ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಬರಿ ಮಸೀದಿ ಬಳಿಕ ಮುರ್ಷಿದಾಬಾದ್ ರಾಮ ಮಂದಿರಕ್ಕೆ ಬಿಜೆಪಿಯಿಂದ ಭೂಮಿ ಪೂಜೆ

ಪಕ್ಷದಿಂದ ಅಮಾನತುಗೊಂಡಿದ್ದ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಶನಿವಾರ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಬಿಜೆಪಿ ನಾಯಕರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಇದು ಈಗ ರಾಜಕೀಯ ಪಕ್ಷಗಳ ನಾಯಕರ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಮುರ್ಷಿದಾಬಾದ್ ರಾಮ ಮಂದಿರಕ್ಕೆ ಭೂಮಿ ಪೂಜೆ

(ಸಂಗ್ರಹ ಚಿತ್ರ) -

ಮುರ್ಷಿದಾಬಾದ್‌: ತೃಣಮೂಲ ಕಾಂಗ್ರೆಸ್ ನಿಂದ (Trinamool Congress) ಅಮಾನತುಗೊಂಡಿದ್ದ ಟಿಎಂಸಿ ಶಾಸಕ (TMC mla) ಹುಮಾಯೂನ್ ಕಬೀರ್ (MLA Humayun Kabir) ಶನಿವಾರ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಗೆ (Babri Masjid) ಶಿಲಾನ್ಯಾಸ ನೆರವೇರಿಸಿದರು. ಇದರ ಬಳಿಕ ಬಿಜೆಪಿ ನಾಯಕರು ಮುರ್ಷಿದಾಬಾದ್ ರಾಮ ಮಂದಿರಕ್ಕೆ (Murshidabad Ram Temple) ಭೂಮಿ ಪೂಜೆ ನೆರವೇರಿಸಿದ್ದಾರೆ. ಇದು ಈಗ ರಾಜಕೀಯ ನಾಯಕರ ನಡುವೆ ವಾದ ವಿವಾದಕ್ಕೆ (Babri Masjid Row) ಕಾರಣವಾಗಿದೆ. ಬಿಜೆಪಿ ನಾಯಕ ಸಖರೋವ್ ಸರ್ಕಾರ್ ಮತ್ತು ಅವರ ಪಕ್ಷದ ವಿಭಾಗವು ಶನಿವಾರ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಪಕ್ಷ ವಿರೋಧಿ ಹೇಳಿಕೆ ನೀಡಿ ಈ ತಿಂಗಳ ಆರಂಭದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಹೊರಹಾಕಲ್ಪಟ್ಟ ಶಾಸಕ ಹುಮಾಯೂನ್ ಕಬೀರ್ ಶನಿವಾರ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಅಯೋಧ್ಯೆಯ ರಾಮ ಲಾಲಾ ದೇವಾಲಯದ ಪ್ರತಿಕೃತಿ ಸ್ಥಾಪನೆಗೆ ಭೂಮಿ ಪೂಜೆ ಮತ್ತು ಶಿಲಾ ಪ್ರತಿಷ್ಠಾಪನೆ ನೆರವೇರಿಸಿದರು.

ಕಿರ್ಗಿಸ್ತಾನದಲ್ಲಿ ಸಿಲುಕಿರುವ ಭಾರತದ 12 ಕಾರ್ಮಿಕರ ಮೇಲೆ ಶೋಷಣೆ; ಸರ್ಕಾರದ ಮೊರೆ ಹೋದ ಕುಟುಂಬಸ್ಥರು

ಬಳಿಕ ಮಾತನಾಡಿದ ಬಿಜೆಪಿ ನಾಯಕ ಸಖರೋವ್ ಸರ್ಕಾರ್, ಬೆಹ್ರಾಂಪೋರ್‌ನಲ್ಲಿ ಮುರ್ಷಿದಾಬಾದ್ ರಾಮ ಮಂದಿರ ಸ್ಥಾಪನೆಗೆ ಎಲ್ಲಾ ವಿಧಿವಿಧಾನಗಳನ್ನು ನಾವು ನಡೆಸುತ್ತೇವೆ. ಅಯೋಧ್ಯೆಯ ರಾಮ ಲಾಲಾ ದೇವಾಲಯದ ಪ್ರತಿಕೃತಿಯನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ ಮತ್ತು ರಾಮ ಮಂದಿರ ಚಾರಿಟಬಲ್ ಟ್ರಸ್ಟ್ ಅನ್ನು ರಚಿಸುವ ಮೂಲಕ ಶಿಲಾ ಪ್ರತಿಷ್ಠೆಯನ್ನು ನಡೆಸಿದ್ದೇವೆ. ಬೆಹ್ರಾಂಪೋರ್‌ನಲ್ಲಿ ಈ ದೇವಾಲಯವು ತುಂಬಾ ದೊಡ್ಡದಾಗಿರುತ್ತದೆ. ಇದು ಆಸ್ಪತ್ರೆ ಮತ್ತು ಶಾಲೆಯನ್ನು ಸಹ ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.



ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಶನಿವಾರ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಯಾರು ಬೇಕಾದರೂ ದೇವಸ್ಥಾನ ಅಥವಾ ಚರ್ಚ್ ಅನ್ನು ನಿರ್ಮಿಸಬಹುದು. ಅಸಂವಿಧಾನಿಕವಾಗಿ ನಾನು ಏನನ್ನೂ ಮಾಡುತ್ತಿಲ್ಲ ಎಂದು ತಿಳಿಸಿದರು.

ಅಮಾನತುಗೊಂಡ ಟಿಎಂಸಿ ಶಾಸಕನಿಂದ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಗೆ ಶಿಲಾನ್ಯಾಸ

ಮುರ್ಷಿದಾಬಾದ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಕಬೀರ್, ನಾನು ಸಂವಿಧಾನಬಾಹಿರವಾಗಿ ಏನನ್ನೂ ಮಾಡುತ್ತಿಲ್ಲ. ಯಾರಾದರೂ ದೇವಸ್ಥಾನ ಕಟ್ಟಬಹುದು, ಯಾರಾದರೂ ಚರ್ಚ್ ಕಟ್ಟಬಹುದು. ನಾನು ಮಸೀದಿ ಕಟ್ಟುತ್ತೇನೆ. ಬಾಬರಿ ಮಸೀದಿ ಕಟ್ಟ ಬಾರದು ಎಂದು ಎಲ್ಲಿಯೂ ಬರೆಯಲಾಗಿಲ್ಲ. ಯಾವುದೇ ಬೆಲೆ ತೆತ್ತಾದರೂ ಸರಿಯೇ ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಿಸಲಾಗುವುದು ಎಂದು ಹೇಳಿದರು.

ತೃಣಮೂಲ ಕಾಂಗ್ರೆಸ್ ನಿಂದ ಅಮಾನತುಗೊಂಡ ಕಬೀರ್ ಅವರು ಡಿಸೆಂಬರ್ 22 ರಂದು ತಮ್ಮದೇ ಆದ ಪಕ್ಷವನ್ನು ಘೋಷಿಸುವುದಾಗಿ ಹೇಳಿದ್ದಾರೆ.