ನಂತರ ಕಟಕೋಳ ಹತ್ತಿರ ಸಿದ್ದರಾಯಜ್ಜನವರ ಮಠದ ಹತ್ತಿರದ ಜಮೀನೊಂದರದಲ್ಲಿ ಒಣಗಿದ ಗೋವಿನ ಜೋಳ ಬೆಳೆಯನ್ನು ವೀಕ್ಷಣೆ ಮಾಡಿದರು.
ತಾಲೂಕಿನ ಕಟಕೋಳ ಸಿದ್ದರಾಯಜ್ಜನವರ ಮಠದ ಹತ್ತಿರ ಒಣಗಿದ ಗೋವಿನಜೋಳ ಬೆಳೆಯನ್ನು ಬಿಜೆಪಿ ಪರ ಅಧ್ಯಯನ ತಂಡ ವೀಕ್ಷಣೆ ಮಾಡಿದರು. -
ರಾಮದುರ್ಗ: ರಾಮದುರ್ಗ ತಾಲೂಕಿಗೆ ಆಗಮಿಸಿದ ಬಿಜೆಪಿ ಬರ ಅಧ್ಯಯನ ತಂಡ ಕೆ.ಚಂದರಗಿ ಹತ್ತಿರ ರೈತರ ಜಮೀನುಗಳಲ್ಲಿ ಅನಾವೃಷ್ಠಿಯಿಂದ ಹಾನಿಗೊಳಗಾದ ಹೆಸರು ಬೆಳೆ, ಶೇಂಗಾ ಬೆಳೆ ವೀಕ್ಷಣೆ ಮಾಡಿದರು. ನಂತರ ಕಟಕೋಳ ಹತ್ತಿರ ಸಿದ್ದರಾಯಜ್ಜನವರ ಮಠದ ಹತ್ತಿರದ ಜಮೀನೊಂದರದಲ್ಲಿ ಒಣಗಿದ ಗೋವಿನ ಜೋಳ ಬೆಳೆಯನ್ನು ವೀಕ್ಷಣೆ ಮಾಡಿದರು.
ಗೊಡಚಿ ಹಾಗೂ ಕಟಕೋಳ ಮಧ್ಯದಲ್ಲಿರುವ ಬಿಜೆಪಿ ಮುಖಂಡ ಸಿ.ಬಿ. ಪಾಟೀಲ ಅವರ ತೋಟದ ಮನೆಯ ಆವರಣದಲ್ಲಿ ರೈತರೊಂದಿಗೆ ಸಂವಾದ ನಡೆಸಿದರು. ಸಂವಾದಲ್ಲಿ ಸೇರಿದ್ದ ರೈತ ಸಮೂಹ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಬೇಕು.
ಸರಕಾರ ಕಾಟಾಚಾರಕ್ಕೆ ಸಮೀಕ್ಷೆ ನಡೆಸದೇ, ರೈತರ ಬೆಳೆಗಳ ನೈಜ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡುವಂತಾಗಲು, ವಿರೋಧ ಪಕ್ಷದ ನಾಯಕರು ಸರಕಾರವನ್ನು ಆಗ್ರಹಿಸಬೇಕು. ರೈತರ ಸಂಕಷ್ಟ ಪರಸ್ಥಿತಿಯನ್ನು ಕೇಂದ್ರ ಸರಕಾರದ ಗಮನಕ್ಕೂ ತಂದು ಕೇಂದ್ರದಿಂದ ಬರಪೀಡಿತ ಪ್ರದೇಶಗಳಿಗೆ ಅನುದಾನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂವಾದದಲ್ಲಿ ಸೇರಿದ್ದ ರೈತ ಸಮೂಹ ಬಿಜೆಪಿ ಬರ ಅಧ್ಯಯನ ತಂಡದ ಹತ್ತಿರ ತಮ್ಮ ಅಳಲು ತೋಡಿಕೊಂಡರು.
