MLA Pooja Pal: ನನ್ನ ಗಂಡನ ಸಾಯಿಸಿದ ಹಂತಕನನ್ನು ಕೊಂದವರು ಯೋಗಿ... ಯುಪಿ ಸಿಎಂನನ್ನು ಹಾಡಿ ಹೊಗಳಿದ ಎಸ್‌ಪಿ ಶಾಸಕಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಗಂಡನನ್ನು ಕೊಂದವರಿಗೆ ಶಿಕ್ಷೆ ನೀಡಿ ತಮಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ. ಅಪರಾಧಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದರು ಎಂದು ವಿಧಾನ ಸಭೆಯಲ್ಲಿ ಹೇಳಿದ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ ಅವರನ್ನು ಸಮಾಜವಾದಿ ಪಕ್ಷದಿಂದ ಉಚ್ಛಾಟಿಸಲಾಗಿದೆ. ಈ ಕುರಿತು ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಆದೇಶ ಹೊರಡಿಸಿದ್ದಾರೆ.


ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಅವರನ್ನು ಹೊಗಳಿದ ಕೆಲವೇ ಗಂಟೆಗಳಲ್ಲಿ ಸಮಾಜವಾದಿ ಪಕ್ಷದ ಶಾಸಕಿ ( Samajwadi Party MLA ) ಪೂಜಾ ಪಾಲ್ (Pooja Pal) ಅವರ ವಿರುದ್ಧ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಶಾಸಕಿಯ ಅಶಿಸ್ತಿನ ವರ್ತನೆ ಹಾಗೂ ಪಕ್ಷ ವಿರೋಧಿ ಚಟುವಟಿಕೆಯನ್ನು ಉಲ್ಲೇಖಿಸಿ ಎಸ್‌ಪಿ (SP) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅವರನ್ನು ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ. ಗಂಡನ ಹತ್ಯೆ ಮಾಡಿದವರಿಗೆ ಶಿಕ್ಷೆ ನೀಡಿರುವುದಕ್ಕೆ ಪೂಜಾ ಪಾಲ್ ಅವರು ಆದಿತ್ಯನಾಥ್ ಅವರನ್ನು ಹೊಗಳಿದ್ದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ. ಅಪರಾಧಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದರು ಎಂದು ವಿಧಾನ ಸಭೆಯಲ್ಲಿ ಹೇಳಿದ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ ಅವರನ್ನು ಶ್ಲಾಘಿಸಿದರು. ಇದಾದ ಕೆಲವು ಗಂಟೆಗಳ ಬಳಿಕ ಸಮಾಜವಾದಿ ಪಕ್ಷದಿಂದ ಅವರನ್ನು ಉಚ್ಛಾಟಿಸಲಾಗಿದೆ.
ಶಾಸಕಿ ಹೇಳಿದ್ದೇನು?
ನನ್ನ ಗಂಡನನ್ನು ಕೊಂದ ಹಂತಕನನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾಧಿ ಮಾಡಿದರು. ಪ್ರಯಾಗ್‌ರಾಜ್‌ನಲ್ಲಿ ನನ್ನಂತಹ ಅನೇಕ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ. ಇದು ಅತಿಕ್ ಅಹ್ಮದ್‌ನಂತಹ ಅಪರಾಧಿಗಳ ಹತ್ಯೆಗೆ ಕಾರಣವಾಯಿತು. ನನ್ನ ಅಳಲನ್ನು ಬೇರೆ ಯಾರೂ ಕೇಳದಿದ್ದಾಗ ನನಗೆ ನ್ಯಾಯ ನೀಡಿದ್ದಕ್ಕಾಗಿ ನಾನು ಮುಖ್ಯಮಂತ್ರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಸಮಾಜವಾದಿ ಪಕ್ಷದ ಪೂಜಾ ಪಾಲ್ ತಿಳಿಸಿದ್ದರು.
