ದಿನ ಭವಿಷ್ಯ, ಸೆಪ್ಟೆಂಬರ್ 9, 2026: ಹೊಸ ಯೋಜನೆಗಳಿಗೆ ಚಾಲನೆ ನೀಡಲು ಉತ್ತಮ ಸಮಯ
Horoscope Today September 9th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆಪಕ್ಷದ, ತ್ರಯೋದಶಿ ತಿಥಿಯ,ಆಶ್ಲೇಷಾ ನಕ್ಷತ್ರದ ಸೆಪ್ಟೆಂಬರ್ 9ನೇ ತಾರೀಕಿನ ಈ ದಿನ ಚಂದ್ರ ಮಕರ ರಾಶಿಯಲ್ಲಿ ಪ್ರವೇಶ ಮಾಡುತ್ತಿದ್ದಾನೆ. ಪ್ರತಿಯೊಂದು ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆತ್ಮವಿಶ್ವಾಸದಿಂದ ಇಂದು ಗೆಲುವು ನಿಮ್ಮದಾಗುತ್ತದೆ. ಕೆಲಸದಲ್ಲಿ ಹೊಸ ಅವಕಾಶ ಸಿಗುತ್ತದೆ. ಆರ್ಥಿಕವಾಗಿಯೂ ಅಭಿವೃದ್ಧಿ ಕಾಣುತ್ತೀರಿ.
ವೃಷಭ ರಾಶಿ: ಕುಟುಂಬದಲ್ಲಿ ಇಂದು ನೆಮ್ಮದಿ, ಸಂತೋಷದ ವಾತಾವರಣ ಇರುತ್ತದೆ. ಆದರೆ ದೂರ ಪ್ರಯಾಣ ಹಾಗೂ ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ.
ಮಿಥುನ ರಾಶಿ: ನಿಮ್ಮ ಮಾತಿನಿಂದಲೇ ಇಂದು ಎಲ್ಲವನ್ನು ನೀವು ಗೆಲ್ಲಬಹುದು. ಹೊಸ ಸ್ನೇಹಿತರ ಪರಿಚಯದಿಂದ ಒಳಿತಾಗುತ್ತದೆ. ಅದೇ ರೀತಿ ವ್ಯಾಪಾರಿಗಳಿಗೆ ಲಾಭದ ದಿನವಾಗಲಿದೆ.
ಕರ್ಕಾಟಕ ರಾಶಿ: ಈ ರಾಶಿಯವರಿಗೆ ಇಂದು ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ನಿರ್ಧಾರ ಕೈಗೊಳ್ಳುವಾಗ ತಾಳ್ಮೆಯಿಂದ ಇದ್ದರೆ ಉತ್ತಮ.
ಸಿಂಹ ರಾಶಿ: ಇಂದು ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ಸಿಗಲಿದ್ದು, ಹೆಚ್ಚಿನ ಗೌರವ, ಪ್ರತಿಷ್ಠೆ ಪ್ರಾಪ್ತಿಯಾಗುತ್ತದೆ. ಕೆಲಸದಲ್ಲಿ ಪ್ರಮೋಷನ್ ಕೂಡ ಸಿಗುತ್ತದೆ.
ಕನ್ಯಾ ರಾಶಿ: ಇಂದು ಹೊಸದಾದ ಜವಾಬ್ದಾರಿಗಳು ಸಿಗಬಹುದು. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲಗಳು ನಿಮಗೆ ಸಿಗಲಿದೆ. ಹಣಕಾಸಿನ ವಿಚಾರದಲ್ಲೂ ಯಶಸ್ಸು ಸಿಗುತ್ತದೆ.
ಮನೆಯಲ್ಲಿ ನೀರಿನ ಟ್ಯಾಂಕ್ ಅನ್ನು ಯಾವ ದಿಕ್ಕಿನಲ್ಲಿಡಬೇಕು?
ತುಲಾ ರಾಶಿ: ಹಣ ಬರುವ ಯೋಗ ಇಂದು ಹೆಚ್ಚಿದೆ. ಅದೇ ರೀತಿ ಬಾಕಿ ಇರುವ ಹಣವು ಇಂದು ವಾಪಸ್ ಬರುತ್ತದೆ.
ವೃಶ್ಚಿಕ ರಾಶಿ: ಕೆಲವೊಂದು ಕೆಲಸದಲ್ಲಿ ಅಡೆತಡೆಗಳು ಎದುರಾಗಬಹುದು. ಕೋಪವನ್ನು ನಿಯಂತ್ರಿಸಿ ಇಂದು ತಾಳ್ಮೆಯಿಂದ ಇದ್ದರೆ ಉತ್ತಮ. ವಾಹನ ಚಲಾಯಿಸುವಾಗ ಎಚ್ಚರಿಕೆ.
ಧನು ರಾಶಿ: ಈ ರಾಶಿಯವರಿಗೆ ಇಂದು ಧಾರ್ಮಿಕ ಚಿಂತನೆ ಹೆಚ್ಚಾಗುವ ಸಾಧ್ಯತೆ ಇದೆ. ಗುರು ಹಿರಿಯರ ಆಶೀರ್ವಾದದಿಂದ ಕೆಲಸಗಳು ಪೂರ್ಣ ಆಗುತ್ತವೆ.
ಮಕರ ರಾಶಿ: ಈ ರಾಶಿಯವರಿಗೆ ಕೆಲಸದ ಜವಾಬ್ದಾರಿ ಹೆಚ್ಚಾಗಿರುತ್ತದೆ. ಆದರೆ ಬುದ್ದಿವಂತಿಕೆ ಉಪಯೋಗಿಸಿ ಮಾಡುವ ಕೆಲಸದಲ್ಲಿ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ.
ಕುಂಭ ರಾಶಿ: ಹೊಸ ಯೋಜನೆಗಳಿಗೆ ಕೈ ಹಾಕಲು ಇಂದು ಉತ್ತಮ ದಿನವಾಗಲಿದೆ. ಕ್ರಿಯೇಟಿವ್ ಐಡಿಯಾಗಳಿಗೆ ಇಂದು ಬೆಲೆ ಸಿಗುತ್ತದೆ.
ಮೀನ ರಾಶಿ: ಈ ರಾಶಿಯವರ ಮನಸ್ಸು ಸ್ವಲ್ಪ ಗೊಂದಲದಲ್ಲಿರುತ್ತದೆ. ಹಾಗಾಗಿ ಯಾವುದೇ ಮುಖ್ಯ ನಿರ್ಧಾರ ಇಂದು ಕೈಗೊಳ್ಳಲು ಹೋಗುವುದು ಒಳಿತಲ್ಲ.