ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಂತಾಮಣಿ-ಮುರುಗಮಲ್ಲ ರಸ್ತೆಯಲ್ಲಿ ಭೀಕರ ಅಪಘಾತ: ಬಸ್ಸಿನ ಹಿಂಭಾಗಕ್ಕೆ ಬೈಕ್ ಡಿಕ್ಕಿ,ಸವಾರನಿಗೆ ಗಂಭೀರ ಗಾಯ!

ಗಾಯಗೊಂಡ ಸವಾರನನ್ನು ಶಿಡ್ಲಘಟ್ಟ ತಾಲ್ಲೂಕಿನ ಅಜಾದ್ ನಗರದ ನಿವಾಸಿ 27 ವರ್ಷದ ಅತೀಕ್ ಪಾಷಾ ಎಂದು ಗುರುಸಿಲಾಗಿದ್ದು,ಗಾಯಾಳುವನ್ನು ಕೂಡಲೇ ಚಿಂತಾಮಣಿಯ ಸಾರ್ವ ಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳು ಚಿಂತಾಮಣಿ ಮೂಲಕ ಮರಗಮಲ್ಲಾಗೆ ಹೋಗುತ್ತಿದ್ದ ಎನ್ನಲಾಗಿದೆ.

ಖಾಸಗಿ ಬಸ್ ಹಿಂಬದಿಗೆ ಬೈಕ್ ಡಿಕ್ಕಿ ಸವಾರನಿಗೆ ಗಾಯ

-

Profile
Ashok Nayak May 16, 2026 10:43 PM

ಚಿಂತಾಮಣಿ: ಕೋಲಾರ ಸಮೀಪದ ನರಸಾಪುರ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ಖಾಸಗಿ ಬಸ್ಸಿನ ಹಿಂಭಾಗಕ್ಕೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಜೆ ಸುಮಾರು 4-30ರ ಸಮಯದಲ್ಲಿ ಚಿಂತಾಮಣಿ-ಮುರಗಮಲ್ಲಾ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಗಾಯಗೊಂಡ ಸವಾರನನ್ನು ಶಿಡ್ಲಘಟ್ಟ ತಾಲ್ಲೂಕಿನ ಅಜಾದ್ ನಗರದ ನಿವಾಸಿ 27 ವರ್ಷದ ಅತೀಕ್ ಪಾಷಾ ಎಂದು ಗುರುಸಿಲಾಗಿದ್ದು,ಗಾಯಾಳುವನ್ನು ಕೂಡಲೇ ಚಿಂತಾಮಣಿಯ ಸಾರ್ವ ಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳು ಚಿಂತಾಮಣಿ ಮೂಲಕ ಮರಗಮಲ್ಲಾಗೆ ಹೋಗುತ್ತಿದ್ದ ಎನ್ನಲಾಗಿದೆ. 

ಇದನ್ನೂ ಓದಿ: Chinthamani Crime: ಗುರುಭವನದ ಬಳಿ ಯುವಕನ ಮೇಲೆ ಹಲ್ಲೆ: ಹಣಕ್ಕಾಗಿ ಬೆದರಿಕೆ, ಇಬ್ಬರು ವಶಕ್ಕೆ

ಬಸ್ ಸಹ ಚಿಂತಾಮಣಿಯಿಂದ ಮುರಗಮಲ್ಲಾ ಕಡೆ ಹೋಗುತ್ತಿದ್ದು, ಕಾಗತಿ ಗ್ರಾಮದ ಬಳಿ ಬಸ್ ಚಾಲಕ ಕಂಪನಿಯ ನೌಕರರನ್ನು ನಿಲ್ಲಿಸಲು ಹಠಾತ್ತನೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ, ಅತಿ ವೇಗವಾಗಿ ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ಬಸ್ಸಿನ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಡಿಕ್ಕಿಯ ರಭಸಕ್ಕೆ ಬೈಕ್ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು,ಸವಾರನ ತಲೆ ಮತ್ತು ಕೈಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣವೇ ಧಾವಿಸಿ, ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿ ದ್ದಾರೆ.