ದಿನ ಭವಿಷ್ಯ, ಜೂನ್ 2, 2026: ಗುರು ಬಲದ ಅದೃಷ್ಟದಿಂದ ಎಲ್ಲ ಕೆಲಸದಲ್ಲೂ ಯಶಸ್ಸು
Horoscope Today June 2nd: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ದ್ವೀತಿಯ ತಿಥಿ, ಅನುರಾಧ ನಕ್ಷತ್ರದ ಜೂನ್ 2ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು, ಜೂ. 2: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ದ್ವಿತೀಯ ತಿಥಿ, ಅನುರಾಧ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಈ ರಾಶಿಯವರು ಮುಖ್ಯವಾದ ವಿಚಾರದಲ್ಲಿ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಆಸ್ತಿ ಪಾಸ್ತಿ ವಿಚಾರವಾಗಿ ಮುನ್ನೆಚ್ಚರಿಕೆ ಇರಲೇಬೇಕು. ಅದೇ ರೀತಿ ಹೊಸ ಮನೆ, ಭೂಮಿ ಖರೀದಿಯಂತಹ ಅವಕಾಶಗಳು ನಿಮಗೆ ಸಿಗಲಿದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ಯಶಸ್ಸು ಸಿಗಲಿದ್ದು, ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಉತ್ತಮ ಫಲ ಗೋಚರವಾಗಲಿದೆ. ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಸೇಲ್ಸ್ ವ್ಯವಹಾರದಲ್ಲಿ ಇರೋರಿಗೂ ಅದೃಷ್ಟ ಒದಗಿ ಬರಲಿದೆ.
ಮಿಥುನ ರಾಶಿ: ಈ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸಿನ ಜತೆಗೆ ಸಂಸಾರದಲ್ಲಿ ನೆಮ್ಮದಿ ಸಿಗಲಿದೆ. ಹಿಂದಿನ ದಿನದಲ್ಲಿ ಕಾಣದಷ್ಟು ಯಶಸ್ಸು ನಿಮ್ಮದಾಗಲಿದೆ. ನಿಮ್ಮ ಮನೆಯವರ ಜತೆ ಇಂದು ಉತ್ತಮ ಸಮಯ ಕಳೆಯಲಿದ್ದೀರಿ. ಧನಾಗಮನದ ಸೂಚನೆ ಕೂಡ ಇದೆ.
ಕಟಕ ರಾಶಿ: ಕಟಕ ರಾಶಿಯವರಲ್ಲಿ ವೈಯಕ್ತಿಕವಾಗಿ ಕೆಲವು ಬದಲಾವಣೆಗಳು ಕಂಡು ಬರುತ್ತವೆ. ನಿಮ್ಮನ್ನು ನೀವೆ ದೊಡ್ಡ ಮಟ್ಟದಲ್ಲಿ ಕೊಂಡ್ಯೊಯಲು ಪ್ರೇರೇಪಿಸುತ್ತೀರಿ. ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತವೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ದಿನ ಕಷ್ಟದಾಗಿರಲಿದೆ. ಯಾರ ಸಹಕಾರ ಕೂಡ ನಿಮಗೆ ಸಿಗದೇ ಇರಬಹುದು. ಮುಖ್ಯವಾದ ಕೆಲವು ವ್ಯವಹಾರದಲ್ಲಿ ಹಾಗೂ ಪಾರ್ಟನರ್ಶಿಪ್ ವ್ಯವಹಾರದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹಣದ ಹರಿವು ಕಡಿಮೆಯಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ಧಿಯಾಗಲಿದ್ದು, ಹಣದ ಹರಿವು ಉತ್ತಮವಾಗಿರಲಿದೆ. ಮುಂದಿನ ಜೀವನಕ್ಕೆ ಹೆಚ್ಚಿನ ಮಾರ್ಗದರ್ಶನಗಳು ಪ್ರಾಪ್ತಿಯಾಗಬಹುದು.
ಮನೆಯಲ್ಲಿ ಬಿದಿರು ಗಿಡ ಇಟ್ಟರೆ ಅದೃಷ್ಟ ಹೆಚ್ಚಳ! ಈ ನಿಯಮ ಪಾಲಿಸಿದರೆ ಮಾತ್ರ
ತುಲಾ ರಾಶಿ: ತುಲಾ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಇದೀಗ ಅನವಶ್ಯಕವಾಗಿ ಕೆಲವೊಂದು ಸಮಸ್ಯೆಯನ್ನು ನೀವು ಎದುರಿಸಬೇಕಾಗಿ ಬರಬಹುದು.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಕಷ್ಟದ ಸಮಯ ಇತ್ತು. ಇದೀಗ ಗುರು ಬಲ ಇರುವುದರಿಂದ ಮದುವೆ, ಮಕ್ಕಳ ಸೌಭಾಗ್ಯ ಒದಗಿ ಬರಬಹುದು. ಅದೇ ರೀತಿ ಸಾಮಾಜಿಕ ಚಟುವಟಿಕೆಯಲ್ಲೂ ಯಶಸ್ಸು ಸಿಗಬಹುದು.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರ ಬೇಡ. ದಾಂಪತ್ಯ, ಪ್ರೇಮ ಪ್ರೀತಿ ವಿಚಾರದಲ್ಲಿ ತೊಂದರೆಗೆ ಕಾಣಿಸಿಕೊಳ್ಳಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು, ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಇತರರ ಜತೆ ಸಾಮರಸ್ಯದಿಂದ ಇರುತ್ತೀರಿ. ಮುಖ್ಯವಾದ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ.
ಕುಂಭ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆಧ್ಯಾತ್ಮಿಕವಾಗಿ ಇಂದು ನಿಮಗೆ ಯಶಸ್ಸು ಸಿಗುತ್ತದೆ. ಕಾರ್ಯಕ್ಷೇತ್ರದಲ್ಲಿ ಲಾಭ ಸಿಗುವಂತಾಗುತ್ತದೆ.
ಮೀನ ರಾಶಿ: ಮೀನ ರಾಶಿಗೆ ಉತ್ತಮ ದಿನವಾಗಲಿದೆ. ಹಿಂದಿನ ದಿನದಲ್ಲಿದ್ದ ನೋವೆಲ್ಲ ಪರಿಹಾರವಾಗುತ್ತದೆ. ಗುರು ಬಲದಿಂದ ಅದೃಷ್ಟದ ದಿನ ನಿಮ್ಮದಾಗಲಿದೆ.