ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Astro Tips: ಬೆಳಗ್ಗೆ ಈ ಶುಭ ಸಂಕೇತಗಳನ್ನು ನೋಡಿದರೆ ಲಕ್ಷ್ಮೀ ದೇವಿಯ ಕೃಪೆ ಸಿಗೋದು ಪಕ್ಕಾ

ಹಿಂದೂ ಸಂಪ್ರದಾಯದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕೆಲವು ಶುಭ ವಸ್ತುಗಳು ಮತ್ತು ಸಂಕೇತಗಳನ್ನು ನೋಡುವುದು ದಿನವಿಡೀ ಸಕಾರಾತ್ಮಕತೆ, ಯಶಸ್ಸು ಹಾಗೂ ಸಮೃದ್ಧಿಯನ್ನು ತರುತ್ತದೆ ಎನ್ನಲಾಗಿದೆ. ಅಂಗೈ ದರ್ಶನ, ತಾಯಿ-ತಂದೆಯ ಮುಖ, ಹಸುವಿನ ದರ್ಶನ, ಹಕ್ಕಿಗಳ ಕಲರವ, ದೇವಾಲಯದ ಗಂಟೆ ನಾದ ಮತ್ತು ಹಾಲು-ಮೊಸರಿನಂತಹ ವಸ್ತುಗಳು ಲಕ್ಷ್ಮೀ ದೇವಿಯ ಕೃಪೆಯ ಸಂಕೇತಗಳೆಂದು ಪರಿಗಣಿಸಲಾಗುತ್ತದೆ.

ಎದ್ದಾಕ್ಷಣ ಈ ಶಬ್ದ ಕೇಳಿದರೆ ಶುಭ ಸೂಚನೆ

hands vastu -

Profile
Sushmitha Jain Jun 1, 2026 9:54 AM

ಬೆಂಗಳೂರು, ಜೂ. 1: ಹಿಂದೂ ಧರ್ಮ ಮತ್ತು ಶಾಸ್ತ್ರಗಳ ಪ್ರಕಾರ, ಬೆಳಗಿನ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನಮ್ಮ ಮನಸ್ಸು ಮತ್ತು ದೇಹ ಎರಡೂ ಶುದ್ಧವಾಗಿರುತ್ತವೆ. ಆದ್ದರಿಂದ ನಾವು ದಿನದ ಆರಂಭದಲ್ಲಿ ನೋಡುವುದು, ಕೇಳುವುದು ಹಾಗೂ ಯೋಚಿಸುವುದು ನಮ್ಮ ದಿನದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಕೆಲವು ಶುಭ ಸಂಕೇತಗಳನ್ನು ಬೆಳಿಗ್ಗೆ ನೋಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಲಭಿಸಿ, ದಿನವಿಡೀ ಸಕಾರಾತ್ಮಕ ಶಕ್ತಿ ಮತ್ತು ಯಶಸ್ಸು ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಗಳು (Astrology) ಹೇಳುತ್ತವೆ.

ಹಾಗಾದ್ರೆ ಬನ್ನಿ ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ (Astro Tips) ಉಲ್ಲೇಖವಾಗಿರುವ ಆ ವಸ್ತುಗಳು ಯಾವುವು? ಅವುಗಳನ್ನು ನೋಡುವುದರಿಂದ ಎಷ್ಟೆಲ್ಲ ಪ್ರಯೋಜನಗಳು ಇವೆ? ಎಂಬುದನ್ನು ತಿಳಿದುಕೊಳ್ಳೋಣ.

ಆತ್ಮವಿಶ್ವಾಸ ಹೆಚ್ಚಿಸುವ ಅಂಗೈ

ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ನಿಮ್ಮ ಎರಡೂ ಕೈಗಳ ಅಂಗೈಗಳನ್ನು ಒಟ್ಟಿಗೆ ಸೇರಿಸಿ ನೋಡುವುದು ಅತ್ಯಂತ ಶುಭ. ಅಂಗೈಗಳಲ್ಲಿ ಲಕ್ಷ್ಮೀ, ಸರಸ್ವತಿ ಮತ್ತು ಗೋವಿಂದನ ವಾಸವಿದೆ ಎನ್ನುವ ನಂಬಿಕೆ ಇದೆ. ಇದರಿಂದ ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ, ದಿನದ ಕಾರ್ಯಗಳಿಗೆ ಉತ್ತಮ ಆರಂಭ ಸಿಗುತ್ತದೆ.

ಯಶಸ್ಸು ತಂದುಕೊಡುವ ಹೆತ್ತವರು

ಅದರ ನಂತರ ತಾಯಿ ಅಥವಾ ತಂದೆಯ ಮುಖವನ್ನು ನೋಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಹಿರಿಯರ ಆಶೀರ್ವಾದವು ಜೀವನದಲ್ಲಿ ಯಶಸ್ಸು ಮತ್ತು ಸಂತೋಷವನ್ನು ತರಲು ಸಹಾಯಕ. ಅವರು ನಿಮ್ಮ ಜತೆ ಇಲ್ಲದಿದ್ದರೆ ದೇವರ ಚಿತ್ರ ಅಥವಾ ದೇವರ ಆಶೀರ್ವಾದದ ಭಂಗಿಯಲ್ಲಿರುವ ಚಿತ್ರವನ್ನು ನೋಡಿ ದಿನವನ್ನು ಆರಂಭಿಸಬಹುದು.

ಕಾಮಧೇನು

ಬೆಳಗ್ಗೆ ಮನೆಯ ಬಳಿ ಕಾಮಧೇನು ಕಾಣುವುದು ಅಥವಾ ಹಸುವಿನ ದರ್ಶನವಾಗುವುದು ಲಕ್ಷ್ಮೀ ದೇವಿಯ ಕೃಪೆಯ ಸಂಕೇತವೆಂದು ನಂಬಲಾಗಿದೆ. ಹಸುವನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದ್ದು, ಅದರ ದರ್ಶನದಿಂದ ಮನೆಯಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎನ್ನಲಾಗುತ್ತದೆ.

ಹಕ್ಕಿಗಳ ಚಿಲಿಪಿಲಿ ಧ್ವನಿ

ಅದೇ ರೀತಿ, ಬೆಳಗಿನ ಜಾವ ಹಕ್ಕಿಗಳ ಚಿಲಿಪಿಲಿ ಧ್ವನಿ ಕೇಳುವುದು ಅಥವಾ ಸುಂದರವಾದ ಪಕ್ಷಿಗಳನ್ನು ನೋಡುವುದು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಇದು ಹೊಸ ಅವಕಾಶಗಳು, ಸಂತೋಷದ ಸುದ್ದಿಗಳು ಹಾಗೂ ದಿನವಿಡೀ ಉತ್ತಮ ಬೆಳವಣಿಗೆಗಳ ಸೂಚಕ.

ಗುರುವಾರ ಈ ಒಂದು ಪರಿಹಾರ ಮಾಡಿದರೆ ಸಾಕು ಪರಿಹಾರ ಆಗಲಿದೆ ಹಣಕಾಸಿನ ಸಮಸ್ಯೆ

ದೇವಾಲಯದ ಗಂಟೆ

ದೇವಾಲಯದ ಗಂಟೆಯ ಧ್ವನಿ, ಶಂಖನಾದ ಅಥವಾ ಮಂತ್ರೋಚ್ಚಾರಣೆ ಬೆಳಿಗ್ಗೆ ಕಿವಿಗೆ ಬಿದ್ದರೆ ಅದು ದೇವರ ಆಶೀರ್ವಾದದ ಸಂಕೇತವೆಂದು ನಂಬಲಾಗಿದೆ. ಇದು ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಗುರಿಯತ್ತ ದೃಢವಾಗಿ ಸಾಗುವ ಪ್ರೇರಣೆಯನ್ನು ನೀಡುತ್ತದೆ.

ಹಾಲು ಉತ್ಪನ್ನಗಳು

ಬೆಳಿಗ್ಗೆ ಹಾಲು, ಮೊಸರು, ತುಪ್ಪ ಅಥವಾ ಇವುಗಳಿಂದ ತಯಾರಿಸಿದ ಪದಾರ್ಥಗಳನ್ನು ನೋಡುವುದೂ ಶುಭ. ಇವುಗಳನ್ನು ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತಗಳೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀ ದೇವಿಗೆ ಹಾಲಿನಿಂದ ತಯಾರಿಸಿದ ನೈವೇದ್ಯಗಳು ಪ್ರಿಯವಾಗಿರುವುದರಿಂದ ಇಂತಹ ವಸ್ತುಗಳ ದರ್ಶನವು ಆರ್ಥಿಕ ಅಭಿವೃದ್ಧಿ ಮತ್ತು ಶುಭ ಫಲಗಳ ಸೂಚನೆ.

ಇದಲ್ಲದೆ, ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಅಭ್ಯಾಸ. ಇದು ದೇಹವನ್ನು ಚುರುಕುಗೊಳಿಸಿ, ಮನಸ್ಸನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. ಜತೆಗೆ ದಿನವನ್ನು ಸಕಾರಾತ್ಮಕ ಚಿಂತನೆಗಳೊಂದಿಗೆ ಆರಂಭಿಸಲು ನೆರವಾಗುತ್ತದೆ. ಈ ರೀತಿಯ ಶುಭ ದರ್ಶನಗಳು ಮತ್ತು ಒಳ್ಳೆಯ ಅಭ್ಯಾಸಗಳನ್ನು ಬೆಳಗಿನ ದಿನಚರಿಯಲ್ಲಿ ಅಳವಡಿಸಿಕೊಂಡರೆ ಮನಸ್ಸಿಗೆ ನೆಮ್ಮದಿ, ಜೀವನದಲ್ಲಿ ಉತ್ಸಾಹ ಹಾಗೂ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ ಎನ್ನುವುದು ನಮ್ಮ ಸಂಪ್ರದಾಯಗಳ ನಂಬಿಕೆ.