ಟಿಕೆಟ್ ಇದ್ದರೂ ವಿಮಾನದೊಳಗೆ ಪ್ರಯಾಣಿಕನಿಗೆ ಪ್ರವೇಶ ನಿರಾಕರಿಸಿದ ಇಂಡಿಗೋ; ಭುಗಿಲೆದ್ದ ವಿವಾದ
Viral Video: ಇತ್ತೀಚೆಗೆ ಇಂಡಿಗೋ ವಿಮಾನದ ಬಗ್ಗೆ ಪ್ರಯಾಣಿಕರಿಂದ ಹಲವು ದೂರುಗಳು ಕೇಳಿ ಬರುತ್ತಿವೆ. ಕೆಲವು ದಿನಗಳ ಹಿಂದೆ ಇಂಡಿಗೋ ವಿಮಾನ ಬಿಕ್ಕಟ್ಟು ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಇದೀಗ ಟಿಕೆಟ್ ಇದ್ದರೂ ಪ್ರಯಾಣಿಕರೊಬ್ಬರಿಗೆ ಪ್ರವೇಶ ನಿರಾಕರಿಸಿರುವ ಘಟನೆ ಭಾರಿ ಸಂಚಲನ ಸೃಷ್ಟಿಸಿದೆ.
ಸಾಂದರ್ಭಿಕ ಚಿತ್ರ -
ಮುಂಬೈ, ಏ. 21: ಇಂಡಿಗೋ ಭಾರತದ ಅತಿದೊಡ್ಡ ಮತ್ತು ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆ. ಆದರೆ ಇತ್ತೀಚೆಗೆ ಇಂಡಿಗೋ ಸಂಸ್ಥೆಯ ಬಗ್ಗೆ ಪ್ರಯಾಣಿಕರಿಂದ ಹಲವು ದೂರುಗಳು ಕೇಳಿ ಬರುತ್ತಿವೆ. ಕೆಲವು ತಿಂಗಳ ಹಿಂದೆಯಷ್ಟೇ ಇಂಡಿಗೋ ವಿಮಾನ ಬಿಕ್ಕಟ್ಟು ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಈ ನಡುವೆ ಪ್ರಯಾಣಿಕರೊಬ್ಬರಿಗೆ ಟಿಕೆಟ್ ಇದ್ದರೂ ಪ್ರವೇಶ ನಿರಾಕರಿಸಿರುವ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಪುಣೆಯಿಂದ ಬೆಂಗಳೂರಿಗೆ ಹೋಗುವ ಇಂಡಿಗೋ ವಿಮಾನಕ್ಕೆ ಸರಿಯಾದ ಸಮಯಕ್ಕೆ ಬಂದರೂ ಸಿಬ್ಬಂದಿ ಹತ್ತಲು ನಿರಾಕರಿಸಿದ್ದಾರೆ ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ. ಇದು ಓವರ್‌ಬುಕಿಂಗ್ ಮತ್ತು ಸೀಟು ಹಂಚಿಕೆಯ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ. ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ವ್ಯಕ್ತಿಯೊಬ್ಬರಿಗೆ, ಟಿಕೆಟ್ ಕನ್ಫರ್ಮ್ ಇದ್ದರೂ ಇಂಡಿಗೋ ಸಿಬ್ಬಂದಿ ಅನುಮತಿ ನೀಡಿಲ್ಲ ಎಂದು ದೂರಿದ್ದಾರೆ
ವಿಡಿಯೊ ನೋಡಿ:
Passenger Denied Boarding Despite Early Arrival as IndiGo Flight Gets Overbooked...
