Bihar Election 2025 Results: ಬಿಹಾರದಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಖ ಭಂಗ: ರಾಹುಲ್ ಗಾಂಧಿ ನಾಪತ್ತೆ
ಬಿಹಾರದಲ್ಲಿ ತೀವ್ರ ಮುಖ ಭಂಗ ಅನುಭವಿಸಿರುವ ಕಾಂಗ್ರೆಸಿಗರು ಈಗ ನಾಯಕ ರಾಹುಲ್ ಗಾಂಧಿ ಅವರನ್ನು ಹುಡುಕುತ್ತಿದ್ದಾರೆ. ಬಿಹಾರದಲ್ಲಿ ಎನ್‌ಡಿಎಯ ಪ್ರಚಾರ ಆರಂಭಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾಪತ್ತೆಯಾಗಿದ್ದರು. ಇದು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬಿದ್ದಿದೆ ಎನ್ನುತ್ತಿದ್ದಾರೆ ಅನುಭವಿ ನಾಯಕರು.
ರಾಹುಲ್ ಗಾಂಧಿ (ಸಂಗ್ರಹ ಚಿತ್ರ) -
ಬಿಹಾರ: ವಿಧಾನ ಸಭಾ ಚುನಾವಣೆ ಫಲಿತಾಂಶ (Bihar Election Result 2025) ಕಾಂಗ್ರೆಸ್ (congress) ನಾಯಕರಿಗೆ ಭಾರಿ ಹೊಡೆತವನ್ನೇ ನೀಡಿದೆ. ಇದಕ್ಕೆ ಮುಖ್ಯ ಕಾರಣ ಬಿಹಾರ ವಿಧಾನ ಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಎನ್‌ಡಿಎ (NDA) ಪ್ರವೇಶ ಪಡೆಯುತ್ತಿದ್ದಂತೆ ಕಾಂಗ್ರೆಸ್ ತನ್ನ ಪ್ರಚಾರ ಕಾರ್ಯದಲ್ಲಿ ಉತ್ಸಾಹವನ್ನು ಕಡಿಮೆಗೊಳಿಸಿತ್ತು. ಇದು ಈಗ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಕಳೆದ ಕೆಲವು ದಿನಗಳಿಂದ ಎಲ್ಲಿದ್ದಾರೆ ಎಂಬುದು ಇಲ್ಲಿನ ಕಾಂಗ್ರೆಸಿಗರಿಗೆ ಗೊತ್ತಿಲ್ಲ. ಹೀಗಾಗಿ ಫಲಿತಾಂಶ ಹೊರ ಬರುವ ವೇಳೆ ಅವರು ತುಸು ಹೆಚ್ಚು ನಿರಾಶರಾಗಿದ್ದಾರೆ.
ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಎನ್‌ಡಿಎ ಎದುರು ಕಾಂಗ್ರೆಸ್ ತೀವ್ರ ಮುಖ ಭಂಗವನ್ನು ಅನುಭವಿಸಿದೆ. ಒಂದೆಡೆ ವಿಧಾನ ಸಭಾ ಚುನಾವಣೆಯ ಆರಂಭಿಕ ಹಂತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ತೀವ್ರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರೂ ಎನ್‌ಡಿಎ ಪ್ರಚಾರ ಕಾರ್ಯ ಆರಂಭಿಸುತ್ತಿದ್ದಂತೆ ಕಣದಿಂದ ಹಿಂದಕ್ಕೆ ಸರಿದರು. ಇದು ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿರುವುದು ಈಗ ಸ್ಪಷ್ಟವಾಗಿದೆ.
