Horoscope Today January 10th: ಇಂದು ಬುಧ-ಚಂದ್ರ ಸಂಗಮ: ಈ ರಾಶಿಯವರ ಮೇಲೆ ಭಾವನಾತ್ಮಕ ಪರಿಣಾಮ
ನಿತ್ಯ ಭವಿಷ್ಯ ಜನವರಿ 10, 2026: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಹಸ್ತ ನಕ್ಷತ್ರದ ಜನವರಿ 10ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು, ಜ. 10: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಹಸ್ತ ನಕ್ಷತ್ರ ಇದ್ದು, ಇದರ ಅಧಿಪತಿ ಚಂದ್ರ ಹಾಗೂ ಈ ರಾಶಿಯ ಅಧಿಪತಿ ಬುಧ. ಹೀಗಾಗಿ ಎಲ್ಲ ರಾಶಿಗೂ ಭಾವನಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಸಾಮಾಜಿಕ ಕೆಲಸಕಾರ್ಯದಲ್ಲಿ ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಡಬೇಕಾಗುತ್ತದೆ. ಅತೀ ಬುದ್ಧಿವಂತಿಕೆಯನ್ನು ತೋರಿಸಲು ಇಂದು ಹೋಗುವುದು ಒಳಿತಲ್ಲ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಹಣಕಾಸಿನ ವಿಚಾರವಾಗಿ ಹೆಚ್ಚು ಯೋಚನೆಗಳು ಬರಬಹುದು. ಹಾಗಾಗಿ ಈ ಬಗ್ಗೆ ಜಾಗೃತರಾಗಿ ಇರಬೇಕಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರು ಮನೆಯ ಜವಾಬ್ದಾರಿಗಳು, ತಾಯಿಯ ವಿಚಾರ, ಆಸ್ತಿ ಪಾಸ್ತಿ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಅತೀ ಉತ್ತಮ ದಿನವಾಗಲಿದೆ. ಸೋಶಿಯಲ್ ಮೀಡಿಯಾ, ಮಾಸ್ ಮೀಡಿಯಾ ಇತ್ಯಾದಿಯಲ್ಲಿ ಇರುವವರಿಗೆ ಉತ್ತಮ ದಿನವಾಗಲಿದೆ.
ಈ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಟ್ಟುಕೊಂಡ್ರೆ ದುಡ್ಡಿನ ಹೊಳೆ ಹರಿಯೋದು ಪಕ್ಕಾ!
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸಂಸಾರದ ತಾಪತ್ರಯಗಳು ಹೆಚ್ಚಿರುತ್ತವೆ. ಈ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಆದರೂ ಕೂಡ ಹೆಚ್ಚಿನ ಸಹಕಾರ ನಿಮಗೆ ಪ್ರಾಪ್ತಿಯಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಗೆ ಚಂದ್ರ ಬರುವುದರಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಹಿಂದಿನ ಎರಡು ಮೂರು ದಿನಗಳ ಇದ್ದ ಸಮಸ್ಯೆ, ನೋವು ಎಲ್ಲವೂ ಪರಿಹಾರವಾಗುತ್ತದೆ.
ತುಲಾ ರಾಶಿ: ತುಲಾ ರಾಶಿಗೆ ಕಷ್ಟದ ದಿನವಾಗಲಿದೆ. ಇಂದು ಯಾವುದೇ ಮುಖ್ಯ ನಿರ್ಧಾರ ಬೇಡ. ಯಾರ ಸಹಕಾರ ನಿಮಗೆ ಪ್ರಾಪ್ತಿಯಾಗುವುದಿಲ್ಲ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು, ಮನಸ್ಸಿಗೆ ನೆಮ್ಮದಿ, ಖುಷಿ ಸಿಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಆದರೂ ಕೂಡ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಲಿದ್ದೀರಿ.
ಮಕರ ರಾಶಿ: ಮಕರ ರಾಶಿಯವರಿಗೆ ಅದೃಷ್ಟದ ದಿನ ಆಗಿದ್ದರೂ ನಾನಾ ರೀತಿಯ ಕ್ಷೇಷ ಉಂಟಾಗಬಹುದು. ಎರಡು ದಿನಗಳ ಬಳಿಕ ಈ ಸಮಸ್ಯೆ ಪರಿಹಾರವಾಗಬಹುದು.
ಕುಂಭರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರ ಇಂದು ಬೇಡ. ಮನಸ್ಸಿಗೆ ಕಿರಿ ಕಿರಿ ಹೆಚ್ಚಾಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಎಲ್ಲ ಕಡೆಯಿಂದಲೂ ಇಷ್ಟಾರ್ಥ ಸಿಗಲಿದ್ದು, ನೆಮ್ಮದಿ ಇರುತ್ತದೆ.