ಯೋಗಿ ಆದಿತ್ಯನಾಥ್ ಅವರ ಶೂನ್ಯ ಸಹಿಷ್ಣುತೆ ನೀತಿಗಳನ್ನು ಸಾರ್ವಜನಿಕವಾಗಿ ಹೊಗಳಿದ ಪೂಜಾ ಪಾಲ್ ಅವರನ್ನು ತಕ್ಷಣವೇ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಉಚ್ಚಾಟನೆಗೆ ಕಾರಣ
ಈ ಕುರಿತು ಆದೇಶ ಪತ್ರ ಹೊರಡಿಸಿದ ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಆಗಸ್ಟ್ 14ರಂದು ಬಿಡುಗಡೆ ಮಾಡಲಾದ ಅಧಿಕೃತ ಉಚ್ಚಾಟನಾ ಪತ್ರದಲ್ಲಿ ಅವರ ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಗಂಭೀರ ಅಶಿಸ್ತಿನ ಬಗ್ಗೆ ಉಲ್ಲೇಖಿಸಲಾಗಿದೆ. ಈ ಹಿಂದೆಯೂ ಅವರಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ಅವರು ಯೋಗಿ ಅವರನ್ನು ಹೊಗಳುವುದನ್ನು ನಿಲ್ಲಿಸಲಿಲ್ಲ. ಇದು ಪಕ್ಷಕ್ಕೆ ಗಣನೀಯ ಹಾನಿಯನ್ನುಂಟು ಮಾಡಿತು. ಹೀಗಾಗಿ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಮತ್ತು ಇನ್ನು ಮುಂದೆ ಯಾವುದೇ ಎಸ್‌ಪಿ ಕಾರ್ಯಕ್ರಮಗಳು ಅಥವಾ ಸಭೆಗಳಿಗೆ ಆಹ್ವಾನಿಸಲಾಗುವುದಿಲ್ಲ ಎಂದುಪಕ್ಷ ಸ್ಪಷ್ಟಪಡಿಸಿದೆ.
ಪಕ್ಷದಿಂದ ಉಚ್ಚಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾ ಪಾಲ್, ಬಹುಶಃ ನನಗಿಂತ ಹೆಚ್ಚು ಚಿಂತಿತರಾಗಿರುವ ಪ್ರಯಾಗ್‌ರಾಜ್‌ನ ಮಹಿಳೆಯರನ್ನು ನೀವು ಕೇಳಲು ಸಾಧ್ಯವಾಗದಿರಬಹುದು. ಆದರೆ ನಾನು ಅವರ ಧ್ವನಿಯಾಗಿದ್ದೇನೆ. ಪ್ರೀತಿಪಾತ್ರರನ್ನು ಕಳೆದುಕೊಂಡ ತಾಯಂದಿರು ಮತ್ತು ಸಹೋದರಿಯರಿಗಾಗಿ ಮಾತನಾಡಲು ನಾನು ಆಯ್ಕೆಯಾಗಿದ್ದೇನೆ. ಮುಖ್ಯಮಂತ್ರಿಯವರು ಅತಿಕ್ ಅಹ್ಮದ್‌ನಿಂದ ಪೀಡಿತರಾದ ಎಲ್ಲರಿಗೂ ನ್ಯಾಯ ಒದಗಿಸಿದ್ದಾರೆ ಎಂದರು.
ನಾನು ಪಕ್ಷದಲ್ಲಿದ್ದಾಗ ಮೊದಲ ದಿನದಿಂದಲೂ ಇದನ್ನೇ ಹೇಳುತ್ತಿದ್ದೇನೆ. ಇಂದಿಗೂ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನಾನು ನಂತರ ಶಾಸಕನಾದೆ. ಆದರೆ ನಾನು ಮೊದಲು ಬಲಿಪಶು ಮಹಿಳೆ, ಹೆಂಡತಿ. ನಾನು ಕೂಡ ಹಿಂದುಳಿದ ಸಮುದಾಯಕ್ಕೆ ಸೇರಿದವಳು. ನನ್ನ ಪತಿ ಹಗಲಿನಲ್ಲಿ ಕೊಲ್ಲಲ್ಪಟ್ಟರು. ಆಗ ನಾನು ನವವಿವಾಹಿತೆ. ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Actor Darshan: ಇದ್ರೆ 'ಜೈಲಲ್ಲಿ' ನೆಮ್ದಿಯಾಗ್ ಇರ್ಬೇಕ್; ದರ್ಶನ್ ಬೇಲ್ ಕ್ಯಾನ್ಸಲ್ ಆಗುತ್ತಿದ್ದಂತೆ ಫುಲ್ ಟ್ರೋಲ್
ಪೂಜಾ ಅವರ ಹೇಳಿಕೆಗಳು ಸಮಾಜವಾದಿ ಪಕ್ಷದೊಳಗೆ ಬೇರೆಬೇರೆ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಸಚೇತಕ ಕಮಲ್ ಅಖ್ತರ್, ಇದು ಅವರ ವೈಯಕ್ತಿಕ ವಿಷಯ. ಪಕ್ಷದೊಂದಿಗೆ ಭಿನ್ನಾಭಿಪ್ರಾಯವಿದ್ದರೆ ಅವರು ಪಕ್ಷದಿಂದ ಹೊರಹೋಗಬಹುದಿತ್ತು ಎಂದು ಹೇಳಿದರು. ಯುಪಿ ಸಚಿವ ಜೆಪಿಎಸ್ ರಾಥೋಡ್ ಪ್ರತಿಕ್ರಿಯಿಸಿ ಪೂಜಾ ಪಾಲ್ ಅವರ ನೋವನ್ನು ಬಹಳ ವರ್ಷಗಳ ಬಳಿಕ ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ.