ನಾಸಿಕ್ ಟಿಸಿಎಸ್, ಹುಬ್ಬಳ್ಳಿ ಜಿಮ್ ಪ್ರಕರಣ; ಸಮಗ್ರ ತನಿಖೆಗೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮನವಿ
ಮಹಾರಾಷ್ಟ್ರದ ನಾಸಿಕ್‌ನ ಐಟಿ ಕಂಪನಿಯಲ್ಲಿ ಬಹಿರಂಗಗೊಂಡಿರುವ ಗಂಭೀರ ಪ್ರಕರಣದ ಹಿನ್ನೆಲೆ ರಾಜ್ಯದ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮತ್ತು ಜಿಮ್‌ಗಳಲ್ಲಿ ಮಹಿಳಾ ಸುರಕ್ಷತೆ, ಧಾರ್ಮಿಕ ಒತ್ತಡ ಮತ್ತು ಕಾರ್ಯಸ್ಥಳದ ದುರ್ಬಳಕೆ ಕುರಿತಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು, ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಯಿತು.
ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮನವಿ. -
ಬೆಂಗಳೂರು, ಏ.21: ಮಹಾರಾಷ್ಟ್ರದ ನಾಸಿಕ್‌ನ ಐಟಿ ಕಂಪನಿಯಲ್ಲಿ ಬಹಿರಂಗಗೊಂಡಿರುವ ಗಂಭೀರ ಪ್ರಕರಣದ ಹಿನ್ನೆಲೆ ರಾಜ್ಯದ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮತ್ತು ಜಿಮ್‌ಗಳಲ್ಲಿ ಮಹಿಳಾ ಸುರಕ್ಷತೆ, ಧಾರ್ಮಿಕ ಒತ್ತಡ ಮತ್ತು ಕಾರ್ಯಸ್ಥಳದ ದುರ್ಬಳಕೆ ಕುರಿತಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು, ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಯಿತು.
ಮಹಿಳಾ ನೌಕರರಿಂದ ಬಂದ ದೂರಿನ ಪ್ರಕಾರ, ಕೆಲವು ಕಂಪನಿಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಬೆದರಿಕೆ, ಧಾರ್ಮಿಕ ಒತ್ತಡ ಸೇರಿ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಸಮಿತಿ ಮನವಿ ಮಾಡಿದೆ.
ಮಹಿಳಾ ಗೌರವ ಮತ್ತು ಸುರಕ್ಷತೆ ಯಾವುದೇ ಸಮಾಜದ ಮೂಲಭೂತ ಅಂಶವಾಗಿದ್ದು, ಇಂತಹ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸಮನ್ವಯಕ ಶರತ್ ಕುಮಾರ್ ತಿಳಿಸಿದ್ದಾರೆ.
ಟಿಸಿಎಸ್ ಬಳಿಕ ಬೆಳಕಿಗೆ ಬಂತು ಮತ್ತೊಂದು ಕಂಪನಿಯ ಮತಾಂತರ ದಂಧೆ; NGO ಮುಖ್ಯಸ್ಥನ ಬಂಧನ!
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸುಂದ್ರೇಶ್ ನರ್ಗಲ್, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶರತ್ ಕುಮಾರ್, ವಕೀಲ ರವಿ ಶಂಕರ್, ಹಿಂದೂ ಮುಖಂಡರಾದ ಜ್ಯೋತಿ ಗೌಡ, ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು.