ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯಲ್ಲಿ ಸ್ಫಟಿಕದ ಮರವನ್ನು ಇಡಬಹುದೆ?

ಮನೆ ಸುಖ, ಶಾಂತಿ, ನೆಮ್ಮದಿಯ ತಾಣವಾಗಬೇಕು ಎನ್ನುವುದು ಎಲ್ಲರ ಉದ್ದೇಶ. ಇದಕ್ಕಾಗಿ ನಾವು ಏನು ಮಾಡಲು ಬೇಕಾದರೂ ಸಿದ್ಧವಾಗುತ್ತೇವೆ. ನಾನಾ ರೀತಿಯ ವಸ್ತುಗಳನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ಇಂತಹ ಒಂದು ವಸ್ತುಗಳಲ್ಲಿ ಸ್ಪಟಿಕದ ಮರವು ಒಂದು. ಯಾರೋ ಹೇಳಿದರೆಂದು ನಾವು ಇದನ್ನು ಮನೆಯಲ್ಲಿ ತಂದಿಡುವುದು ಸರಿಯಲ್ಲ. ಅದರ ಬಗ್ಗೆ ಸಂಪೂರ್ಣ ತಿಳಿದು ತಂದಿಟ್ಟರೆ ಅದರಿಂದ ಸಾಕಷ್ಟು ಲಾಭವಾಗುತ್ತದೆ.

ಸ್ಫಟಿಕದ ಮರ ಮನೆಗೆ ಶುಭವೇ?

ಬೆಂಗಳೂರು: ಯಾರದ್ದೋ ಮನೆಯಲ್ಲಿ (Vastu For home) ಇತ್ತು, ಮಾರ್ಕೆಟ್‌ನಲ್ಲಿ ಸುಂದರವಾಗಿ ಕಾಣುತ್ತಿತ್ತು ಎಂದುಕೊಂಡು ನಾವು ಮನೆಗೆ ಸ್ಫಟಿಕದ ಮರವನ್ನು (Vastu About crystal tree) ತಂದು ಇಡುತ್ತೇವೆ. ಆದರೆ ಇದರ ಶುಭ ಅಶುಭ ಪರಿಣಾಮಗಳ ಬಗ್ಗೆ ಹೆಚ್ಚಿನವರು ತಿಳಿದಿರಲಿಕ್ಕಿಲ್ಲ. ಮನೆಯ ವಾಸ್ತುವನ್ನು ಚೆನ್ನಾಗಿಡಲು ನಾವು ಮನೆಗೆ ತಂದಿಡುವ ವಸ್ತುಗಳಲ್ಲಿ ಅನೇಕ ವಿಷಯಗಳಿರುತ್ತವೆ. ಅವನ್ನೆಲ್ಲ ತಿಳಿದು ತಂದಿಡುವುದರಿಂದ ಮಾತ್ರ ಅವುಗಳ ಸರಿಯಾದ ಪ್ರಯೋಜನವನ್ನು ಪಡೆಯಬಹುದು. ಮನೆಯಲ್ಲಿ ಸ್ಫಟಿಕ ಮರವನ್ನು (crystal tree) ಇಡಬಹುದೇ, ಇಡುವುದಾದರೆ ಅದಕ್ಕೆ ಇರುವ ನಿಯಮಗಳು ಏನು ಎನ್ನುವ ಕುರಿತು ವಾಸ್ತು ತಜ್ಞರಾದ ಪಂಡಿತ್ ಜನ್ಮೇಶ್ ದ್ವಿವೇದಿ ಜಿ ಹೇಳುವುದು ಹೀಗೆ...

ಮನೆಯ ವಾತಾವರಣ ಸಕಾರಾತ್ಮಕವಾಗಿರಬೇಕು, ಮನೆಯ ವಾಸ್ತುವನ್ನು ಚೆನ್ನಾಗಿರಬೇಕು ಎಂದು ನಾವು ನಮ್ಮ ಮನೆಯಲ್ಲಿ ಅನೇಕ ವಸ್ತುಗಳನ್ನು ಇಡುತ್ತೇವೆ. ಅವುಗಳಲ್ಲಿ ಸ್ಫಟಿಕ ಗಿಡ ಕೂಡ ಒಂದು. ಇದನ್ನು ಸ್ಫಟಿಕ ಮರ ಎಂದೂ ಕೂಡ ಕರೆಯಲಾಗುತ್ತದೆ. ಇದು ಕೇವಲ ಅಲಂಕಾರಕ್ಕಾಗಿ ಇಡುವ ಮರವಲ್ಲ. ಇದರ ಹಿಂದೆ ವಾಸ್ತು ಅಂಶಗಳು ಕೂಡ ಅಡಗಿವೆ.

tree1

ಸ್ಫಟಿಕ ಮರವನ್ನು ಏಕೆ ಇಡಬೇಕು?

ಸ್ಫಟಿಕ ಮರವನ್ನು ಪ್ರತಿನಿತ್ಯ ನೋಡುವುದು ಒಳ್ಳಯದು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಅಲ್ಲದೆ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮನೆಯಲ್ಲಿ ಯಾವುದೇ ರೀತಿಯ ಜಗಳ ಅಥವಾ ಉದ್ವಿಗ್ನತೆ ಉಂಟಾಗುವುದಿಲ್ಲ.

ಯಾವ ದಿಕ್ಕಿನಲ್ಲಿ ಇಡಬೇಕು?

ವೃತ್ತಿ ಅಥವಾ ಸಂಪತ್ತಿನಲ್ಲಿ ಪ್ರಗತಿ ಸಾಧಿಸಲು ಬಯಸುವವರಾಗಿದ್ದರೆ ಇದನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಯಾಕೆಂದರೆ ಇದು ಅನೇಕ ಹೊಸ ಅವಕಾಶಗಳನ್ನು ತರುತ್ತದೆ. ಸಂಬಂಧಗಳಲ್ಲಿ ಸಿಹಿ ತರಲು ಬಯಸುವವರು ಇದನ್ನು ಮಲಗುವ ಕೋಣೆ ಅಥವಾ ವಾಸದ ಕೋಣೆಯ ನೈಋತ್ಯ ದಿಕ್ಕಿನಲ್ಲಿ ಇರಿಸಿ. ಇದು ವೈವಾಹಿಕ ಜೀವನದಲ್ಲಿ ಸುಖವನ್ನು ಕೊಡುತ್ತದೆ. ಮನೆಯಲ್ಲಿ ಯಾವುದೇ ಸಮಸ್ಯೆಗಳು ಇದ್ದರೆ ಈ ಮರವನ್ನು ಈಶಾನ್ಯ ಮೂಲೆಯಲ್ಲಿ ನೆಡಿ. ಇದು ಜೀವನದ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಇದನ್ನೂ ಓದಿ: Vastu Tips: ಆರೋಗ್ಯ ಸಮಸ್ಯೆಯನ್ನು ದೂರವಿರಿಸಲು ಇಲ್ಲಿದೆ ಸುಲಭ ಉಪಾಯ

ಸ್ಫಟಿಕ ಮರವನ್ನು ನೆಡುವಾಗ ನೆನಪಿನಲ್ಲಿರಲಿ

ಮನೆಯಲ್ಲಿ ಸ್ಫಟಿಕ ಮರ ಇಡುವ ಸ್ಥಳ ಸ್ವಚ್ಛವಾಗಿರಬೇಕು. ಇದರ ಸುತ್ತಮುತ್ತ ಸ್ವಚ್ಛವಾಗಿರುವಂತೆ ಸದಾ ನೋಡಿಕೊಳ್ಳುವುದು ಬಹುಮುಖ್ಯ. ಆಗ ಮಾತ್ರ ಅದರ ಸಕಾರಾತ್ಮಕ ಶಕ್ತಿ ಮನೆಯನ್ನು ತುಂಬಲು ಸಾಧ್ಯ. ಇನ್ನು ಸ್ಫಟಿಕ ಮರವನ್ನು ಯಾವ ಉದ್ದೇಶಕ್ಕಾಗಿ ಇರಿಸುತ್ತಿದ್ದೀರಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಅದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ. ಇದರಿಂದ ಮನದ ಬಯಕೆ ಈಡೇರುವುದು.