ಇದನ್ನೂ ಓದಿ: Ramadurga News: ವ್ಹಿಬಿ-ಜಿ-ರಾಮ್‌ಜಿ ಯೋಜನೆ ಜಾಗೃತಿ ಅಭಿಯಾನ: ಡಾ.ಕೆ.ವ್ಹಿ.ಪಾಟೀಲ
ವಿಧಾನ ಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ ಮಾತನಾಡಿ, ಸ್ಥಳೀಯ ಅಧಿಕಾರಿಗಳು ಹಾಗೂ ಶಾಸಕರು ರೈತರ ಬರ ಪರಸ್ಥಿತಿಯನ್ನು ವೀಕ್ಷಣೆ ಮಾಡದೇ ಇರುವುದು ಖೇದಕರ ಸಂಗತಿ. ರಾಜ್ಯದಲ್ಲಿ ಬರ ಆವರಿಸಿದ್ದು, ರಾಜ್ಯ ಸರಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುವು ದನ್ನು ಬಿಟ್ಟು, ಕೇವಲ ಮಂತ್ರಿ ಮಂಡಲ ರಚನೆಯಲ್ಲಿಯೇ ಕಾಲ ಕಳೆಯುತ್ತಿದೆ. ಕಾಂಗ್ರೆಸ್ ಶಾಸಕರು ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಮಂತ್ರಿಗಿರಿಗಾಗಿ ಲಾಬಿ ನಡೆಸುವುದರಲ್ಲಿಯೇ ಕಾಲ ಕಳೆದಿದ್ದಾರೆ.
ಬೆಳೆ ಪರಿಹಾರವಾಗಿ ಎಕರೆಗೆ ರೂ. 50 ಸಾವಿರ ಘೋಷಣೆ ಮಾಡಿ ತಕ್ಷಣ ರೂ. 25 ಸಾವಿರ ನೀಡು ವದು ಬೆಳೆ ವಿಮೆಯನ್ನು ಸರ್ಕಾರವೇ ಭರಣಾ ಮಾಡಲು ಒತ್ತಾಯಿಸುವದಾಗಿ ಹೇಳಿದರು.
ಇಲ್ಲವಾದಲ್ಲಿ ಉಭಯ ಸದನ ಹಾಗೂ ರೈತರಿಗೆ ಬೆಂಬಲವಾಗಿ ನಿಂತು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎನ್. ರವಿಕುಮಾರ ಆಗ್ರಹಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದೇ ರೈತರ ಬೆಳೆಗಳು ನಾಶವಾಗಿವೆ. ರಾಜ್ಯ ಸರಕಾರ ಶೀಘ್ರ ರೈತರ ನೆರವಿಗೆ ದಾವಿಸಬೇಕು. ಬೆಳೆನಾಶಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ಕಾಳಿ ನದಿ ನೀರನ್ನು ಸೋಪಾ ಆಣೆಕಟ್ಟಿನಿಂದ ಮಲಪ್ರಭಾ ನದಿಗೆ ಲಿಪ್ಟ್ ಮೂಲಕ ನೀರು ತರುವ ಯೋಜನೆಗೆ ಈ ಹಿಂದೆ 7500 ಕೋಟಿಯ ಡಿಪಿಆರ್ ಮಾಡಿ ಸಲ್ಲಿಸಿದ ಪ್ರಸ್ತಾವಣೆಗೆ ಕೇಂದ್ರ ಒಪ್ಪಿಗೆ ನೀಡಿದೆ. ಕೇವಲ 65 ಕಿಮೀದಲ್ಲಿ 10-15 ಟಿಎಂಸಿ ನೀರು ಮಲಪ್ರಭಾ ನದಿಗೆ ದೊರೆಯಲಿದೆ. ಯೋಜನೆಯ ಅನುಷ್ಠಾನಕ್ಕೆ ಎಲ್ಲರೂ ಶ್ರಮಿಸುವದು ಅಗತ್ಯ ಎಂದರು.
ಈ ಸಂದರ್ಭದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ರಾಯಭಾಗ ಶಾಸಕ ದುರ್ಯೋಧನ ಐಹೊಳೆ, ಖಾನಾಪೂರ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ್ ಪಾಟೀಲ, ಬಿಜೆಪಿ ರಾಜ್ಯ ಮಾಧ್ಯಮ ಸಮಿತಿಯ ಸದಸ್ಯ ಎಫ್.ಎಸ್. ಸಿದ್ದನಗೌಡ್ರ, ತಾಲೂಕಾಧ್ಯಕ್ಷ ಡಾ. ಕೆ.ವ್ಹಿ. ಪಾಟೀಲ, ಮುಖಂಡರಾದ ಸಿ.ಬಿ. ಪಾಟೀಲ, ಪಿ.ಎಫ್. ಪಾಟೀಲ, ಬಿ.ಎಸ್. ಬೆಳವಣಕಿ, ಗೋಪಾಲರಡ್ಡಿ ಸಂಶಿ, ಸಂಜೀವ ಶೆಟ್ಟಿಸದಾವರ್ತಿ ಸೇರಿದಂತೆ ಸ್ಥಳೀಯ ಮುಖಂಡರು ಸೇರಿದಂತೆ ಬಿಜೆಪಿ ಬರ ಅಧ್ಯಯನ ತಂಡದ ಸದಸ್ಯರು ಮತ್ತಿತರರಿದ್ದರು.