— Dr Ranjan (@DocRGM_) April 20, 2026
Is this an Airline or Some Rural Bus!? Overbooked !? pic.twitter.com/04yAd41kdw
ಚೆಕ್-ಇನ್ ಕೌಂಟರ್‌ನಲ್ಲಿ ಪ್ರಯಾಣಿಕನಿಗೆ ವಿಮಾನವು ಓವರ್‌ಬುಕ್ ಆಗಿದ್ದು ಸೀಟು ಇಲ್ಲ ಎಂದು ತಿಳಿಸಲಾಯಿತು. ಇದರಿಂದ ಸಿಟ್ಟಾದ ಪ್ರಯಾಣಿಕ ಅಲ್ಲೇ ಕಿಡಿಕಾರಿದ್ದಾರೆ. ಈ ಘಟನೆಯು ಪ್ರಯಾಣಿಕ ಮತ್ತು ವಿಮಾನಯಾನ ಸಿಬ್ಬಂದಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ಈ ಕ್ಷಣದ ದೃಶ್ಯ ವೈರಲ್ ಆಗಿದ್ದು ಅನೇಕರು ವಿಮಾನದ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು. ಕ್ಲಿಪ್‌ನಲ್ಲಿ ಆ ವ್ಯಕ್ತಿ ಇಂಡಿಗೋ ಸಿಬ್ಬಂದಿಯೊಂದಿಗೆ ವಾದಿಸುತ್ತಿರುವುದನ್ನು ಕಾಣಬಹುದು.
ಅಶ್ಲೀಲ ವಿಡಿಯೊ ವೀಕ್ಷಿಸುವ ಪತಿಯನ್ನು ಸರಿಪಡಿಸಲು ಹೋದ ಪತ್ನಿಈ ಚಟಕ್ಕೆ ಬಲಿಯಾಗಿದ್ದು ಹೇಗೆ?
ʼʼನನಗೆ ಇಂದು ಪುಣೆಯಿಂದ ಬೆಂಗಳೂರಿಗೆ ವಿಮಾನ ನಿಗದಿಯಾಗಿತ್ತು. ಅದು ಸೀಟ್ ಸಂಖ್ಯೆ 16. ನಾನು ಒಂದು ಗಂಟೆ ಅಥವಾ ಒಂದೂವರೆ ಗಂಟೆ ಮುಂಚಿತವಾಗಿ ಬಂದೆ. ಚೆಕ್-ಇನ್ ಸಮಯದೊಳಗೆ ಬಂದರೂ ನನ್ನ ಸೀಟನ್ನು ಬೇರೆಯವರಿಗೆ ನಿಯೋಜಿಸಲಾಗಿದೆ ಎಂದು ಹೇಳಿದ್ದಕ್ಕೆ ಸಿಬ್ಬಂದಿ ವಿಮಾನವು ಓವರ್‌ಬುಕ್ ಆಗಿದೆ ಎಂದು ತಿಳಿಸಿದರು. ಓವರ್‌ಬುಕ್ ಆಗಿದ್ದರೆ ಪ್ರಯಾಣಿಸಬೇಕಾದ ಪ್ರಯಾಣಿಕರ ಕಥೆ ಏನು?ʼʼ ಎಂದು ಪ್ರಶ್ನಿಸಿದೆ.
ಇದಕ್ಕೆ ಸಿಬ್ಬಂದಿ, ʼʼನಾವು ಟಿಕೆಟ್ ಮಾರಾಟ ಮಾಡಿಲ್ಲ ಸರ್. ವಿಮಾನದಲ್ಲಿ ಸದ್ಯಕ್ಕೆ ಸೀಟುಗಳು ಇಲ್ಲ. ನೀವು ವೆಬ್ ಚೆಕ್-ಇನ್ ಮಾಡಿಲ್ಲ. ಈ ಕಾರಣ ಈ ಸಮಸ್ಯೆ ಉಂಟಾಗಿದೆʼʼ ಎಂದು ಸಿಬ್ಬಂದಿ ಹೇಳಿದ್ದಾರೆ. ಇನ್ನೂ ಕೋಪಗೊಂಡ ಪ್ರಯಾಣಿಕ, ʼʼನಿಮ್ಮದು ಅತ್ಯಂತ ಕೆಟ್ಟ ವಿಮಾನಯಾನ ಸಂಸ್ಥೆ. ನಿಮ್ಮಲ್ಲಿರುವುದು ಅತ್ಯಂತ ಕೆಟ್ಟ ವ್ಯವಸ್ಥೆʼʼ ಎಂದು ದೂರಿದ್ದಾರೆ. ಬಳಿಕ ಅವರಿಗೆ ಹೈದರಾಬಾದ್ ಮೂಲಕ ಬೆಂಗಳೂರಿಗೆ ಹೋಗಲು ಅವಕಾಶ ನೀಡಲಾಯಿತು ಎನ್ನಲಾಗಿದೆ.