ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tejaswi Surya: ಹಿಂದೂಗಳಿಗೆ ಒಂದು ಇಂಚು ಭೂಮಿಯ ಅಗತ್ಯವಿಲ್ಲ- ಓವೈಸಿ ವಿರುದ್ಧ ತೇಜಸ್ವಿ ಸೂರ್ಯ ಅಬ್ಬರ; ಭಾರೀ ವೈರಲಾಗ್ತಿದೆ ಈ ವಿಡಿಯೊ

Waqf Bill: ಸಂಸದ ಓವೈಸಿ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ( Tejaswi Surya) ಅವರು ಹಿಂದುಗಳಿಗೆ ನಿಮ್ಮ ಸ್ವಂತ ಭೂಮಿಯ ಒಂದು ಇಂಚು ಕೂಡ ಬೇಕಾಗಿಲ್ಲ. ಇದು ನನ್ನ ವಚನ. ನಿಮ್ಮ ಮೂಲಕ ಎಲ್ಲ ಮುಸ್ಲಿಂ ಸಮುದಾಯಕ್ಕೆ ನಾನು ಹೇಳ ಬಯಸುತ್ತೇನೆ. ನಿಮ್ಮ ಸ್ವಂತ ಭೂಮಿಯ ಒಂದು ಇಂಚು ಕೂಡ ಹಿಂದೂಗಳಿಗೆ ಬೇಕಾಗಿಲ್ಲ ಎಂದರು.

ಓವೈಸಿ ವಿರುದ್ಧ ಅಬ್ಬರಿಸಿದ ತೇಜಸ್ವಿ ಸೂರ್ಯ-ವಿಡಿಯೊ ಇದೆ

ನವದೆಹಲಿ: ಹಿಂದುಗಳಿಗೆ ಒಂದು ಇಂಚು ಭೂಮಿಯ ಅಗತ್ಯವಿಲ್ಲ ಎಂದು ಎಐಎಂಐಎಂ (AIMIM ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ( Asaduddin Owaisi) ಅವರಿಗೆ ಸಂಸದ ತೇಜಸ್ವಿ ಸೂರ್ಯ ( Tejasvi Surya ) ಹೇಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹಿಂದೂ ನನ್ನ ಪರಿಚಯ.. ಎನ್ನುವ ಕವನವನ್ನು ವಾಚಿಸಿದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ರಾಜ್ಯಸಭೆಯು ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill ) ಅಂಗೀಕರಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವೇಳೆ ಬಿಜೆಪಿಯ ತೇಜಸ್ವಿ ಸೂರ್ಯ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಡುವೆ ತೀವ್ರ ವಾಗ್ವಾದ ನಡೆದಿರುವ ವಿಡಿಯೋ ವೈರಲ್ ಆಗುತ್ತಿದೆ.



ಈ ವಿಡಿಯೋದಲ್ಲಿ ಸಂಸದ ಓವೈಸಿ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ಸಂಸದರು ಈ ರೀತಿ ಮಾತನಾಡಿದರು. ಹಿಂದುಗಳಿಗೆ ನಿಮ್ಮ ಸ್ವಂತ ಭೂಮಿಯ ಒಂದು ಇಂಚು ಕೂಡ ಬೇಕಾಗಿಲ್ಲ. ಇದು ನನ್ನ ವಚನ. ನಿಮ್ಮ ಮೂಲಕ ಎಲ್ಲ ಮುಸ್ಲಿಂ ಸಮುದಾಯಕ್ಕೆ ನಾನು ಹೇಳ ಬಯಸುತ್ತೇನೆ. ನಿಮ್ಮ ಸ್ವಂತ ಭೂಮಿಯ ಒಂದು ಇಂಚು ಕೂಡ ಹಿಂದುಗಳಿಗೆ ಬೇಕಾಗಿಲ್ಲ ಎಂದರು.

ಇದನ್ನೂ ಓದಿ: Waqf Bill: ಐತಿಹಾಸಿಕ ಕ್ಷಣ... ವಕ್ಫ್‌ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಪ್ರಧಾನಿ ಮೋದಿ ಹರ್ಷ

ಬಳಿಕ ಅವರು ವಾಜಪೇಯಿಯವರು ಬರೆದಿರುವ ಹಿಂದೂಗಳು ನೀಡುವ ಸಂದೇಶವೇನು? ಎಂಬ ಕವನವನ್ನು ವಾಚಿಸಿದರು. ಇದು ಬಳಿಕ ಧರ್ಮದ ಬಗ್ಗೆ ತೀವ್ರವಾದ ವಾದಕ್ಕೆ ಕಾರಣವಾಯಿತು.