ಇದನ್ನೂ ಓದಿ: Bihar Election 2025 Results: ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿಗೆ ಅಭಿನಂದನೆ: ಆರ್.ಅಶೋಕ್ ವ್ಯಂಗ್ಯ
ಬಿಹಾರದಲ್ಲಿ ಕಾಂಗ್ರೆಸ್ ಸೋತಿದ್ದು, ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಎಲ್ಲೂ ಕಂಡುಬಂದಿಲ್ಲ. ಅವರು ಕೊನೆಯ ಬಾರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರಿ ಮಿರಾಯಾ ವಾದ್ರಾ ಅವರೊಂದಿಗೆ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಇದನ್ನು ಕಾಂಗ್ರೆಸ್ ನಾಯಕರಾದ ಸುಪ್ರಿಯಾ ಶ್ರಿನೇಟ್ ಮತ್ತು ರಾಗಿಣಿ ನಾಯಕ್ ತಳ್ಳಿಹಾಕಿದ್ದು, ಇದು ಹಳೆಯ ವಿಡಿಯೊ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಎನ್‌ಡಿಎ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲಿ ಎನ್ನುವ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕೆಲವರು ಅವರು ಲಂಡನ್ ಅಥವಾ ಮಸ್ಕತ್‌ಗೆ ಹಾರಿದ್ದಾರೆ ಎನ್ನುತ್ತಿದ್ದು, ಈ ಕುರಿತು ಫ್ಯಾಕ್ಟ್-ಚೆಕ್ ಸೈಟ್ ನ್ಯೂಸ್‌ಮೀಟರ್ ರಾಹುಲ್ ಗಾಂಧಿ ಲಂಡನ್ ಅಥವಾ ಮಧ್ಯಪ್ರಾಚ್ಯಕ್ಕೆ ಹೋಗಿದ್ದಾರೆ ಎಂದು ತಿಳಿಸಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಅದು ಹೇಳಿದೆ.
ಬಿಹಾರ ಚುನಾವಣಾ ಫಲಿತಾಂಶಗಳು ಶುಕ್ರವಾರ ಹೊರಗೆ ಬೀಳುತ್ತಿದ್ದಂತೆ ರಾಹುಲ್ ಗಾಂಧಿ ಎಲ್ಲಿದ್ದಾರೆ ಎನ್ನುವ ಪ್ರಶ್ನೆಗಳನ್ನು ಎಲ್ಲರೂ ಕೇಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್, ವಿದೇಶದಲ್ಲಿ ರಾಹುಲ್ ಗಾಂಧಿ ಎಚ್ಚರಗೊಳ್ಳುವ ಹೊತ್ತಿಗೆ ಇಲ್ಲಿ ಎನ್‌ಡಿಎ ಜಯ ಸಾಧಿಸಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: IPL 2026: ʻಈ ಆಟಗಾರನಿಗೋಸ್ಕರ ಎಸ್‌ಆರ್‌ಎಚ್ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದೆʼ-ಡೇಲ್ ಸ್ಟೇನ್!
ರಾಹುಲ್ ಗಾಂಧಿ ಅವರು ತಮ್ಮ ಮಹಾಘಟಬಂಧನ್ ನ ಮಿತ್ರ ಪಕ್ಷವಾದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಬಿಹಾರದಲ್ಲಿ ಭಾರಿ ಪ್ರಚಾರ ನಡೆಸಿದ್ದರು. ಇದಕ್ಕಾಗಿ ಅವರು 16 ದಿನಗಳ ಕಾಲ 1,300 ಕಿ.ಮೀ. ದೂರ 23 ಜಿಲ್ಲೆಗಳಲ್ಲಿ ಯಾತ್ರೆ ನಡೆಸಿದ್ದಾರೆ. ಈ ವೇಳೆ ಅವರು ಮತದಾರರ ಹಕ್ಕುಗಳು ಮತ್ತು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದರು. ಸೆಪ್ಟೆಂಬರ್ 1 ರಂದು ಅವರು ಯಾತ್ರೆ ಮುಕ್ತಾಯಗೊಳಿಸಿ ಬಳಿಕ ದಕ್ಷಿಣ ಅಮೆರಿಕಕ್ಕೆ ಐದು ರಾಷ್ಟ್ರಗಳ ಪ್ರವಾಸಕ್ಕಾಗಿ ತೆರಳಿದರು ಎನ್ನಲಾಗಿದೆ.