Nainar Nagendran: ತಮಿಳುನಾಡು ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ನೈನಾರ್ ನಾಗೇಂದ್ರನ್ ಯಾರು...? ಹಿನ್ನಲೆ ಏನು..?
Nainar Nagendran: ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ತಮಿಳುನಾಡು ಬಿಜೆಪಿಯ 13ನೇ ಅಧ್ಯಕ್ಷರಾಗಿ ಆಯ್ಕೆಯಾದ್ದಾರೆ. ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ನಾಗೇಂದ್ರನ್ ಒಬ್ಬರೇ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅಣ್ಣಾಮಲೈ, ಎಲ್.ಮುರುಗನ್ ಸೇರಿದಂತೆ ಹಲವು ನಾಯಕರು ನಾಗೇಂದ್ರನ್ ಹೆಸರನ್ನು ಸೂಚಿಸಿದ್ದರು. ಈಗ ಅಂತಿಮವಾಗಿ ನೈನಾರ್ ನಾಗೇಂದ್ರನ್ ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿ ನೇಮಿಸಲಾಗಿದ್ದು, ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ನೈನಾರ್ ನಾಗೇಂದ್ರನ್

ಚೆನ್ನೈ: ಸದ್ಯ ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆ ಮೇಲೆ ಎಲ್ಲಾರು ಕಣ್ಣಿಟ್ಟಿದ್ದು, ತೆರೆಮರೆಯಲ್ಲಿ ಸಾಕಷ್ಟು ತೀಕಾಟಗಳು, ಹೊಯ್ದಾಟಗಳು ನಡೆಯುತ್ತಲಿವೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಕೆ. ಅಣ್ಣಾಮಲೈ(K. Annamalai) ರಾಜೀನಾಮೆ(Resignation) ನೀಡಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಹಾಕಿದ್ದು, ತಮಿಳುನಾಡಿನಲ್ಲಿ(Tamil Nadu) ಬಿಜೆಪಿ(BJP)ಗೆ ಉತ್ತಮ ಮನ್ನಣೆ ತಂದುಕೊಡುವ ಸಲುವಾಗಿ ಶ್ರಮಿಸಿದ ಅಣ್ಣಾಮಲೈ ರಾಜೀನಾಮೆ ನೀಡಿರುವುದು ನುಂಗಲಾರದ ತುತ್ತಾಗಿ ಪರಿಣಾಮಿಸಿದ್ದು, ಪಕ್ಷಕ್ಕೆ ಸಂಪೂರ್ಣ ನಿಷ್ಠೆಯನ್ನು ವ್ಯಕ್ತಪಡಿಸಿದ್ದ ಇವರು ಅಧ್ಯಕ್ಷ ಸ್ಥಾನ ತೊರೆದಿರುವುದು ಪಕ್ಷದ ಯುವ ಕಾರ್ಯಕರ್ತರಿಗೆ ಬೇಸವನ್ನುಂಟು ಮಾಡಿದೆ. ಅಲ್ಲದೇ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ಎಐಎಡಿಎಂಕೆ ಮಾತು ಕೇಳಿ ಅಣ್ಣಾಮಲೈ ಅವರನ್ನು ಪಕ್ಷದ ವರಿಷ್ಠರು ಕೈ ಬಿಟ್ಟರೇ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಈ ಎಲ್ಲಾ ಗೋಜಲು ಗೊಂದಲಗಳ ನಡುವೆಯೇ ಬಿಜೆಪಿ ತಮಿಳುನಾಡು ಘಟಕದ ಹೊಸ ರಾಜ್ಯಾಧ್ಯಕ್ಷ(President of The Party)ರಾಗಿ ನೈನಾರ್ ನಾಗೇಂದ್ರನ್(Nainar Nagendran) ಅವರು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ತಿರುನಲ್ವೇಲಿಯ ಬಿಜೆಪಿ ಶಾಸಕರಾಗಿರುವ ನೈನಾರ್ ನಾಗೇಂದ್ರನ್ ಅವರು ಎಐಎಡಿಎಂಕೆ(AIADMK)ಯಲ್ಲಿ ರಾಜಕೀಯ ಪಕ್ಷದವರಾಗಿದ್ದಾರೆ.
