ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Two-wheeler Adventure: ಚಿಂತಾಮಣಿಯಿಂದ ಲಡಾಖ್‌ವರೆಗೆ ದ್ವಿಚಕ್ರ ವಾಹನದಲ್ಲಿ ಸಾಹಸಯಾತ್ರೆ: ವಿಶ್ವಶಾಂತಿಗಾಗಿ ಇಬ್ಬರು ಸ್ನೇಹಿತರ ಪಯಣ : ಶುಭಕೋರಿದ ಚಿಂತಾಮಣಿ ನಾಗರೀಕರು

ಈ ಯಾತ್ರೆಯ ಹಿಂದೆ ಕೇವಲ ಪ್ರವಾಸದ ಹಂಬಲವಷ್ಟೇ ಅಲ್ಲ, ಉನ್ನತ ಉದ್ದೇಶಗಳೂ ಇವೆ.  ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧದ ಭೀತಿ ಕಡಿಮೆಯಾಗಲಿ ಎನ್ನುವ ಆಶಯ.ದೇಶದ ಜನತೆ ಎದುರಿಸುತ್ತಿರುವ ಪೆಟ್ರೋಲ್,ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ಸಂಕಷ್ಟಗಳು ದೂರ ವಾಗಲಿ ಎಂಬ ಪ್ರಾರ್ಥನೆ ಜತೆಗೆ ದೇಶಾದ್ಯಂತ ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ ಎಂಬ ಸಂದೇಶ ಸಾರಲು ಇವರು ಮುಂದಾಗಿದ್ದಾರೆ.

ವಿಶ್ವಶಾಂತಿಗಾಗಿ ಇಬ್ಬರು ಸ್ನೇಹಿತರ ಪಯಣ : ಶುಭಕೋರಿದ ಚಿಂತಾಮಣಿ ನಾಗರೀಕರು

ಮನುಷ್ಯರಿಗೆ ದೃಢಸಂಕಲ್ಪವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆ ಸಿಕ್ಕಿದೆ.ಚಿಂತಾಮಣಿ ನಗರದ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಸುಮಾರು ೨ ತಿಂಗಳ ಕಾಲ ಭಾರತದಾದ್ಯಂತ ಸಂಚರಿಸಲು ಸಾಹಸಯಾತ್ರೆ ಕೈಗೊಂಡಿದ್ದು ಜನತೆ ಶುಭ ಕೋರಿದ್ದಾರೆ. -

Profile
Ashok Nayak May 16, 2026 10:56 PM

ಚಿಂತಾಮಣಿ: ಮನುಷ್ಯರಿಗೆ ದೃಢಸಂಕಲ್ಪವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆ ಸಿಕ್ಕಿದೆ.ಚಿಂತಾಮಣಿ ನಗರದ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಸುಮಾರು 2 ತಿಂಗಳ ಕಾಲ ಭಾರತದಾದ್ಯಂತ ಸಂಚರಿಸಲು ಸಾಹಸಯಾತ್ರೆ ಕೈಗೊಂಡಿದ್ದಾರೆ.

ನಗರದ ಆಶ್ರಯ ಬಡಾವಣೆಯ ನಿವಾಸಿಗಳಾದ ನವಾಬ್ ಖಾನ್ ಮತ್ತು ಅಸ್ಲಂ ಪಾಷಾ ಈ ಸುದೀರ್ಘ ಪ್ರವಾಸ ಕೈಗೊಂಡಿರುವ ಗೆಳೆಯರು. ತಮ್ಮ ದ್ವಿಚಕ್ರ ವಾಹನವನ್ನೇ ಪ್ರವಾಸಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡು,ಅಗತ್ಯ ಸಾಮಗ್ರಿಗಳನ್ನು ಜೋಡಿಸಿಕೊಂಡು ಪ್ರಯಾಣ ಆರಂಭಿಸಿದ್ದಾರೆ.

ಇದನ್ನೂ ಓದಿ: Chinthamani News: ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಈಜು ತರಬೇತಿ: ಡ್ಯಾನ್ಸ್ ಮಾಸ್ಟರ್ ಕೇಶವ ಅವರ ಸಾಮಾಜಿಕ ಕಳಕಳಿ

ಈ ಯಾತ್ರೆಯ ಹಿಂದೆ ಕೇವಲ ಪ್ರವಾಸದ ಹಂಬಲವಷ್ಟೇ ಅಲ್ಲ, ಉನ್ನತ ಉದ್ದೇಶಗಳೂ ಇವೆ.  ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧದ ಭೀತಿ ಕಡಿಮೆಯಾಗಲಿ ಎನ್ನುವ ಆಶಯ.ದೇಶದ ಜನತೆ ಎದುರಿಸುತ್ತಿರುವ ಪೆಟ್ರೋಲ್,ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ಸಂಕಷ್ಟಗಳು ದೂರ ವಾಗಲಿ ಎಂಬ ಪ್ರಾರ್ಥನೆ ಜತೆಗೆ ದೇಶಾದ್ಯಂತ ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ ಎಂಬ ಸಂದೇಶ ಸಾರಲು ಇವರು ಮುಂದಾಗಿದ್ದಾರೆ.

ಯುವಕರ ಈ ಸಾಹಸ ಕಾರ್ಯಕ್ಕೆ ಸ್ಥಳೀಯರು ಮತ್ತು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ವಾರ್ಡಿನ ಯುವಕರು ದೇಶದ ಗಡಿಯವರೆಗೆ ಹೋಗಿ ಶಾಂತಿಯ ಸಂದೇಶ ಸಾರುತ್ತಿರುವುದು ಹೆಮ್ಮೆಯ ವಿಷಯ. ಪ್ರಕೃತಿಯ ವಿಕೋಪಗಳು ದೂರವಾಗಿ, ಎಲ್ಲರಿಗೂ ಸುಖ-ಶಾಂತಿ ಸಿಗಲಿ ಎಂದು ಅವರು ಈ ಯಾತ್ರೆ ಕೈಗೊಂಡಿದ್ದಾರೆ. ಅವರಿಗೆ ಭಗವಂತ ಆರೋಗ್ಯ ಮತ್ತು ಯಶಸ್ಸು ನೀಡಲಿ" ಎಂದು ಮಾಜಿ ನಗರಸಭಾ ಸದಸ್ಯರಾದ ಜೈ ಭೀಮ್ ಮುರಳಿ ಹಾಗೂ ನಗರದ ಪ್ರಮುಖರು ಹಾರೈಸಿದ್ದಾರೆ.

ತಮ್ಮ ದ್ವಿಚಕ್ರ ವಾಹನಕ್ಕೆ ಭಾರತದ ತ್ರಿವರ್ಣ ಧ್ವಜವನ್ನು ಕಟ್ಟಿಕೊಂಡು ಸಾಗುತ್ತಿರುವ ಈ ಇಬ್ಬರು ಸ್ನೇಹಿತರು, ದಾರಿಯುದ್ದಕ್ಕೂ ಹವಾಮಾನ ವೈಪರೀತ್ಯಗಳ ನಡುವೆಯೂ ತಮ್ಮ ಗುರಿ ತಲುಪುವ ಭರವಸೆ ಹೊಂದಿದ್ದಾರೆ.