ಹೌದು ತಮಿಳುನಾಡು ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ತಿರುನಲ್ವೇಲಿ ಶಾಸಕ ನೈನಾರ್ ನಾಗೇಂದ್ರನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ಅಧಿಕಾವಧಿ ಮುಗಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಬಿಜೆಪಿ ಹಿರಿಯ ಶಾಸಕ ನೈನಾರ್ ನಾಗೇಂದ್ರನ್ ಅವರನ್ನು ನೇಮಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನೈನಾರ್ ನಾಗೇಂದ್ರನ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕೆ. ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೈನಾರ್ ನಾಗೇಂದ್ರನ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಬಿಜೆಪಿಯ ಇತರ ನಾಯಕರು ಅದನ್ನು ಅನುಮೋದಿಸಿದರು. ನೈನಾರ್ ನಾಗೇಂದ್ರನ್ ಅವರು ತಮಿಳುನಾಡು ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದೆ.
ಇತ್ತೀಚಿಗೆ ಅಣ್ಣಾಮಲೈ ಅವರು ತಾವು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ರೇಸ್ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದರಿಂದ ಈ ಹುದ್ದೆಗೆ ವನತಿ ಶ್ರೀನಿವಾಸನ್ ಮತ್ತು ತಮಿಳಿಸೈ ಸೌಂದರರಾಜನ್ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ ಅಂತಿಮವಾಗಿ ನಾಗೇಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ.
ನೈನಾರ್ ನಾಗೇಂದ್ರನ್ ಹಿನ್ನಲೆ ಏನು?
ತಮಿಳುನಾಡು ರಾಜ್ಯದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿರುವ ನೈನಾರ್ ನಾಗೇಂದ್ರನ್ 2001 ರಿಂದ 2006 ರವರೆಗೆ ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದರು. ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷದ ಮೂಲಕ ರಾಜಕೀಯಕ್ಕೆ ಧುಮುಕಿದ ನಾಗೇಂದ್ರನ್, ಮೊದ,ಲಿಗೆ ತಿರುನಲ್ವೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಅಭೂತ ಪೂರ್ವ ಜಗ ಗಳಿಸಿ ಶಾಸಕ ಪಟ್ಟವನ್ನು ಅಲಂಕರಿಸಿದ್ದರು. ಇದರೊಂದಿಗೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ 2001 ರಿಂದ 2006 ರವರೆಗೆ ಕ್ಯಾಬಿನೆಟ್ ಸಚಿವರಾಗಿ, ವಿದ್ಯುತ್, ಕೈಗಾರಿಕೆ ಮತ್ತು ಸಾರಿಗೆ ಸಚಿವರಾಗಿ ನಾಗೇಂದ್ರನ್ ಕಾರ್ಯ ನಿರ್ವಹಿಸಿದ್ದಾರೆ
ಆದ್ರೆ 2011 ರಲ್ಲಿ ಮತ್ತೇ ಅಧಿಕಾರಕ್ಕೆ ಬಂದ ಎಐಎಡಿಎಂಕೆಯಿಂದ ನಾಗೇಂದ್ರನ್ ಅವರನ್ನು ಕೈ ಬಿಡಲಾಯಿತು, ಇದರಿಂದ ಬೇಸರಗೊಂಡಿದ್ದ, ಜಯಲಲಿತಾ ಮರಣದ ಬೆನ್ನಿಗೆ ಅಂದ್ರೆ 2017 ರಲ್ಲಿ ಅವರು ಬಿಜೆಪಿ ಪಕ್ಷವನ್ನು ಸೇರಿದರು. ಬಿಜೆಪಿಗೆ ಬಂದ ನಾಗೇಂದ್ರನ್ ತಿರುನೆಲ್ವೇಲಿ ಕ್ಷೇತ್ರದಿಂದ 2021 ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದರು.ಇದರ ಬೆನ್ನಲ್ಲೇ ತಮಿಳುನಾಡು ವಿಧಾನಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಕಗೊಂಡರು. ಇನ್ನು 2019 ಮತ್ತು 2024 ರಲ್ಲಿ ರಾಮನಾಥಪುರಂ ಮತ್ತು ತಿರುನೆಲ್ವೇಲಿ ಕ್ಷೇತ್ರಗಳಿಂದ ಲೋಕಸಭಾ ಚುನಾವಣೆಗೆ ಧುಮ್ಮುಕಿದ್ದರು. ಆದ್ರೆ ವಿಜಯಲಕ್ಷ್ಮೀ ಅವರಿಗೆ ಒಲಿಯಲಿಲ್ಲ.